ಹೆಣ್ಣುಮಕ್ಕಳಿಗೆ ಬಟ್ಟೆಗಳ ಮೇಲೆ ವಿಶೇಷ ವ್ಯಾಮೋಹ. ಅದರಲ್ಲೂ ನಟಿಯರಂತೂ ಬಟ್ಟೆಗಳ ಮೇಲೆ ಸಾಕಷ್ಟು ಕಾಳಜಿವಹಿಸುತ್ತಾರೆ. ಯಾವುದೇ ಫಂಕ್ಷನ್ ಇರಲಿ ಗ್ರ್ಯಾಂಡ್ ಆದ ಉಡುಗೆ ತೊಟ್ಟು ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ, ಕೆಲವೊಮ್ಮೆ ಬಟ್ಟೆಗಳಿಂದ ಸಮಸ್ಯೆ ಎದುರಿಸಿದ ಸೆಲೆಬ್ರಿಟಿಗಳೂ ಇದ್ದಾರೆ. ತುಂಡುಡುಗೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಮಸ್ಯೆ ಎದುರಿಸಿದ ಅನೇಕರಿದ್ದಾರೆ. ಈ ಸಾಲಿನಲ್ಲಿ ಕತ್ರಿನಾ ಕೈಫ್ (Katrina Kaif), ದೀಪಿಕಾ ಪಡುಕೋಣೆ ಮೊದಲಾದವರು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿ ದೀಪಿಕಾ ಪಡುಕೋಣೆ ಅವರು ಬಾಲಿವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರು. ಅವರು ಚಿನ್ನದ ಬಣ್ಣದ ಬಟ್ಟೆ ಧರಿಸಿ ಸುದ್ದಿ ಆಗಿದ್ದರು. ಈ ಬಟ್ಟೆಯಲ್ಲಿ ಅವರ ಎದೆ ಭಾಗ ಹೆಚ್ಚು ಎಕ್ಸ್ಪೋಸ್ ಆಗಿತ್ತು. ಇದರಿಂದ ಅವರು ಸಾಕಷ್ಟು ಟೀಕೆಗೆ ಒಳಗಾಗಬೇಕಾಯಿತು.
ನಟಿ ದಿಶಾ ಪಟಾಣಿ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಹೊಂದಿದ್ದಾರೆ. ಅವರು ತುಂಡುಡುಗೆ ತೊಟ್ಟು ಮಿಂಚಿದ್ದೇ ಹೆಚ್ಚು. ಅವರು ಒಮ್ಮೆ ಟ್ರಾನ್ಸಫರೆಂಟ್ ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಈ ಬಟ್ಟೆಯಲ್ಲಿ ಅವರ ಒಳ ಉಡುಪು ಕಾಣಿಸಿತ್ತು. ಇದರಿಂದ ಅವರು ಸಾಕಷ್ಟು ಮುಜುಗರ ಅನುಭವಿಸಬೇಕಾಯಿತು.
ನಟಿ ಕರೀನಾ ಕಪೂರ್ ಯಾವುದೇ ಬಟ್ಟೆ ತೊಟ್ಟರೂ ಅದು ಟ್ರೆಂಡಿ ಆಗಿರುತ್ತದೆ. ಒಮ್ಮೆ ಅವರು ಧರಿಸಿದ್ದ ಬ್ಲೌಸ್ನ ಮೇಲೆ ಸೇಫ್ಟಿ ಪಿನ್ ಇತ್ತು. ‘ಸೇಫ್ಟಿ ಪಿನ್ ತೆಗೆಯಲು ಕರೀನಾ ಮರೆತಿದ್ದಾರೆ’ ಎಂದು ಅನೇಕರು ಟೀಕೆ ಮಾಡಿದ್ದರು.
ಸೋನಂ ಕಪೂರ್ ಅವರು ಸದ್ಯ ಕುಟುಂಬದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಒಮ್ಮೆ ಸಾರ್ವಜನಿಕವಾಗಿ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಅವರ ಎದೆ ಭಾಗ ಹೆಚ್ಚು ಎಕ್ಸ್ಪೋಸ್ ಆಗಿ ಮುಜುಗರ ಅನುಭವಿಸಬೇಕಾಯಿತು.
ನಟಿ ಆಲಿಯಾ ಭಟ್ ಅವರು ಸಿಂಗಲ್ ಪೀಸ್ ಧರಿಸಿ ಸಂದರ್ಶನ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರ ಒಳ ಉಡುಪು ಕಾಣಿಸಿತ್ತು. ಟ್ರೋಲ್ ಪೇಜ್ಗಳಲ್ಲಿ ಈ ಫೋಟೋ ಸಾಕಷ್ಟು ಹರಿದಾಡಿತ್ತು.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸ್ಯಾರಿ ಧರಿಸಿ ಅನೇಕ ಬಾರಿ ಕಾಣಿಸಿಕೊಂಡಿದ್ದಿದೆ. ಒಮ್ಮೆ ಅವರು ಧರಿಸಿದ್ದ ಸ್ಯಾರಿಯಿಂದ ಟೀಕೆ ಅನುಭವಿಸಿದ್ದರು. ಬ್ಲೌಸ್ ಅವರಿಗೆ ಸರಿಯಾಗಿ ಫಿಟ್ ಆಗಿರಲಿಲ್ಲ. ಸದ್ಯ ಎರಡನೇ ಮಗುವಿನ ಆಗಮನದ ಖುಷಿಯಲ್ಲಿ ಅವರಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸಾಕಷ್ಟು ಬಾರಿ ಬಟ್ಟೆಯಿಂದ ತೊಂದರೆ ಅನುಭವಿಸಿದ್ದಿದೆ. ಅವರು ಒಮ್ಮೆ ತಮ್ಮದೇ ಗೌನ್ ಮೇಲೆ ಕಾಲಿಟ್ಟಿದ್ದರು. ಇದರಿಂದ ಗೌನ್ ಕಳಚಿತ್ತು. ಇದರಿಂದ ಅವರು ಸಾಕಷ್ಟು ಮುಜುಗರ ಅನುಭವಿಸಿದ್ದರು.
ಕತ್ರಿನಾ ಕೈಪ್ ಅವರು ಈ ಮೊದಲು ಹಲವು ಬಾರಿ ಈ ತೊಂದರೆ ಅನುಭವಿಸಿದ್ದರು. ಅವರು ಸಿನಿಮಾ ಪ್ರಚಾರಕ್ಕೆ ಶಾರ್ಟ್ ಧರಿಸಿ ಬಂದಿದ್ದರು. ಇದರಿಂದ ಅವರ ಒಳ ಉಡುಪು ಕಾಣಿಸಿತ್ತು.
ಇದನ್ನೂ ಓದಿ: ಮತ್ತೆ ಡಿಪ್ಫೇಕ್ ವಿಡಿಯೋದಿಂದ ತೊಂದರೆ ಅನುಭವಿಸಿದ ಕತ್ರಿನಾ ಕೈಫ್
ನಟಿ ತಾಪ್ಸಿ ಪನ್ನು ‘ಡಂಕಿ’ ಸಿನಿಮಾ ಗೆಲುವಿನ ಖುಷಿಯಲ್ಲಿ ಇದ್ದಾರೆ. ಅವರು ಒಮ್ಮೆ ಧರಿಸಿದ್ದ ಬಟ್ಟೆಯಿಂದ ಎದೆ ಭಾಗ ಹೆಚ್ಚು ಎಕ್ಸ್ಪೋಸ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ