Tejas Movie: ಸದ್ದಿಲ್ಲದೇ ‘ತೇಜಸ್​’ ಸಿನಿಮಾ ರಿಲೀಸ್​ ದಿನಾಂಕ ತಿಳಿಸಿದ ನಟಿ ಕಂಗನಾ ರಣಾವತ್​

|

Updated on: Jul 05, 2023 | 11:14 AM

Kangana Ranaut: ಕಂಗನಾ ರಣಾವತ್​ ನಟನೆಯ ‘ತೇಜಸ್​’ ಸಿನಿಮಾ ಅಕ್ಟೋಬರ್​ 20ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Tejas Movie: ಸದ್ದಿಲ್ಲದೇ ‘ತೇಜಸ್​’ ಸಿನಿಮಾ ರಿಲೀಸ್​ ದಿನಾಂಕ ತಿಳಿಸಿದ ನಟಿ ಕಂಗನಾ ರಣಾವತ್​
ಕಂಗನಾ ರಣಾವತ್​
Follow us on

ನಟಿ ಕಂಗನಾ ರಣಾವತ್​ (Kangana Ranaut) ಅವರು ವಿವಾದಗಳಲ್ಲಿ ಎಷ್ಟೇ ತೊಡಗಿಕೊಂಡಿದ್ದರೂ ಕೂಡ ಸಿನಿಮಾ ಕೆಲಸಗಳನ್ನು ವಿಳಂಬ ಮಾಡಿಕೊಳ್ಳುವುದಿಲ್ಲ. ಅವರು ನಟಿಸಿರುವ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ಗೆ ಸಿದ್ಧವಾಗಿವೆ. ‘ತೇಜಸ್​’ (Tejas) ಸಿನಿಮಾದಲ್ಲಿ ಕಂಗನಾ ರಣಾವತ್​ ಅವರು ವಾಯು ಸೇನೆಯ ಪೈಲೆಟ್​ ಆಗಿ ನಟಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಈಗ ಏಕಾಏಕಿ ರಿಲೀಸ್​ ದಿನಾಂಕ ಘೋಷಿಸಲಾಗಿದೆ. ಅಕ್ಟೋಬರ್​ 20ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಕಂಗನಾ ರಣಾವತ್​ ಅವರ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ.

ಸರ್ವೇಶ್​ ಮೇವರಾ ಅವರು ‘ತೇಜಸ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಕಂಗನಾ ರಣಾವತ್​ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಂಗನಾ ನಟಿಸಿದ ಇತ್ತೀಚಿನ ಸಿನಿಮಾಗಳು ಯಾವುದೂ ಗೆದ್ದಿಲ್ಲ. ‘ಧಾಕಡ್​’ ಚಿತ್ರ ಹೀನಾಯವಾಗಿ ಸೋತಿತ್ತು. ಈಗ ಅವರು ‘ತೇಜಸ್​’ ಮೂಲಕವಾದರೂ ಗೆಲ್ಲುತ್ತಾರಾ ಎಂಬುದನ್ನು ಕಾದುನೋಡಬೇಕು. ರಿಲೀಸ್​ ಡೇಟ್​ ಅನೌನ್ಸ್​ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವಾಯು ಸೇನೆಯ ಪೈಲೆಟ್​ಗಳಿಗೆ ಈ ಸಿನಿಮಾದ ಮೂಲಕ ಗೌರವ ಸಲ್ಲಿಸುವುದಾಗಿ ಕಂಗನಾ ರಣಾವತ್​ ಅವರು ಟ್ವೀಟ್​ ಮಾಡಿದ್ದಾರೆ.

ಕಂಗನಾ ರಣಾವತ್​ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಾಯು ಸೇನೆಯ ಪೈಲೆಟ್​ ಆಗಿ ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಮನೆ ಮಾಡಿದೆ. ಅಕ್ಟೋಬರ್​ 20ರಂದು ‘ತೇಜಸ್​’ ಚಿತ್ರದ ಎದುರು ‘ಗಣಪತ್​ ಪಾರ್ಟ್​ 1’ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಹಾಗೂ ಟೈಗರ್​ ಶ್ರಾಫ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಇದನ್ನೂ ಓದಿ: ಹೀನಾಯವಾಗಿ ಸೋತ ತಮ್ಮ ಚಿತ್ರವನ್ನು ಸೂಪರ್ ಹಿಟ್ ಎಂದು ಘೋಷಿಸಿಕೊಂಡ ನಟಿ ಕಂಗನಾ ರಣಾವತ್

ಇನ್ನು, ಕಂಗನಾ ರಣಾವತ್​ ಅವರು ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆ ಸಿನಿಮಾ ನವೆಂಬರ್​ 24ಕ್ಕೆ ರಿಲೀಸ್​ ಆಗಲಿದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತು ಆ ಸಿನಿಮಾ ಸಿದ್ದವಾಗಿದ್ದು, ಸ್ವತಃ ಕಂಗನಾ ರಣಾವತ್​ ಅವರು ನಿರ್ದೇಶನ ಮಾಡಿದ್ದಾರೆ. ಇಂದಿರಾ ಗಾಂಧಿಯ ಪಾತ್ರದಲ್ಲಿನ ಅವರ ಪೋಸ್ಟರ್​ಗಳು ಈಗಾಗಲೇ ವೈರಲ್​ ಆಗಿವೆ. ಅನೇಕ ಅನುಭವಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.