ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಗಳಿಸಿದ ಭಾರತೀಯ ಸಿನಿಮಾಗಳಿವು

| Updated By: ರಾಜೇಶ್ ದುಗ್ಗುಮನೆ

Updated on: May 02, 2024 | 1:05 PM

ಇತ್ತೀಚಿನ ವರ್ಷಗಳಲ್ಲಿ 500 ಕೋಟಿ ರೂಪಾಯಿ ಗಳಿಸುವುದೂ ಕೂಡ ದೊಡ್ಡ ವಿಚಾರ ಆಗಿ ಉಳಿದಿಲ್ಲ. ಈಗ ನಿರ್ಮಾಪಕರು 1000 ಕೋಟಿ ರೂಪಾಯಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. 1000 ಕೋಟಿ ಗಳಿಸುವ ಮೂಲಕ ನಿರ್ಮಾಪಕರಿಗೆ ಲಾಭ ತಂದುಕೊಟ್ಟ ಭಾರತದ 6 ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಗಳಿಸಿದ ಭಾರತೀಯ ಸಿನಿಮಾಗಳಿವು
1000 ಕೋಟಿ ರೂಪಾಯಿ ಗಳಿಸಿದ ಭಾರತದ ಸಿನಿಮಾಗಳಿವು
Follow us on

ಭಾರತೀಯ ಸಿನಿಮಾಗಳು (Indian Cinema) ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಸದ್ದು ಮಾಡುತ್ತಿವೆ. ಮನರಂಜನಾ ಜಗತ್ತಿನಲ್ಲಿ ಪ್ರತಿ ವರ್ಷ ಸಾವಿರಾರು ಚಿತ್ರಗಳು ತಯಾರಾಗುತ್ತವೆ. ಅವುಗಳಲ್ಲಿ ಕೆಲವು ಸಿನಿಮಾಗಳು ಗೆದ್ದರೆ, ಹಲವು ಸಿನಿಮಾಗಳು ಸೋಲುತ್ತವೆ. ಕೆಲವು ಚಿತ್ರಗಳು ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ತಮ್ಮ ಛಾಪು ಮೂಡಿಸುತ್ತವೆ. ಆದರೆ, ಇದು ಅಷ್ಟು ಸುಲಭದ ಮಾತಲ್ಲ.

ಒಂದು ಸಿನಿಮಾ 100 ಕೋಟಿ ರೂಪಾಯಿ ಗಳಿಸಿದರೆ ಅದನ್ನು ದೊಡ್ಡದು ಎಂದು ಪರಿಗಣಿಸೋ ಕಾಲ ಇತ್ತು. ಆದರೆ, ಈ ಕಲೆಕ್ಷನ್ ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. 500 ಕೋಟಿ ರೂಪಾಯಿ ಗಳಿಸುವುದೂ ಕೂಡ ದೊಡ್ಡ ವಿಚಾರ ಆಗಿ ಉಳಿದಿಲ್ಲ. ಈಗ ನಿರ್ಮಾಪಕರು 1000 ಕೋಟಿ ರೂಪಾಯಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. 1000 ಕೋಟಿ ಗಳಿಸುವ ಮೂಲಕ ನಿರ್ಮಾಪಕರಿಗೆ ಲಾಭ ತಂದುಕೊಟ್ಟ ಭಾರತದ 6 ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ದಂಗಲ್ ಚಿತ್ರ (2016)

ಆಮಿರ್ ಖಾನ್ ತಮ್ಮ ಪ್ರತಿಯೊಂದು ಚಿತ್ರವನ್ನೂ ಸಾಕಷ್ಟು ಆಲೋಚಿಸಿ ಕೈಗೆತ್ತಿಕೊಳ್ಳುತ್ತಾರೆ. 7 ವರ್ಷಗಳ ಹಿಂದೆ ಅಮೀರ್ ಖಾನ್ ‘ದಂಗಲ್’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. 132 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿತ್ತು. ಈ ಸಿನಿಮಾ ವಿಶ್ವಾದ್ಯಂತ 2,024 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿದೆ. ಚೀನಾದಲ್ಲಿ ಈ ಸಿನಿಮಾ ಉತ್ತಮ ಗಳಿಕೆ ಮಾಡಿದೆ.

ಬಾಹುಬಲಿ 2 (2017)

‘ಬಾಹುಬಲಿ’ ಚಿತ್ರದ ನಂತರ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ‘ಬಾಹುಬಲಿ 2’ ಮೂಲಕ ಪ್ರೇಕ್ಷಕರ ಎದುರು ಬಂದರು. ಈ ಚಿತ್ರವನ್ನು ನೋಡಿ ಜನರು ಥ್ರಿಲ್ ಆದರು. 250 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು 1,788 ಕೋಟಿ ರೂಪಾಯಿಗಳ ಬಿಸ್ನೆಸ್ ಮಾಡಿತು. ಈ ಚಿತ್ರವನ್ನು ಎಸ್​ಎಸ್​ ರಾಜಮೌಳಿ ನಿರ್ದೇಶಿಸಿದ್ದರು.

ಆರ್​ಆರ್​ಆರ್​ (2022)

‘ಆರ್‌ಆರ್‌ಆರ್‌’ ಚಿತ್ರದ ಸಾಧನೆ ಆಸ್ಕರ್‌ವರೆಗೆ ಮುಟ್ಟಿದೆ. ಈ ಚಿತ್ರ ಹಿಂದಿ ಸಿನಿಮಾ ವಿಶ್ವದಾದ್ಯಂತ 1,236 ಕೋಟಿ ರೂಪಾಯಿ ಗಳಿಸಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಜೂನಿಯರ್​ ಎನ್​ಟಿಆರ್ ನಟಿಸಿದ್ದರು. ನೈಜ ಪಾತ್ರಗಳನ್ನು ಇಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆಯಲಾಗಿತ್ತು ಅನ್ನೋದು ವಿಶೇಷ.

‘ಕೆಜಿಎಫ್: ಚಾಪ್ಟರ್ 2’ (2022)

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಕನ್ನಡ ಚಿತ್ರರಂಗದ ಖ್ಯಾತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ರಾಕಿಂಗ್ ಸ್ಟಾರ್ ಯಶ್ ಅವರು ರಾಕಿ ಭಾಯ್ ಆಗಿ ಮಿಂಚಿದರು. ಈ ಸಿನಿಮಾನ ಪ್ರಶಾಂತ್ ನೀಲ್ ನಿರ್ದೇಶಿಸಿದ್ದರು. ಈ ಸಿನಿಮಾನ ಹೊಂಬಾಳೆ ಫಿಲ್ಮ್ಸ್ 100 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಪಡಿಸಿದ್ದರು.ಈ ಚಿತ್ರವು ವಿಶ್ವದಾದ್ಯಂತ 1,235 ಕೋಟಿ ರೂಪಾಯಿ ವ್ಯಾಪಾರ ಮಾಡಿದೆ

ಜವಾನ್ (2023)

1000 ಕೋಟಿ ರೂಪಾಯಿ ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಅವರ ಜವಾನ್ ಚಿತ್ರದ ಹೆಸರೂ ಸೇರಿದೆ. ಶಾರುಖ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಪ್ರೇಕ್ಷಕರಿಗೆ ಇದರಿಂದ ಹೆಚ್ಚು ಮನರಂಜನೆ ಸಿಕ್ಕಿದೆ. ಶಾರುಖ್ ಚಿತ್ರ 300 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾಗಿ, ವಿಶ್ವಾದ್ಯಂತ 1160 ಕೋಟಿ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದು ಶಾರುಖ್ ಅವರ ವೃತ್ತಿಜೀವನದ ದೊಡ್ಡ ಹಿಟ್ ಆಗಿದೆ. ತಮಿಳು ನಿರ್ದೇಶಕ ಅಟ್ಲಿ ಇದನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ನಿರ್ಮಾಣಕ್ಕೆ ಯಶ್ ಮುಂದಾಗಿದ್ದೇಕೆ? ಕಾರಣ ತಿಳಿಸಿದ ರಾಕಿಂಗ್ ಸ್ಟಾರ್

ಪಠಾಣ್ (2023)

ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಕೂಡ ಗೆದ್ದಿದೆ. 2023ರಲ್ಲಿ, ಶಾರುಖ್ ಎರಡು 1000 ಕೋಟಿ ಚಿತ್ರಗಳನ್ನು ನೀಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ‘ಪಠಾಣ್’ ಬಜೆಟ್ 240 ಕೋಟಿ ಆಗಿದ್ದು, ವಿಶ್ವದಾದ್ಯಂತ 1050.05 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.