‘ಚಿತ್ರಂಗಕ್ಕೆ ಬರಬೇಡಿ’; ಐಶ್ವರ್ಯಾಗೆ ಸೂಚನೆ ಕೂಟ್ಟಿದ್ದ ಸಂಜಯ್ ದತ್

ಐಶ್ವರ್ಯಾ ರೈ ಅವರು ಚಿತ್ರರಂಗಕ್ಕೆ ಬರುವ ಮುನ್ನ ಸಂಜಯ್ ದತ್ ಅವರು ಅವರಿಗೆ ಬಾಲಿವುಡ್‌ನಿಂದ ದೂರವಿರಲು ಸಲಹೆ ನೀಡಿದ್ದರು ಎಂಬುದು ಕಡಿಮೆ ಜನರಿಗೆ ತಿಳಿದಿರುವ ಸಂಗತಿ. ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿದ್ದ ಐಶ್ವರ್ಯಾ ಅವರ ಸೌಂದರ್ಯಕ್ಕೆ ಮನಸೋತ ಸಂಜಯ್ ದತ್, ಚಿತ್ರರಂಗದ ಸ್ಪರ್ಧೆ ಮತ್ತು ಅದರ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರು.

‘ಚಿತ್ರಂಗಕ್ಕೆ ಬರಬೇಡಿ’; ಐಶ್ವರ್ಯಾಗೆ ಸೂಚನೆ ಕೂಟ್ಟಿದ್ದ ಸಂಜಯ್ ದತ್
ಸಂಜಯ್-ಐಶ್ವರ್ಯಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 13, 2024 | 9:00 AM

ಐಶ್ವರ್ಯಾ ರೈ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದ ಅವರು ನಂತರ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದರು. ಈಗ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಬಚ್ಚನ್ ಕುಟುಂಬದ ಸೊಸೆ ಕೂಡ ಹೌದು. ಈ ರೀತಿ ಹೆಸರು ಮಾಡಿರೋ ಅವರು ಐಶ್ವರ್ಯಾ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೆ, ಅವರು ಚಿತ್ರರಂಗಕ್ಕೆ ಬರಬಾರದು ಎಂಬುದು ಸಂಜಯ್ ದತ್ ಅವರ ಕೋರಿಕೆ ಆಗಿತ್ತು. ಸಂದರ್ಶನ ಒಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು ಎಂಬ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ ಓದಿ.

ಮ್ಯಾಗಜೀನ್ ಫೋಟೋಶೂಟ್ ಸಮಯದಲ್ಲಿ ಐಶ್ವರ್ಯಾ ರೈ ಮೊದಲು ಸಂಜಯ್ ದತ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಅವರು ನಟಿಯಾಗಿರಲಿಲ್ಲ. ಐಶ್ವರ್ಯಾ ರೈ ಸೌಂದರ್ಯ ನೋಡಿದ ಸಂಜಯ್ ದತ್ ಫಿದಾ ಆದರು. ಹಳೆಯ ಸಂದರ್ಶನವೊಂದರಲ್ಲಿ, ಸಂಜಯ್ ದತ್ ಅವರು ಐಶ್ವರ್ಯಾ ಅವರೊಂದಿಗಿನ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದರು. ಐಶ್ವರ್ಯಾ ಅವರನ್ನು ನೋಡಿದ ಸಂಜಯ್ ದತ್, ‘ಯಾರು ಈ ಸುಂದರ ಹುಡುಗಿ’ ಎಂದು ಕೇಳಿದ್ದರಂತೆ.

ಆ ವೇಳೆ ಐಶ್ವರ್ಯಾ ರೈಗೆ ಸಂಜಯ್ ದತ್ ಸಲಹೆ ನೀಡಿದ್ದರು. ‘ನೀವು ಮಾಡೆಲಿಂಗ್ ವೃತ್ತಿಯನ್ನು ಮುಂದುವರಿಸಿ. ಚಿತ್ರರಂಗದಿಂದ ದೂರವಿರಿ’ ಎಂದು ಸೂಚಿಸಿದ್ದರು. ವರದಿಗಳ ಪ್ರಕಾರ, ಐಶ್ವರ್ಯಾ ಅವರಲ್ಲಿ ಕಂಡ ಮುಗ್ಧತೆ ಸಂಜಯ್ ದತ್ ಅವರ ಹೃದಯವನ್ನು ಗೆದ್ದಿತ್ತು. ಹೀಗಾಗಿ, ‘ನೀವು ಚಿತ್ರರಂಗದಿಂದ ದೂರ ಇರಿ. ಈ ಕ್ಷೇತ್ರವು ನಿಮ್ಮನ್ನು ಬದಲಾಯಿಸುತ್ತದೆ. ಇಂಡಸ್ಟ್ರಿಯಲ್ಲಿನ ಸವಾಲುಗಳನ್ನು ಎದುರಿಸಿದಾಗ ನಿಮ್ಮ ಚಾರ್ಮ್ ಮತ್ತು ಮ್ಯಾಜಿಕ್ ಕಡಿಮೆಯಾಗುತ್ತದೆ’ ಎಂದು ಸಂಜಯ್ ದತ್ ಹೇಳಿದ್ದರು.

ಇದನ್ನೂ ಓದಿ: ಐಶ್ವರ್ಯಾ ರೈ ಡಿವೋರ್ಸ್​ ವದಂತಿಗೆ ಫುಲ್ ಸ್ಟಾಪ್; ಈ ಫೋಟೋದಲ್ಲಿದೆ ಅಸಲಿ ವಿಷಯ

‘ನೀವು ಈ ಗ್ಲಾಮರ್ ಉದ್ಯಮಕ್ಕೆ ಕಾಲಿಟ್ಟಾಗ, ಈ ಉದ್ಯಮವು ನಿಮ್ಮನ್ನು ಬದಲಾಯಿಸುತ್ತದೆ. ಅದು ನಿಮ್ಮನ್ನು ಪ್ರಬುದ್ಧರನ್ನಾಗಿ ಮಾಡುತ್ತದೆ, ನಿಮ್ಮ ಮುಗ್ಧತೆಯನ್ನು ಕಳೆದುಕೊಳ್ಳುತ್ತೀರಿ’ ಎಂದು ಸಂಜಯ್ ದತ್ ಆಗ ಹೇಳಿದ್ದರು.  ಅವರು ಹೇಳಿದ್ದು ನಿಜವಾಗಿದೆಯೋ ಇಲ್ಲವೋ, ಚಿತ್ರರಂಗಕ್ಕೆ ಒಂದೊಳ್ಳೆಯ ನಟಿ ಸಿಕ್ಕಿದ್ದಾರೆ. ಐಶ್ವರ್ಯಾ ಅವರು ಸ್ಟಾರ್ ನಟಿಯಾಗಿ ಮೆರೆದಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ, ಅವರು ಮೊದಲಿನಷ್ಟು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ