ವಯಸ್ಸಾದವರಿಗೂ ಇವರು ‘ಕಿಡ್ಸ್’ ಅಂತಾರೆ; ಸ್ಟಾರ್ ಮಕ್ಕಳ ಬಗ್ಗೆ ಕಂಗನಾ ನೇರ ಟೀಕೆ

| Updated By: ರಾಜೇಶ್ ದುಗ್ಗುಮನೆ

Updated on: Dec 13, 2024 | 9:30 AM

ಕಂಗನಾ ರಣಾವತ್ ಅವರು ನೆಪೋಟಿಸಂ ಬಗ್ಗೆ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ಅವರು ಅನೇಕ ಬಾಡಿ ನೆಪೋ ಕಿಡ್​ಗಳ ಬಗ್ಗೆ ಅಪಸ್ವರ ತೆಗೆದಿದ್ದು ಇದೆ. ಇದನ್ನು ಅವರು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಅವರಿಗೆ ಬಾಲಿವುಡ್​ನಲ್ಲಿ ಬಹುತೇಕರನ್ನು ಕಂಡರೆ ಆಗೋದಿಲ್ಲ. ಈ ಕುರಿತು ಸಂದರ್ಶನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಹೇಳುತ್ತಾ ಇರುತ್ತಾರೆ.

ವಯಸ್ಸಾದವರಿಗೂ ಇವರು ‘ಕಿಡ್ಸ್’ ಅಂತಾರೆ; ಸ್ಟಾರ್ ಮಕ್ಕಳ ಬಗ್ಗೆ ಕಂಗನಾ ನೇರ ಟೀಕೆ
ಕಂಗನಾ-ರಣಬೀರ್
Follow us on

ಕಂಗನಾ ರಣಾವತ್ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದವರು. ಈಗ ಅವರು ಚಿತ್ರರಂಗ ಬಿಟ್ಟು ಸಂಸದೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಅವರು ಸಂಸದೆ ಆಗಿದ್ದಾರೆ. ಹೀಗಿರುವಾಗಲೇ ಅವರು ಬಾಲಿವುಡ್​ನಿಂದ ಸಂಪೂರ್ಣ ದೂರ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಸೆಲೆಬ್ರಿಟಿ ಮಕ್ಕಳ ಬಗ್ಗೆ ಟೀಕೆ ಮಾಡಿದ್ದಾರೆ.

ಕಂಗನಾ ರಣಾವತ್ ಅವರು ನೆಪೋಟಿಸಂ ಬಗ್ಗೆ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ಅವರು ಅನೇಕ ಬಾಡಿ ನೆಪೋ ಕಿಡ್​ಗಳ ಬಗ್ಗೆ ಅಪಸ್ವರ ತೆಗೆದಿದ್ದು ಇದೆ. ಇದನ್ನು ಅವರು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಅವರಿಗೆ ಬಾಲಿವುಡ್​ನಲ್ಲಿ ಬಹುತೇಕರನ್ನು ಕಂಡರೆ ಆಗೋದಿಲ್ಲ. ಈ ಕುರಿತು ಸಂದರ್ಶನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಹೇಳುತ್ತಾ ಇರುತ್ತಾರೆ.

‘40 ವರ್ಷ ಆಗಿದೆ. 30 ವರ್ಷ ದಾಟಿದ ನಟಿಯರಿದ್ದಾರೆ. ಅವರಿಗೆ ಕಿಡ್​ ಎನ್ನುತ್ತಾರೆ. ಅದು ಹೇಗನ್ನಿಸಬೇಡ? 40 ವರ್ಷದ ವ್ಯಕ್ತಿ ಮಕ್ಕಳಂತೆ ಮಾತನಾಡಿದರೆ ನಿಮಗೆ ಹೇಗೆ ಅನಿಸುತ್ತದೆ ಹೇಳಿ’ ಎಂದು ಕಂಗನಾ ಅವರು ನೇರ ಪ್ರಶ್ನೆ ಮಾಡಿದ್ದಾರೆ. 25 ವರ್ಷ ದಾಟಿದವರೂ ಅವರಿನ್ನೂ ಸ್ಟಾರ್​ ಕಿಡ್’ ಎಂದಿರೋ ಕಂಗನಾ ಅವರು, ಅನನ್ಯಾ ಪಾಂಡೆಗೆ ಟಾಂಟ್ ಕೊಟ್ಟಿದ್ದಾರೆ.

ಸೆಲೆಬ್ರಿಟಿ ಮಕ್ಕಳಿಗೆ ಬಾಲಿವುಡ್​ನಲ್ಲಿ ಎಲ್ಲವೂ ವ್ಯವಸ್ಥಿತವಾಗಿದೆ ಎಂಬ ಆರೋಪ ಕಂಗನಾ ರಣಾವತ್ ಅವರದ್ದು. ಅವರು ನೆಪೋಟಿಸಂನ ಟೀಕಿಸುತ್ತಾ ಬರುತ್ತಿದ್ದಾರೆ. ಈ ಕಾರಣದಿಂದಲೂ ಕಂಗನಾ ರಣಾವತ್ ಅವರು ಬಾಲಿವುಡ್​ನಲ್ಲಿ ಅನೇಕರ ದ್ವೇಷ ಕಟ್ಟಿಕೊಂಡಿದ್ದಾರೆ. ಅವರು ಕಷ್ಟದಿಂದ ಬಂದಿರೋದರಿಂದ ಇದೆಲ್ಲ ತಪ್ಪಾಗಿ ಅವರಿಗೆ ಕಾಣುತ್ತಿದೆ.

ಇದನ್ನೂ ಓದಿ: ಮದುವೆಯಲ್ಲಿ ಶೇ. 99ರಷ್ಟು ಪುರುಷರದೇ ತಪ್ಪಿರುತ್ತೆ; ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್​ ಆತ್ಮಹತ್ಯೆ ಬಗ್ಗೆ ಕಂಗನಾ ರಣಾವತ್ ಪ್ರತಿಕ್ರಿಯೆ

ಕಂಗನಾ ರಣಾವತ್ ಅವರಿಗೆ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರು ಈಗ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಅಂದುಕೊಂಡಂತೆ ನಡೆದಿದ್ದರೆ ಈ ಮೊದಲೇ ರಿಲೀಸ್ ಆಗಬೇಕಿತ್ತು. ಆದರೆ, ವಿಳಂಬ ಆಯಿತು. ಸೆನ್ಸಾರ್ ಪತ್ರ ಸಿಗಲು ಅವರಿಗೆ ವಿಳಂಬ ಆಗಿದೆ. ಈಗ ಸಿನಿಮಾ ರಿಲೀಸ್ ಮಾಡಲು ರೆಡಿ ಇದ್ದಾರೆ. ಇದರ ರಿಲೀಸ್ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:30 am, Fri, 13 December 24