Rocky Aur Rani Ki Prem Kahani: ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಟ್ರೇಲರ್​​; ಕರಣ್​ ಜೋಹರ್​ ಅದ್ದೂರಿತನಕ್ಕೆ ಇಲ್ಲಿದೆ ಸಾಕ್ಷಿ

Rocky Aur Rani Ki Prem Kahani Trailer: ಆಲಿಯಾ ಭಟ್​, ರಣವೀರ್​ ಸಿಂಗ್​ ನಟನೆಯ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದ ಟ್ರೇಲರ್​​ ಬಿಡುಗಡೆ ಆಗಿದೆ. ಟ್ರೇಲರ್​ ನೋಡಿದ ಪ್ರೇಕ್ಷಕರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ.

Rocky Aur Rani Ki Prem Kahani: ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಟ್ರೇಲರ್​​; ಕರಣ್​ ಜೋಹರ್​ ಅದ್ದೂರಿತನಕ್ಕೆ ಇಲ್ಲಿದೆ ಸಾಕ್ಷಿ
‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 04, 2023 | 4:18 PM

ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್​ (Karan Johar) ಅವರು ಹೊಸ ಸಿನಿಮಾ ಮೂಲಕ ಜನರ ಎದುರು ಬರಲು ಸಜ್ಜಾಗಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahani) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್ (Ranveer Singh)​ ಅವರು ಜೋಡಿಯಾಗಿ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಟೀಸರ್​ ಬಿಡುಗಡೆ ಮಾಡಲಾಗಿತ್ತು. ಈಗ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಟ್ರೇಲರ್​ ಸಖತ್​ ಸದ್ದು ಮಾಡುತ್ತಿದೆ. ಬಾಲಿವುಡ್​ ಗಲ್ಲಾಪೆಟ್ಟಿಗೆಗೆ ಈ ಸಿನಿಮಾದಿಂದ ಹೊಸ ಚೈತನ್ಯ ಸಿಗುವ ಸೂಚನೆ ಕಾಣಿಸುತ್ತಿದೆ.

ಕರಣ್​ ಜೋಹರ್​ ಅವರ ಸಿನಿಮಾಗಳಲ್ಲಿ ಅದ್ದೂರಿತನ ಇರುತ್ತದೆ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲೂ ಅದು ಮುಂದುವರಿದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಗ್ರ್ಯಾಂಡ್​ ಆದಂತಹ ಸೆಟ್​ಗಳು, ವಿದೇಶದ ಲೊಕೇಷನ್​ಗಳು, ನೂರಾರು ಡ್ಯಾನ್ಸರ್​ಗಳು, ಝಗಮಗಿಸುವ ಲೈಟಿಂಗ್​, ಮಿರಿ ಮಿರಿ ಮಿಂಚುವ ಕಾಸ್ಟ್ಯೂಮ್​ಗಳು, ಘಟಾನುಘಟಿ ಕಲಾವಿದರನ್ನು ಒಳಗೊಂಡ ಪಾತ್ರವರ್ಗ.. ಹೀಗೆ ಎಲ್ಲವೂ ಈ ಸಿನಿಮಾದಲ್ಲಿ ಅದ್ದೂರಿಯಾಗಿದೆ. ಜೊತೆಗೆ ಒಂದು ಮಸ್ತ್​ ಮನರಂಜನೆ ನೀಡುವ ಕಹಾನಿ ಕೂಡ ಈ ಸಿನಿಮಾದಲ್ಲಿ ಇದೆ ಎಂಬುದನ್ನು ಟ್ರೇಲರ್​ ಸೂಚಿಸುತ್ತಿದೆ.

View this post on Instagram

A post shared by Karan Johar (@karanjohar)

‘ಗಲ್ಲಿ ಬಾಯ್​’ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಅವರು ಜೋಡಿಯಾಗಿ ನಟಿಸಿದ್ದರು. ಈಗ ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದಾರೆ. ಬೇರೆ ಬೇರೆ ಹಿನ್ನೆಲೆ ಮತ್ತು ಸ್ವಭಾವನನ್ನು ಹೊಂದಿರುವ ಪ್ರೇಮಿಗಳಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಕಾಮಿಡಿ ದೃಶ್ಯಗಳು ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಟ್ರೇಲರ್​ ನೋಡಿದ ಪ್ರೇಕ್ಷಕರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Karan Johar: ಬ್ರಿಟನ್​ ಪಾರ್ಲಿಮೆಂಟ್​ನಲ್ಲಿ ಕರಣ್​ ಜೋಹರ್​ಗೆ ಸಿಗಲಿದೆ ವಿಶೇಷ ಗೌರವ

ಜುಲೈ 28ರಂದು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್​, ರಣವೀರ್​ ಸಿಂಗ್ ಮಾತ್ರವಲ್ಲದೇ ಧರ್ಮೇಂದ್ರ, ಜಯಾ ಬಚ್ಚನ್​, ಶಬ್ನಾ ಆಜ್ಮಿ, ರೋನಿತ್​ ರಾಯ್​, ಸಾಸ್ವತ ಚಟರ್ಜಿ, ಕರ್ಮವೀರ್​ ಚೌದರಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ದೊಡ್ಡ ಗ್ಯಾಪ್​ ಬಳಿಕ ಕರಣ್​ ಜೋಹರ್​ ಅವರು ನಿರ್ದೇಶನ ಮಾಡಿರುವುದರಿಂದ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.