ಕಂಗನಾ ರಣಾವತ್ ಚಿತ್ರಕ್ಕೆ ಸಂಕಷ್ಟ; ಆರು ಕೋಟಿ ರೂ. ಹಿಂದಿರುಗಿಸಲು ಬೇಡಿಕೆ ಇಟ್ಟ ಹಂಚಿಕೆದಾರ

|

Updated on: Mar 22, 2023 | 11:51 AM

ಡಿಸ್ಟ್ರಿಬ್ಯೂಷನ್ ಕಂಪನಿ ನಿರ್ಮಾಪಕರಿಗೆ 6 ಕೋಟಿ ರೂಪಾಯಿ ಪೇಮೆಂಟ್ ಮಾಡಿ ಸಿನಿಮಾ ಹಂಚಿಕೆ ಹಕ್ಕು ಪಡೆದಿತ್ತು. ಆದರೆ, ಈ ಚಿತ್ರದಿಂದ ಹಂಚಿಕೆದಾರರಿಗೆ ನಷ್ಟ ಆಗಿದೆ.

ಕಂಗನಾ ರಣಾವತ್ ಚಿತ್ರಕ್ಕೆ ಸಂಕಷ್ಟ; ಆರು ಕೋಟಿ ರೂ. ಹಿಂದಿರುಗಿಸಲು ಬೇಡಿಕೆ ಇಟ್ಟ ಹಂಚಿಕೆದಾರ
ಕಂಗನಾ
Follow us on

ನಟಿ ಕಂಗನಾ ರಣಾವತ್ (Kangana Ranaut) ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಅವರು ಮಾಡಿದ ಯಾವ ಸಿನಿಮಾಗಳೂ ಕೆಲಸ ಮಾಡುತ್ತಿಲ್ಲ. ಈಗ ಅವರು ತಾವು ದುಡಿದ ಹಣವೆಲ್ಲವನ್ನೂ ‘ಎಮರ್ಜೆನ್ಸಿ’ ಚಿತ್ರದ ಮೇಲೆ ಹೂಡಿಕೆ ಮಾಡಿದ್ದಾರೆ. ಈ ಮಧ್ಯೆ ಅವರ ಸಿನಿಮಾ ಸಂಕಷ್ಟದಲ್ಲಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನದ ಕುರಿತು ಸಿದ್ಧವಾದ ‘ತಲೈವಿ’ (Thalaivi Movie) ಸಿನಿಮಾ ಸಂಕಷ್ಟದಲ್ಲಿದೆ. ಈ ಚಿತ್ರದ ಹಂಚಿಕೆದಾರರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 6 ಕೋಟಿ ರೂಪಾಯಿ ನೀಡುವಂತೆ ಅವರು ಕೋರಿದ್ದಾರೆ.

ಜಯಲಲಿತಾ ನಟಿಯಾಗಿ, ರಾಜಕಾರಣಿಯಾಗಿ ಯಶಸ್ಸು ಕಂಡವರು. ಅವರ ಜೀವನದಲ್ಲಿ ಸಾಕಷ್ಟು ಏಳಬೀಳುಗಳು ಇದ್ದವು. ಇದನ್ನು ಸಿನಿಮಾ ಮಾಡಲಾಯಿತು. 2021ರ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ರಿಲೀಸ್ ಆಯಿತು. ಈ ಸಿನಿಮಾ ಸೋಲು ಕಂಡಿತು. ಬಾಕ್ಸ್ ಆಫೀಸ್​ನಲ್ಲಿ ಚಿತ್ರ ಸದ್ದು ಮಾಡಿಲ್ಲ. ಈ ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಈ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ‘ತಲೈವಿ’ ಹಂಚಿಕೆದಾರರು 6 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಆಗಿದೆ.

ಡಿಸ್ಟ್ರಿಬ್ಯೂಷನ್ ಕಂಪನಿ ‘ತಲೈವಿ’ ನಿರ್ಮಾಪಕರಿಗೆ 6 ಕೋಟಿ ರೂಪಾಯಿ ಪೇಮೆಂಟ್ ಮಾಡಿ ಹಂಚಿಕೆ ಹಕ್ಕು ಪಡೆದಿತ್ತು. ಆದರೆ, ಈ ಚಿತ್ರದಿಂದ ಹಂಚಿಕೆದಾರರಿಗೆ ನಷ್ಟ ಆಗಿದೆ. ಹಣ ಹಿಂದಿರುಗಿಸುವಂತೆ ನಿರ್ಮಾಣ ಸಂಸ್ಥೆಗೆ ಡಿಸ್ಟ್ರಿಬ್ಯೂಷನ್ ಕಂಪನಿ ಇ-ಮೇಲ್ ಕಳುಹಿಸಿದೆ ಎನ್ನಲಾಗಿದೆ. ಆದರೆ, ಅವರಿಗೆ ನಿರ್ಮಾಣ ಸಂಸ್ಥೆಯಿಂದ ಅವರಿಗೆ ಯಾವುದೇ ಉತ್ತರ ಬಂದಿಲ್ಲ. ಸದ್ಯ ಈ ವಿಚಾರದಲ್ಲಿ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಹಂಚಿಕೆದಾರರು ‘ತಲೈವಿ’ ನಿರ್ಮಾಪಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kangana Ranaut: ಸತತ ಸೋಲಿನ ಬಳಿಕ ಬೇರೆ ಬಿಸ್ನೆಸ್​ ಮಾಡಲು ನಿರ್ಧರಿಸಿದ್ದ ಕಂಗನಾ; ಅದಕ್ಕೂ ಸಾಕಾಗಲಿಲ್ಲ ಹಣ

ಕಂಗನಾ ನಟನೆಯ ‘ಧಾಕಡ್​’ ಸಿನಿಮಾ ಕೂಡ ಸೋಲು ಕಂಡಿತು. 80 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಸಿನಿಮಾ 2.58 ಕೋಟಿ ರೂಪಾಯಿ ಅಷ್ಟೇ ಕಲೆಕ್ಷನ್ ಮಾಡಿತು. ಈ ಚಿತ್ರದಿಂದ ದೊಡ್ಡ ಮೊತ್ತದ ನಷ್ಟ ಉಂಟಾಗಿತ್ತು. ಈ ಚಿತ್ರದಿಂದ ನಿರ್ಮಾಪಕರಿಗೆ ಸುಮಾರು 78 ಕೋಟಿ ರೂಪಾಯಿ ಲಾಸ್ ಆಗಿದೆ ಎನ್ನಲಾಗಿದೆ.

‘ಎಮರ್ಜೆನ್ಸಿ’ ಚಿತ್ರದ ಮೇಲೆ ಕಂಗನಾ ರಣಾವತ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಲವು ಘಟಾನುಘಟಿಗಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಬಣ್ಣ ಹಚ್ಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:51 am, Wed, 22 March 23