ಸಿದ್ದಾರ್ಥ್​ ಮಲ್ಹೋತ್ರ-ಕಿಯಾರಾ ಅಡ್ವಾಣಿ ಮಧ್ಯೆ ಇರೋ ವಯಸ್ಸಿನ ಅಂತರ ಇಷ್ಟೊಂದಾ?

2018ರಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಅವರು ಸೆಟ್​ ಒಂದರಲ್ಲಿ ಭೇಟಿ ಆಗಿದ್ದರು. ಮೊದಲ ಭೇಟಿಯಲ್ಲಿ ಇವರ ಮಧ್ಯೆ ಫ್ರೆಂಡ್​ಶಿಪ್​ ಬೆಳೆಯಿತು. ಆ ಫ್ರೆಂಡ್​ಶಿಪ್ ಪ್ರೀತಿಯಾಗಿ ಬದಲಾಯಿತು.

ಸಿದ್ದಾರ್ಥ್​ ಮಲ್ಹೋತ್ರ-ಕಿಯಾರಾ ಅಡ್ವಾಣಿ ಮಧ್ಯೆ ಇರೋ ವಯಸ್ಸಿನ ಅಂತರ ಇಷ್ಟೊಂದಾ?
ಸಿದ್ದಾರ್ಥ್​-ಕಿಯಾರಾ

Updated on: Feb 08, 2023 | 9:56 AM

ಸಿದ್ದಾರ್ಥ್ ಹಾಗೂ ಕಿಯಾರಾ ಅಡ್ವಾಣಿ (Kiara Advani) ಅವರು ಮಂಗಳವಾರ (ಫೆಬ್ರವರಿ 7) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವ ದಂಪತಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೆಲೆಬ್ರಿಟಿ ಜೋಡಿ ಮದುವೆ ಆದರೆ ಅವರ ವಯಸ್ಸಿನ ಅಂತರ ತಿಳಿದುಕೊಳ್ಳುವ ಕುತೂಹಲ ಅನೇಕರಲ್ಲಿ ಇರುತ್ತದೆ. ಹಾಗಾದರೆ, ಸಿದ್ದಾರ್ಥ್​ ಮಲ್ಹೋತ್ರ(Sidharth Malhotra)ಕಿಯಾರಾ ಅಡ್ವಾಣಿ ಮಧ್ಯೆ ಇರೋ ವಯಸ್ಸಿನ ಅಂತರ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

2018ರಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಅವರು ಸೆಟ್​ ಒಂದರಲ್ಲಿ ಭೇಟಿ ಆಗಿದ್ದರು. ಮೊದಲ ಭೇಟಿಯಲ್ಲಿ ಇವರ ಮಧ್ಯೆ ಫ್ರೆಂಡ್​ಶಿಪ್​ ಬೆಳೆಯಿತು. ಆ ಫ್ರೆಂಡ್​ಶಿಪ್ ಪ್ರೀತಿಯಾಗಿ ಬದಲಾಯಿತು. ‘ಶೇರ್ಷಾ’ ಸಿನಿಮಾದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಒಟ್ಟಾಗಿ ನಟಿಸಿದರು. ಇವರ ಕೆಮಿಸ್ಟ್ರಿ ಕೆಲಸ ಮಾಡಿತು. ಈ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟರು. ಈಗ ಈ ಜೋಡಿ ಹಸೆಮಣೆ ತುಳಿದಿದ್ದು ಅನೇಕರಿಗೆ ಖುಷಿ ಇದೆ.

ಈ ದಂಪತಿ ಮಧ್ಯೆ ಸುಮಾರು ಏಳು ವರ್ಷಗಳ ವಯಸ್ಸಿನ ಅಂತರ ಇದೆ. ಸಿದ್ದಾರ್ಥ್ ಜನಿಸಿದ್ದು 1985ರ ಜನವರಿ 16ರಂದು. ಕಿಯಾರಾ ಜನಿಸಿದ್ದು ಜುಲೈ 31, 1991ರಲ್ಲಿ. ಇಬ್ಬರ ನಡುವೆ ಏಳುವರೆ ವರ್ಷ ವಯಸ್ಸಿನ ಅಂತರ ಇದೆ. ಇದನ್ನು ತಿಳಿದ ಅನೇಕರು ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ
ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ವಿವಾಹದ ಕ್ಷಣದ ಫೋಟೋ ವೈರಲ್
ಕಿಯಾರಾ-ಸಿದ್ದಾರ್ಥ್​ ಮದುವೆಯಲ್ಲಿ ಮೊಬೈಲ್ ಬಳಸೋ ಹಾಗಿಲ್ಲ; ಅತಿಥಿಗಳಿಗೆ ಸೂಚನೆ
ಮದುವೆ ನಡೆಯೋ ಸ್ಥಳಕ್ಕೆ ಆಗಮಿಸಿದ ನಟಿ ಕಿಯಾರಾ ಅಡ್ವಾಣಿ; ಖಚಿತವಾಯ್ತು ಸುದ್ದಿ

2014ರಲ್ಲಿ ರಿಲೀಸ್ ಆದ ‘ಫಗ್ಲಿ’ ಚಿತ್ರದ ಮೂಲಕ ಕಿಯಾರಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಎಂ.ಎಸ್​​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿಸ್​’, ‘ಲಸ್ಟ್ ಸ್ಟೋರಿ’ ಚಿತ್ರಗಳು ಕಿಯಾರಾಗೆ ಜನಪ್ರಿಯತೆ ತಂದುಕೊಟ್ಟವು. 2019ರ ‘ಕಬೀರ್ ಸಿಂಗ್’ ಸೂಪರ್ ಹಿಟ್ ಆಯಿತು. ಕಳೆದ ವರ್ಷ ಅವರ ನಟನೆಯ ಮೂರು ಸಿನಿಮಾಗಳು ರಿಲೀಸ್ ಆದವು.

ಇದನ್ನೂ ಓದಿ: ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ವಿವಾಹದ ಕ್ಷಣದ ಫೋಟೋ ವೈರಲ್

ಸಿದ್ದಾರ್ಥ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2012ರಲ್ಲಿ. ‘ಸ್ಟುಡೆಂಟ್ ಆಫ್​ ದಿ ಇಯರ್’ ಸಿನಿಮಾ ಅವರ ಮೊದಲ ಸಿನಿಮಾ. ನಂತರ ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈ ವರ್ಷ ‘ಮಿಷನ್ ಮಜ್ನು’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ‘ಯೋಧ’ ಸಿನಿಮಾದ ಕೆಲಸಗಳು ಪ್ರಗತಿಯಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:18 am, Wed, 8 February 23