Tejas Movie: ಸದ್ದಿಲ್ಲದೇ ‘ತೇಜಸ್’ ಸಿನಿಮಾ ರಿಲೀಸ್ ದಿನಾಂಕ ತಿಳಿಸಿದ ನಟಿ ಕಂಗನಾ ರಣಾವತ್
Kangana Ranaut: ಕಂಗನಾ ರಣಾವತ್ ನಟನೆಯ ‘ತೇಜಸ್’ ಸಿನಿಮಾ ಅಕ್ಟೋಬರ್ 20ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ನಟಿ ಕಂಗನಾ ರಣಾವತ್ (Kangana Ranaut) ಅವರು ವಿವಾದಗಳಲ್ಲಿ ಎಷ್ಟೇ ತೊಡಗಿಕೊಂಡಿದ್ದರೂ ಕೂಡ ಸಿನಿಮಾ ಕೆಲಸಗಳನ್ನು ವಿಳಂಬ ಮಾಡಿಕೊಳ್ಳುವುದಿಲ್ಲ. ಅವರು ನಟಿಸಿರುವ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ಗೆ ಸಿದ್ಧವಾಗಿವೆ. ‘ತೇಜಸ್’ (Tejas) ಸಿನಿಮಾದಲ್ಲಿ ಕಂಗನಾ ರಣಾವತ್ ಅವರು ವಾಯು ಸೇನೆಯ ಪೈಲೆಟ್ ಆಗಿ ನಟಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಈಗ ಏಕಾಏಕಿ ರಿಲೀಸ್ ದಿನಾಂಕ ಘೋಷಿಸಲಾಗಿದೆ. ಅಕ್ಟೋಬರ್ 20ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಕಂಗನಾ ರಣಾವತ್ ಅವರ ಪೋಸ್ಟರ್ಗಳು ಗಮನ ಸೆಳೆಯುತ್ತಿವೆ.
ಸರ್ವೇಶ್ ಮೇವರಾ ಅವರು ‘ತೇಜಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಕಂಗನಾ ರಣಾವತ್ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಂಗನಾ ನಟಿಸಿದ ಇತ್ತೀಚಿನ ಸಿನಿಮಾಗಳು ಯಾವುದೂ ಗೆದ್ದಿಲ್ಲ. ‘ಧಾಕಡ್’ ಚಿತ್ರ ಹೀನಾಯವಾಗಿ ಸೋತಿತ್ತು. ಈಗ ಅವರು ‘ತೇಜಸ್’ ಮೂಲಕವಾದರೂ ಗೆಲ್ಲುತ್ತಾರಾ ಎಂಬುದನ್ನು ಕಾದುನೋಡಬೇಕು. ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವಾಯು ಸೇನೆಯ ಪೈಲೆಟ್ಗಳಿಗೆ ಈ ಸಿನಿಮಾದ ಮೂಲಕ ಗೌರವ ಸಲ್ಲಿಸುವುದಾಗಿ ಕಂಗನಾ ರಣಾವತ್ ಅವರು ಟ್ವೀಟ್ ಮಾಡಿದ್ದಾರೆ.
Honouring the bravery of our heroic Air Force Pilots! Tejas, releasing in cinemas on 20th October ?? ✈️@sarveshmewara1 @varunmitra19 @anshul14chauhan @RonnieScrewvala @RSVPMovies pic.twitter.com/oVqQunIlld
— Kangana Ranaut (@KanganaTeam) July 5, 2023
ಕಂಗನಾ ರಣಾವತ್ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಾಯು ಸೇನೆಯ ಪೈಲೆಟ್ ಆಗಿ ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಮನೆ ಮಾಡಿದೆ. ಅಕ್ಟೋಬರ್ 20ರಂದು ‘ತೇಜಸ್’ ಚಿತ್ರದ ಎದುರು ‘ಗಣಪತ್ ಪಾರ್ಟ್ 1’ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಟೈಗರ್ ಶ್ರಾಫ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.
ಇದನ್ನೂ ಓದಿ: ಹೀನಾಯವಾಗಿ ಸೋತ ತಮ್ಮ ಚಿತ್ರವನ್ನು ಸೂಪರ್ ಹಿಟ್ ಎಂದು ಘೋಷಿಸಿಕೊಂಡ ನಟಿ ಕಂಗನಾ ರಣಾವತ್
ಇನ್ನು, ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆ ಸಿನಿಮಾ ನವೆಂಬರ್ 24ಕ್ಕೆ ರಿಲೀಸ್ ಆಗಲಿದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತು ಆ ಸಿನಿಮಾ ಸಿದ್ದವಾಗಿದ್ದು, ಸ್ವತಃ ಕಂಗನಾ ರಣಾವತ್ ಅವರು ನಿರ್ದೇಶನ ಮಾಡಿದ್ದಾರೆ. ಇಂದಿರಾ ಗಾಂಧಿಯ ಪಾತ್ರದಲ್ಲಿನ ಅವರ ಪೋಸ್ಟರ್ಗಳು ಈಗಾಗಲೇ ವೈರಲ್ ಆಗಿವೆ. ಅನೇಕ ಅನುಭವಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.