ಗುರುತೇ ಸಿಗದಂತೆ ಬದಲಾದ ಸ್ಟಾರ್​ ನಟ; ಬಾಲಿವುಡ್​ ಕಲಾವಿದನ ಪೋಸ್ಟರ್​ ವೈರಲ್​

|

Updated on: May 15, 2024 | 7:12 PM

ಈ ಹಿಂದಿನ ಸಿನಿಮಾಗಳಲ್ಲಿ ಅವರು ತುಂಬಾ ಸ್ಟೈಲಿಶ್​ ಆದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಲವರ್​ ಬಾಯ್​ ಪಾತ್ರ ಮಾಡಿ ಮಿಂಚಿದ್ದರು. ಕಲರ್​ಫುಲ್​ ಕಾಸ್ಟ್ಯೂಮ್​ಗಳನ್ನು ಧರಿಸಿ ಅಭಿಮಾನಿಗಳ ಮನ ಗೆದ್ದಿದ್ದರು. ಆದರೆ ಈಗ ತುಂಬಾ ಸ್ಲಿಮ್​ ಆಗಿದ್ದಾರೆ. ‘ಚಂದು ಚಾಂಪಿಯನ್​’ ಸಿನಿಮಾಗಾಗಿ ಸಂಪೂರ್ಣ ಹೊಸ ಅವತಾರದಲ್ಲಿ ಬಂದಿದ್ದಾರೆ.

ಗುರುತೇ ಸಿಗದಂತೆ ಬದಲಾದ ಸ್ಟಾರ್​ ನಟ; ಬಾಲಿವುಡ್​ ಕಲಾವಿದನ ಪೋಸ್ಟರ್​ ವೈರಲ್​
‘ಚಂದು ಚಾಂಪಿಯನ್​’ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​
Follow us on

ಕೆಲವು ನಟರ ಬದ್ಧತೆಗೆ ಭೇಷ್​ ಎನ್ನಲೇಬೇಕು. ಪಾತ್ರಕ್ಕಾಗಿ ದೇಹವನ್ನು ಯಾವ ರೀತಿ ಬೇಕಿದ್ದರೂ ಬದಲಿಸಿಕೊಳ್ಳಲು ಅವರು ಸಿದ್ಧರಿರುತ್ತಾರೆ. ಈ ಮೊದಲು ಹೃತಿಕ್​ ರೋಷನ್​, ಆಮಿರ್​ ಖಾನ್​, ರಣದೀಪ್​ ಹೂಡಾ ಮುಂತಾದ ನಟರು ಅಂಥ ಟ್ರಾನ್ಸ್​ಫಾರ್ಮೇಷನ್​ಗೆ ಒಳಗಾಗಿದ್ದನ್ನು ಪ್ರೇಕ್ಷಕರು ನೋಡಿದ್ದಾರೆ. ಈಗ ಬಾಲಿವುಡ್​ನ (Bollywood) ಮತ್ತೋರ್ವ ನಟ ಕೂಡ ಅದೇ ಹಾದಿ ತುಳಿದಿದ್ದಾರೆ. ಹೌದು, ಹಿಂದಿ ಚಿತ್ರರಂಗದ ಸ್ಟಾರ್​ ಕಲಾವಿದರ ಕಾರ್ತಿಕ್​ ಆರ್ಯನ್​ (Kartik Aaryan) ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ನಟಿಸಿರುವ ಹೊಸ ಸಿನಿಮಾ ‘ಚಂದು ಚಾಂಪಿಯನ್​’ (Chandu Champion) ಬಿಡುಗಡೆಗೆ ಸಜ್ಜಾಗಿದೆ. ಇದರ ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದ್ದು, ಎಲ್ಲರ ಕಣ್ಣು ಕುಕ್ಕುತ್ತಿದೆ.

ಈ ಮೊದಲಿನ ಸಿನಿಮಾಗಳಲ್ಲಿ ಕಾರ್ತಿಕ್​ ಆರ್ಯನ್​ ಅವರು ಸಖತ್ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದರು. ಲವರ್​ ಬಾಯ್​ ಆಗಿ ಅವರು ಮಿಂಚಿದ್ದರು. ಬಣ್ಣ ಬಣ್ಣದ ಕಾಸ್ಟ್ಯೂಮ್​ ಧರಿಸಿ ಮಹಿಳಾಭಿಮಾನಿಗಳ ಹೃದಯ ಕದ್ದಿದ್ದರು. ಆದರೆ ಈಗ ಅವರು ಸಿಕ್ಕಾಪಟ್ಟೆ ಸ್ಲಿಮ್​ ಆಗಿದ್ದಾರೆ. ‘ಚಂದು ಚಾಂಪಿಯನ್​’ ಚಿತ್ರಕ್ಕಾಗಿ ಸಂಪೂರ್ಣ ಹೊಸ ಅವತಾರ ತಾಳಿದ್ದಾರೆ. ಅವರು ಈ ಸಿನಿಮಾ ಮೇಲೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ‘ಆಶಿಕಿ 3’ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ ಜೊತೆ ನಟಿಸಲಿರುವ ತೃಪ್ತಿ ದಿಮ್ರಿ

ನೈಜ ಘಟನೆ ಆಧರಿಸಿ ‘ಚಂದು ಚಾಂಪಿಯನ್​’ ಸಿನಿಮಾ ಸಿದ್ಧವಾಗಿದೆ. ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಮುರಳಿಕಾಂತ್​ ಪೇಟ್ಕರ್​ ಅವರ ಪಾತ್ರಕ್ಕೆ ಕಾರ್ತಿಕ್​ ಆರ್ಯನ್​ ಬಣ್ಣ ಹಚ್ಚಿದ್ದಾರೆ. ಖ್ಯಾತ ನಿರ್ದೇಶಕ ಕಬೀರ್​ ಖಾನ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಫಸ್ಟ್​ ಲುಕ್​ ಬಿಡುಗಡೆ ಆದ ಬಳಿಕ ‘ಚಂದು ಚಾಂಪಿಯನ್​’ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.

ಜೂನ್​ 14ರಂದು ‘ಚಂದು ಚಾಂಪಿಯನ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಹಾಡುಗಳಿಗೆ ಪ್ರೀತಮ್​ ಅವರು ಸಂಗೀತ ನೀಡಿದ್ದಾರೆ. ಸಾಜಿದ್​ ನಾಡಿಯದ್ವಾಲಾ ಮತ್ತು ಕಬೀರ್​ ಖಾನ್​ ಅವರು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಚಾಂಪಿಯನ್​ ಬರುತ್ತಿದ್ದಾರೆ. ನನ್ನ ವೃತ್ತಿ ಜೀವನದ ಚಾಲೆಂಜಿಂಗ್​ ಮತ್ತು ಸ್ಪೆಷಲ್​ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ಹಂಚಿಕೊಳ್ಳಲು ಹೆಮ್ಮೆ ಎನಿಸುತ್ತಿದೆ’ ಎಂದು ಕಾರ್ತಿಕ್​ ಆರ್ಯನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಅವರಿಗೆ ಅಭಿಮಾನಿಗಳು ಆಲ್​ ದಿ ಬೆಸ್ಟ್​ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.