ಲಿಪ್‌ಲಾಕ್ ದೃಶ್ಯದಲ್ಲಿ ಸಹ ಕಲಾವಿದನಿಗೆ ಗಾಯ ಮಾಡಿದರಾ ಕಂಗನಾ?

2014ರ 'ರಿವಾಲ್ವರ್ ರಾಣಿ' ಚಿತ್ರದ ಕಂಗನಾ-ವೀರ್ ದಾಸ್ ಲಿಪ್ ಲಾಕ್ ದೃಶ್ಯದ ಬಗ್ಗೆ ಹಳೆಯ ವದಂತಿ ಮತ್ತೆ ವೈರಲ್ ಆಗಿದೆ. ಶೂಟಿಂಗ್ ವೇಳೆ ಕಂಗನಾ ವೀರ್ ದಾಸ್ ತುಟಿಗೆ ಕಚ್ಚಿ ಗಾಯಗೊಳಿಸಿದ್ದರು ಎಂಬ ಆರೋಪವನ್ನು ನಟ ವೀರ್ ದಾಸ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಕಂಗನಾ ವೃತ್ತಿಪರರು ಎಂದು ಹೇಳಿ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಂಗನಾ ಧನ್ಯವಾದ ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ಯ ಈಗ ಸ್ಪಷ್ಟವಾಗಿದೆ.

ಲಿಪ್‌ಲಾಕ್ ದೃಶ್ಯದಲ್ಲಿ ಸಹ ಕಲಾವಿದನಿಗೆ ಗಾಯ ಮಾಡಿದರಾ ಕಂಗನಾ?
ಕಂಗನಾ

Updated on: Jun 29, 2026 | 11:00 AM

ಮುಖ್ಯಾಂಶಗಳು

  • ಲಿಪ್​ ಲಾಕ್ ದೃಶ್ಯದ ವೇಳೆ ಕಂಗನಾ ಸಹನಟನಿಗೆ ಕಚ್ಚಿದ ಆರೋಪ
  • ನಟ ವೀರ್ ದಾಸ್ ಅವರಿಂದ ಸತ್ಯದ ಅನಾವರಣ ಹಾಗೂ ಸ್ಪಷ್ಟನೆ
  • ಕಂಗನಾ ರಣಾವತ್ ಅವರಿಂದ ಸಿಕ್ಕಿತು ಸ್ಪಷ್ಟನೆ

2014ರಲ್ಲಿ ಬಂದ ‘ರಿವಾಲ್ವರ್ ರಾಣಿ’ ಸಿನಿಮಾದಲ್ಲಿ ಕಂಗನಾ ರಣಾವತ್ ಹಾಗೂ ವೀರ್ ದಾಸ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯ ಇತ್ತು. ಈ ದೃಶ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಳೇ ಸುದ್ದಿಯೊಂದು ಮತ್ತೆ ವೈರಲ್ ಆಗಿದೆ. ಈ ದೃಶ್ಯದಲ್ಲಿ ನಟ ವೀರ್ ದಾಸ್ ಅವರಿಗೆ ಕಂಗನಾ ರಣಾವತ್ ಗಾಯಗೊಳಿಸಿದ್ದರು ಎಂದು ಹೇಳಲಾಗಿತ್ತು. ಆದರೆ ನಟ ವೀರ್ ದಾಸ್ ಈ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸತ್ಯವನ್ನು ಬಹಿರಂಗಪಡಿಸಿದ ತಮ್ಮ ಸಹನಟನಿಗೆ ಕಂಗನಾ ಧನ್ಯವಾದ ತಿಳಿಸಿದ್ದಾರೆ.

ವೈರಲ್ ಆಗಿದ್ದ ವದಂತಿ ಏನು?

ಪತ್ರಕರ್ತೆ ಸಿಮಿ ಚಾಂದೋಕ್ ಅವರು ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದರು. ‘ರಿವಾಲ್ವರ್ ರಾಣಿ’ ಚಿತ್ರದ ಶೂಟಿಂಗ್ ವೇಳೆ ಕಂಗನಾ ಜೊತೆ ನಟಿಸಲು ವೀರ್ ದಾಸ್ ಕಷ್ಟಪಟ್ಟಿದ್ದರು ಎಂದು ಅವರು ಹೇಳಿದ್ದರು. ಒಂದು ದೃಶ್ಯದಲ್ಲಿ ಕಂಗನಾ ಅವರು ಕಟ್ ಹೇಳಿದ ಮೇಲೂ ವೀರ್ ದಾಸ್ ಅವರಿಗೆ ಕಿಸ್ ಮಾಡುವುದನ್ನು ಮುಂದುವರಿಸಿದ್ದರು ಎಂದು ಸಿಮಿ ಆರೋಪಿಸಿದ್ದರು. ಅಲ್ಲದೆ ಕಂಗನಾ ಅವರು ವೀರ್ ದಾಸ್ ತುಟಿಗೆ ಜೋರಾಗಿ ಕಚ್ಚಿದ್ದರಿಂದ ರಕ್ತ ಬಂದಿತ್ತು ಎಂದೂ ಅವರು ಹೇಳಿದ್ದರು.

ನಟ ವೀರ್ ದಾಸ್ ಪ್ರತಿಕ್ರಿಯೆ

ಈ ವೈರಲ್ ಸುದ್ದಿ ಸುಳ್ಳು ಎಂದು ವೀರ್ ದಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಕಂಗನಾ ಅತ್ಯಂತ ವೃತ್ತಿಪರರಾಗಿ ನಡೆದುಕೊಂಡಿದ್ದರು. ಅವರು ತುಂಬಾ ಪ್ರತಿಭಾವಂತ ನಟಿ. ಈ ಸುದ್ದಿ ಕಂಗನಾ ಅವರಿಗೆ ಮಾಡುತ್ತಿರುವ ಅಪಪ್ರಚಾರವಾಗಿದೆ ಎಂದು ವೀರ್ ದಾಸ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಲಾಕ್ ಅಪ್ ಸೀಸನ್ 2’: ಶೋನಿಂದ ಕಂಗನಾ ರಣಾವತ್​​ನ ಹೊರಗಿಟ್ಟಿದ್ದೇಕೆ?

ಕಂಗನಾ ರಣಾವತ್ ಆಕ್ರೋಶ

ಟ್ವಿಟರ್ ಮೂಲಕ ವೀರ್ ದಾಸ್ ಅವರಿಗೆ ಕಂಗನಾ ಧನ್ಯವಾದ ಹೇಳಿದ್ದಾರೆ. ಜೊತೆಗೆ ಸುಳ್ಳು ಸುದ್ದಿ ಹರಡಿದ ಪತ್ರಕರ್ತೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆ ಪತ್ರಕರ್ತೆ ತನ್ನ ವಿಕೃತ ಲೈಂಗಿಕ ಕಲ್ಪನೆಗಳಿಗಾಗಿ ನಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಂಗನಾ ಕಿಡಿಕಾರಿದ್ದಾರೆ. ನಾನು ನಿಮ್ಮ ರಕ್ತ ಕುಡಿಯುತ್ತಿದ್ದೇನೆ ಮತ್ತು ನೀವು ಇಂದಿಗೂ ನೊಂದು ಅಳುತ್ತಿದ್ದೀರಾ ಎನ್ನುವ ಮಾತುಗಳು ತುಂಬಾ ಹಾಸ್ಯಾಸ್ಪದವಾಗಿವೆ ಎಂದು ಕಂಗನಾ ವ್ಯಂಗ್ಯವಾಡಿದ್ದಾರೆ.

‘ರಿವಾಲ್ವರ್ ರಾಣಿ’ ಸಿನಿಮಾ

ಕಂಗನಾ ರಣಾವತ್ ಮತ್ತು ವೀರ್ ದಾಸ್ ನಟನೆಯ ‘ರಿವಾಲ್ವರ್ ರಾಣಿ’ ಸಿನಿಮಾ 2014 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಸಾಯಿ ಕಬೀರ್ ಶ್ರೀವಾಸ್ತವ್ ನಿರ್ದೇಶಿಸಿದ್ದರು. ಸುಮಾರು 22 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ 13 ಕೋಟಿ ರೂಪಾಯಿ ಗಳಿಸಿ ಸೋತಿತ್ತು. ನಿರ್ಮಾಪಕರಿಗೆ ಚಿತ್ರ ನಷ್ಟ ಉಂಟು ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us