Kareena Kapoor: ಮಕ್ಕಳನ್ನು ಕರೆದುಕೊಂಡು ತಂದೆಯ ಮನೆಗೆ ಹೊರಟ ಕರೀನಾ; ಏನು ವಿಶೇಷ?

| Updated By: shivaprasad.hs

Updated on: Sep 04, 2021 | 6:19 PM

Taimur and Jeh: ಬಾಲಿವುಡ್ ನಟಿ ಕರೀನಾ ಕಪೂರ್ ಮಕ್ಕಳೊಂದಿಗೆ ತಮ್ಮ ತಂದೆಯ ಮನೆಗೆ ತೆರಳಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

Kareena Kapoor: ಮಕ್ಕಳನ್ನು ಕರೆದುಕೊಂಡು ತಂದೆಯ ಮನೆಗೆ ಹೊರಟ ಕರೀನಾ; ಏನು ವಿಶೇಷ?
ಪುತ್ರ ತೈಮೂರ್ ಜೊತೆಯಲ್ಲಿ ಕರೀನಾ (ಎಡ), ತಂದೆಯ ಮನೆಗೆ ತೆರಳುತ್ತಿರುವ ಕರೀನಾ(ಬಲ)
Follow us on

ತಾರೆಯರ ಜೀವನ ಸಾಮಾನ್ಯ ವ್ಯಕ್ತಿಗಳಿಗೆ ಅತ್ಯಂತ ಕುತೂಹಲದ ವಿಷಯ. ಅವರ ಕುಟುಂಬ, ಮಕ್ಕಳು, ಉಡುಗೆ ತೊಡುಗೆ, ಓಡಾಟಗಳು ಎಲ್ಲವೂ ಸುದ್ದಿಯಾಗುತ್ತವೆ. ಇಂತಹ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ಬಾಲಿವುಡ್​ನಲ್ಲಿ ತಮ್ಮ ಹಿಟ್ ಚಿತ್ರಗಳಿಂದ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಪ್ರಸ್ತುತ ನಟನೆಯಿಂದ ಬ್ರೇಕ್ ತೆಗೆದುಕೊಂಡಿರುವ ಅವರು, ಮಕ್ಕಳ ಪಾಲನೆಯಲ್ಲಿ ನಿರತರಾಗಿದ್ದಾರೆ. ಅವರು ಇತ್ತೀಚೆಗಷ್ಟೇ ಪತಿಯೊಂದಿಗೆ ಮಾಲ್ಡೀವ್ಸ್​ಗೆ ತೆರಳಿದ್ದು ಸಖತ್ ಸುದ್ದಿಯಾಗಿತ್ತು. ಇದೀಗ ಅವರು ಮಕ್ಕಳೊಂದಿಗೆ ತಮ್ಮ ತಂದೆ ರಣಧೀರ್ ಕಪೂರ್ ಅವರನ್ನು ಭೇಟಿಯಾಗಲು ತೆರಳಿದ್ದು, ಹಾಗೂ ತಮ್ಮ ಹಿರಿಯ ಪುತ್ರನೊಂದಿಗೆ ತೆಗೆದುಕೊಂಡ ಸೆಲ್ಫಿಯನ್ನು ಹಂಚಿಕೊಂಡಿರುವುದು ಬಹಳಷ್ಟು ಸುದ್ದಿಯಾಗಿದೆ.

ವೀಕೆಂಡ್ ಆದ ಕಾರಣ, ಕರೀನಾ ತಮ್ಮ ಮಕ್ಕಳೊಂದಿಗೆ ತಂದೆ ರಣಧೀರ್ ಕಪೂರ್ ಮನೆಗೆ ತೆರಳಿದ್ದಾರೆ. ತಾತನನ್ನು ಭೇಟಿಯಾಗಲು ತೆರಳುತ್ತಿದ್ದ ತೈಮೂರ್​ ತನ್ನ ಚುರುಕುತನದಿಂದಾಗಿ ಎಲ್ಲರ ಗಮನ ಸೆಳೆದಿದ್ದಾನೆ. ತೈಮೂರ್​ನ ಓಡಾಟವನ್ನು ಕರೀನಾ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅವನ ಮುದ್ದು ಚಟುವಟಿಕೆಗಳನ್ನು ಹೊಗಳಿದ್ದಾರೆ. ಇದೇ ಸಂದರ್ಭದಲ್ಲಿ ಕಿರಿಯ ಪುತ್ರ ಜೇಹ್​ನನ್ನು ಕರೀನಾ ಕರೆದುಕೊಂಡು ಹೋಗುತ್ತಿರುವ ದೃಶ್ಯ  ಛಾಯಾಗ್ರಾಹಕರ ಕಣ್ಣಲ್ಲಿ ಸೆರೆಯಾಗಿದೆ.

ಕರೀನಾ ಸಾಮಾಜಿಕ ಜಾಲತಾಣದಲ್ಲೂ ಸಖತ್ ಚಟುವಟಿಕೆಯಿಂದಿರುತ್ತಾರೆ. ಅವರು ತಮ್ಮ ಪುತ್ರ ಜೇಹ್​ನೊಂದಿಗೆ ತೆಗೆದುಕೊಂಡಿರುವ ಇತ್ತೀಚಿನ ಸೆಲ್ಫಿಯೊಂದನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಹಾರ್ಟ್​ ಬ್ರೇಕರ್ ಎಂಬ ಬರಹವಿರುವ ಶರ್ಟ್ ಒಂದನ್ನು ಧರಿಸಿದ್ದಾರೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಕರೀನಾ, ‘ನನ್ನ ಶರ್ಟ್​​ನಲ್ಲೇನಿದೆ ಟಿಮ್?’ ಎಂದು ಬರೆದುಕೊಂಡಿದ್ದಾರೆ.

ಕರೀನಾ ಹಂಚಿಕೊಂಡಿದ್ದ ಸೆಲ್ಫಿ ಇಲ್ಲಿದೆ:

ಕರೀನಾ ಮತ್ತು ಸೈಫ್ ಅಲಿ ಖಾನ್ ಈ ವರ್ಷದ ಆರಂಭದಲ್ಲಿ ಎರಡನೇ ಮಗು ಜೇಹ್​ಗೆ ಜನ್ಮ ನೀಡಿದ್ದರು. ಇತ್ತೀಚೆಗೆ ಮಾಲ್ಡೀವ್ಸ್​ಗೆ ತೆರಳಿದ್ದಾಗ ಸೈಫ್ ಜನ್ಮದಿನದ ಜೊತೆಗೆ ಜೇಹ್​ಗೆ 6 ತಿಂಗಳು ಪೂರೈಸಿದ ಸಂಭ್ರಮವನ್ನೂ ಕರೀನಾ ಆಚರಿಸಿಕೊಂಡಿದ್ದರು. ಅವರು ತಮ್ಮ ಅನುಭವಗಳನ್ನು ಬರೆದಿರುವ ‘ಪ್ರೆಗ್ನೆನ್ಸಿ ಬೈಬಲ್’ ಎಂಬ ಪುಸ್ತಕವನ್ನೂ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರಗಳ ವಿಷಯಕ್ಕೆ ಬಂದರೆ, ಕರೀನಾ ಅಮೀರ್ ಖಾನ್ ಮತ್ತು ಕಿರಣ್ ರಾವ್ ನಿರ್ಮಾಣ ಮಾಡುತ್ತಿರುವ, ಅಮೀರ್ ನಟಿಸುತ್ತಿರುವ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಚಿತ್ರೀಕರಣ ಪ್ರಸ್ತುತ ಸಾಗುತ್ತಿದ್ದು, ಕರೀನಾ ಇನ್ನಷ್ಟೇ ತಂಡ ಕೂಡಿಕೊಳ್ಳಬೇಕಿದೆ.

ಇದನ್ನೂ ಓದಿ:

ಕೊಹ್ಲಿ ಆಕ್ಸ್​ಫರ್ಡ್ ಬೀದಿಯಲ್ಲಿ ಅಂಗಿಯಿಲ್ಲದೇ ನಡೆಯಬಲ್ಲರು, ಅವರಿಗೆ ಚಾಲೆಂಜ್ ಮಾಡಬೇಡಿ; ದಾದಾ ಅಚ್ಚರಿಯ ಹೇಳಿಕೆ

‘ನನ್ನ ಕೆಲಸ ಕಿತ್ತುಕೊಳ್ಳಬೇಡಿ’; ಮಂಜು ಪಾವಗಡಗೆ ಸುದೀಪ್ ಹೀಗೆ ಹೇಳಿದ್ದೇಕೆ?​

(Kareen Kapoor visits her father Randhir Kapoor house with Taimur and Jeh see video)

Published On - 6:17 pm, Sat, 4 September 21