ನಟಿ ಕರೀನಾ ಕಪೂರ್ ಅವರು ಬಾಲಿವುಡ್ನಲ್ಲಿ 20 ವರ್ಷ ಕಳೆದಿದ್ದಾರೆ. ಅವರು ತಮ್ಮ ಸಿನಿಮಾ ಆಯ್ಕೆಗಳ ಮೂಲಕ ಅಚ್ಚರಿ ಮೂಡಿಸುತ್ತಾರೆ. ಈಗ ಅವರು ಬಾಲಿವುಡ್ನಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಈ ವರ್ಷ ರಿಲೀಸ್ ಆದ ಅವರ ನಟನೆಯ ‘ಕ್ರ್ಯೂ’ ಸಿನಿಮಾ ಯಶಸ್ಸು ಕಂಡಿದೆ. ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ಸಿನಿಮಾ ಕೂಡ ಮೆಚ್ಚುಗೆ ಪಡೆದು, ಸಾಧಾರಣ ಗಳಿಕೆ ಮಾಡುತ್ತಾ ಇದೆ. ಕರೀನಾ ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.
ಕರೀನಾ ಕಪೂರ್ ಅವರು ‘ಜಬ್ ವಿ ಮೆಟ್’, ‘ಕಭಿ ಖುಷಿ ಕಭಿ ಗಮ್’ ರೀತಿಯ ಸಿನಿಮಾಗಳನ್ನು ಮಾಡಿ ಮೆಚ್ಚುಗೆ ಪಡೆದರು. ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಅವರ ನಟನೆಯ ‘ಸಿಂಗಂ ಅಗೇನ್’ ರಿಲೀಸ್ಗೆ ರೆಡಿ ಇದೆ. ಕರೀನಾ ಕಪೂರ್ ಅವರು ಬಾಲಿವುಡ್ನಿಂದ ಹಣ ಮಾಡುವುದರ ಜೊತೆಗೆ ತಮ್ಮದೇ ಬ್ರ್ಯಾಂಡ್, ಬೇರೆ ಬ್ರ್ಯಾಂಡ್ಗಳ ಪ್ರಚಾರದಿಂದ ಹಣ ಮಾಡುತ್ತಿದ್ದಾರೆ
ಕರೀನಾ ಜನಿಸಿದ್ದು 1980ರ ಸೆಪ್ಟೆಂಬರ್ 21ರಂದು. ಅವರು ಚಿನ್ನದ ಸ್ಪೂನ್ ಹಿಡಿದು ಜನಿಸಿದರು. ಅವರ ಕುಟುಂಬ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿತ್ತು. ಅವರ ತಂದೆ ರಣಧೀರ್ ಕಪೂರ್ ಸೂಪರ್ಸ್ಟಾರ್. ಅವರ ತಾಯಿ ಬಬಿತಾ. ಕರೀನಾಗೆ ಸಣ್ಣ ವಯಸ್ಸಿನಲ್ಲೇ ನಾಯಕಿ ಆಗುವ ಕನಸು ಇತ್ತು. ವಿದೇಶದಲ್ಲಿ ಅವರು ಉನ್ನತ ಶಿಕ್ಷಣ ಪಡೆದು ಬಂದರು.
ಕರೀನಾ ಅವರು ‘ಕಹೋ ನಾ ಪ್ಯಾರ್ ಹೇ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಡಬೇಕಿತ್ತು. ಆದರೆ, ಈ ಪ್ರಾಜೆಕ್ಟ್ ಅವರ ಕೈ ತಪ್ಪಿತು. ಅದೇ ವರ್ಷ ಅಭಿಷೇಕ್ ಬಚ್ಚನ್ ನಟನೆಯ ‘ರೆಫ್ಯೂಜಿ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾದ ನಟನೆಗೆ ಫಿಲ್ಮ್ಫೇರ್ ಸಿಕ್ಕಿತು.
‘ಕಭಿ ಖುಷಿ ಕಭಿ ಗಮ್’ ಸಿನಿಮಾದಲ್ಲಿ ಅವರು ಪೂ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಆ ಬಳಿಕ ಯುವ ಓಂಕಾರ್, ದೇವ್ ಸೇರಿ ಹಲವು ಸಿನಿಮಾ ಮಾಡಿದ್ದಾರೆ. ‘ಜಬ್ ವಿ ಮೆಟ್’ ಸಿನಿಮಾ ಸಾಕಷ್ಟು ಗಮನ ಸೆಳೆಯಿತು. ‘3 ಈಡಿಯಟ್ಸ್’ ಕೂಡ ದೊಡ್ಡ ಗೆಲುವು ಕಂಡಿತು.
ಕರೀನಾ ಕಪೂರ್ ಅವರ ನೆಟ್ವರ್ತ್ 485 ಕೋಟಿ ರೂಪಾಯಿ. ಅವರು ಪ್ರತಿ ಚಿತ್ರಕ್ಕೆ 10-12 ಕೋಟಿ ರೂಪಾಯಿ ಕಮಾಯಿ ಮಾಡುತ್ತಾರೆ. ಅವರು ಬ್ರ್ಯಾಂಡ್ ಪ್ರಚಾರಕ್ಕೆ 5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಕರಿನಾ ಕಪೂರ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಮಕ್ಕಳ ಆರೈಕೆಯಲ್ಲೂ ಅವರು ಬ್ಯುಸಿ ಇದ್ದಾರೆ.
ಇದನ್ನೂ ಓದಿ: ಯಶ್ ಸಿನಿಮಾ ನಿರಾಕರಿಸಿ ಪ್ರಭಾಸ್ ಸಿನಿಮಾಕ್ಕೆ ಯೆಸ್ ಎಂದರೇ ಕರೀನಾ
ಕರೀನಾ ಅವರು ಬಾಂದ್ರಾದಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಇದು ನಾಲ್ಕು ಫ್ಲೋರ್ ಇದೆ. ಇದರ ಬೆಲೆ 55 ಕೋಟಿ ರೂಪಾಯಿ. ಸ್ವಿಜರ್ಲೆಂಡ್ನಲ್ಲಿ ಅವರು ಮನೆ ಹೊಂದಿದ್ದು 33 ಕೋಟಿ ರೂಪಾಯಿ ಇದರ ಬೆಲೆ. ಕರೀನಾ ಕಪೂರ್ ಬಳಿ ಮರ್ಸೀಡಿಸ್ ಬೆಂಜ್ ಎಸ್ ಕ್ಲಾಸ್, ಲೆಕ್ಸಸ್ ಎಲ್ಎಕ್ಸ್, ಆಡಿ ಕ್ಯೂ 7 ಮೊದಲಾದ ಕಾರುಗಳು ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.