ನಟಿ ಕತ್ರಿನಾ ಕೈಫ್ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕತ್ರಿನಾಗೆ ಅಭಿಮಾನಿಗಳಾಗಿದ್ದಾರೆ. ಅಭಿಮಾನಿಗಳಿಗಾಗಿ ಕತ್ರಿನಾ ಅವರು ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಕತ್ರಿನಾ ತಮ್ಮ 41ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ನಟಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಈ ಮಧ್ಯೆ, ನಟಿಯ ಬಗ್ಗೆ ಒಂದು ದೊಡ್ಡ ಸತ್ಯವಿದೆ. ಭಾರತದ ಹಳ್ಳಿಯೊಂದರಲ್ಲಿ ದಂಪತಿಯೊಬ್ಬರು ಕಳೆದ 11 ವರ್ಷಗಳಿಂದ ಕತ್ರಿನಾ ಅವರನ್ನು ಪೂಜಿಸುತ್ತಿದ್ದಾರೆ. ನಟಿಯ ಹುಟ್ಟುಹಬ್ಬವನ್ನೂ ಅದ್ದೂರಿಯಾಗಿ ಆಚರಿಸಿದ್ದಾರೆ.
ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ದಂಪತಿಗಳು ಪ್ರತಿದಿನ ಕತ್ರಿನಾರನ್ನು ಪೂಜಿಸುತ್ತಾರೆ. ಧನಿ ಫೋಗಟ್ ಗ್ರಾಮದ ನಿವಾಸಿಗಲಾದ ಕರಂಬಿರ್ ಅಲಿಯಾಸ್ ಬಂಟು ಮತ್ತು ಅವರ ಪತ್ನಿ ಸಂತೋಷಿ ಕತ್ರಿನಾ ಕೈಫ್ ಅವರನ್ನು ತಮ್ಮ ದೇವತೆಯಾಗಿ ಪೂಜಿಸುತ್ತಾರೆ. ಕಳೆದ 11 ವರ್ಷಗಳಿಂದ ಈ ಜೋಡಿ ಕತ್ರಿನಾ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಲಾಡು ಹಂಚುವ ಮೂಲಕ ಸಡಗರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಕತ್ರಿನಾ ಕೈಫ್ ಅವರನ್ನು ಭೇಟಿಯಾಗಲು ಬರಬೇಕೆಂದು ಅವರು ಬಯಸುತ್ತಾರೆ.
‘ನಾನು 13-14 ವರ್ಷ ವಯಸ್ಸಿನಿಂದಲೂ ಕತ್ರಿನಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇನೆ. ಮದುವೆಗೂ ಮುನ್ನ ಕತ್ರಿನಾ ಹುಟ್ಟುಹಬ್ಬವನ್ನು ಒಬ್ಬನೇ ಆಚರಿಸುತ್ತಿದ್ದೆ. ಈಗ ನನ್ನ ಹೆಂಡತಿ ಮತ್ತು ನಾನು ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಕತ್ರಿನಾ ನನ್ನ ಮನೆಗೆ ಬರಬೇಕೆಂದು ನಾನು ಬಯಸುತ್ತೇನೆ. ಕತ್ರಿನಾ ಖಂಡಿತವಾಗಿಯೂ ನಮ್ಮನ್ನು ಭೇಟಿಯಾಗಲು ಬರುತ್ತಾರೆ ಎಂದು ನನಗೆ ಖಾತ್ರಿಯಿದೆ’ ಎಂದಿದ್ದಾರೆ ಬಂಟು.
ಇದನ್ನೂ ಓದಿ: ಕತ್ರಿನಾ ಕೈಫ್ ಬಳಿ ಇಲ್ಲ ಭಾರತೀಯ ನಾಗರಿಕತ್ವ; ಅವರು ಯಾವ ದೇಶದ ಸಿಟಿಜನ್ಶಿಪ್ ಹೊಂದಿದ್ದಾರೆ?
‘ಕತ್ರಿನಾ ಇಂದು 41 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದೇವೆ. ಕತ್ರಿನಾ ಬೇಗ ನಮ್ಮನ್ನು ಭೇಟಿಯಾಗಲಿ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ. ಕಳೆದ 11 ವರ್ಷಗಳಿಂದ ನಾವು ನಟಿಯನ್ನು ಪ್ರತಿನಿತ್ಯ ಪೂಜಿಸುತ್ತಿದ್ದೇವೆ’ ಎಂದಿದ್ದಾರೆ ಸಂತೋಷಿ.
ಕತ್ರಿನಾ ‘ನಮಸ್ತೆ ಲಂಡನ್’, ‘ವೆಲ್‌ಕಮ್’, ‘ಪಾರ್ಟ್‌ನರ್’, ‘ರೇಸ್’, ‘ಸಿಂಗ್ ಈಸ್ ಕಿಂಗ್’, ‘ರಾಜ್ನೀತಿ ‘, ‘ಜಿಂದಗಿ ನಾ ಮಿಲೇಗಿ ದೋಬಾರಾ’ ಮತ್ತು ‘ಟೈಗರ್’ ಸರಣಿಯ ಚಿತ್ರಗಳಲ್ಲಿ ಶಕ್ತಿಯುತ ಪಾತ್ರಗಳನ್ನು ನಿರ್ವಹಿಸಿ ಮಾಡಿದರು.
ಕತ್ರಿನಾ ಕೈಫ್ ಅವರ ನಿವ್ವಳ ಮೌಲ್ಯದ ಬಗ್ಗೆ ಮಾತನಾಡುತ್ತಾ, ನಟಿ 224 ಕೋಟಿ ರೂಪಾಯಿ ಒಡತಿ. ಬಾಲಿವುಡ್‌ನ ದುಬಾರಿ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕತ್ರಿನಾ ಕೈಫ್ ಈಗ ಒಂದು ಚಿತ್ರಕ್ಕೆ ಸುಮಾರು 15 ರಿಂದ 20 ಕೋಟಿ ರೂ. ಪಡೆಯುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.