ಕುಗ್ಗಿತು ಸಲ್ಮಾನ್ ಖಾನ್ ಚಾರ್ಮ್​; ಕಳಪೆ ಕಲೆಕ್ಷನ್ ಮಾಡಿದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ

Kisi Ka Bhai Kisi Ki Jaan Collection: ಸಲ್ಮಾನ್ ಖಾನ್ ಅವರ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದ ಕಾಲ ಒಂದಿತ್ತು. ಕೆಲವೇ ದಿನಗಳಲ್ಲಿ ಸಿನಿಮಾ 100 ಕೋಟಿ ಕ್ಲಬ್ ಸೇರುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ.

ಕುಗ್ಗಿತು ಸಲ್ಮಾನ್ ಖಾನ್ ಚಾರ್ಮ್​; ಕಳಪೆ ಕಲೆಕ್ಷನ್ ಮಾಡಿದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ
ಸಲ್ಮಾನ್ ಖಾನ್
Edited By:

Updated on: Apr 22, 2023 | 1:49 PM

ಸಲ್ಮಾನ್ ಖಾನ್ (Salman Khan) ಅವರ ಚಾರ್ಮ್​ ಎಂಥದ್ದು ಎಂಬುದು ಅನೇಕರಿಗೆ ತಿಳಿದಿದೆ. ಅವರ ಸಿನಿಮಾ ತೆರೆಗೆ ಬರುತ್ತಿದೆ ಎಂದರೆ ಫ್ಯಾನ್ಸ್ ವಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಜನರು ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಆದರೆ, ಈಗ ಈ ಚಾರ್ಮ್ ಕುಗ್ಗುತ್ತಿರುವ ಸೂಚನೆ ಸಿಕ್ಕಿದೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಸಿನಿಮಾ (Kisi Ka Bhai Kisi Ki Jaan) ಈದ್ ಪ್ರಯುಕ್ತ ತೆರೆಗೆ ಬಂದಿದೆ. ಆದರೆ, ಸಿನಿಮಾಗೆ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಲು ಸಾಧ್ಯವಾಗಿಲ್ಲ. ಸಿನಿಮಾ ಸಾಧಾರಣೆ ಗಳಿಕೆ ಮಾಡಿದೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸಲ್ಮಾನ್ ಖಾನ್ ಅವರ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದ ಕಾಲ ಒಂದಿತ್ತು. ಕೆಲವೇ ದಿನಗಳಲ್ಲಿ ಸಿನಿಮಾ 100 ಕೋಟಿ ಕ್ಲಬ್ ಸೇರುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಬಾಲಿವುಡ್​ ಮಂಕಾಗಿದೆ. ಸ್ಟಾರ್ ನಟರ ಚಿತ್ರಗಳು ಸೋಲುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್ ಖಾನ್​ಗೂ ದೊಡ್ಡ ಗೆಲುವು ಸಿಕ್ಕಿಲ್ಲ. ಕೊವಿಡ್ ಕಾರಣದಿಂದ ಅವರ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದವು. ಈಗ ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಅವರು ದೊಡ್ಡ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿಲ್ಲ. ಈ ಚಿತ್ರ ಮೊದಲ ದಿನದ ಕಲೆಕ್ಷನ್​ 15 ಕೋಟಿ ಗಳಿಸಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಬೆಂಬಲಿಸಿದ ರಾಖಿ ಸಾವಂತ್​​ಗೂ ಸಂಕಷ್ಟ; ಬಿಷ್ಣೋಯ್ ಗ್ಯಾಂಗ್​ನಿಂದ ಬಂತು ಎಚ್ಚರಿಕೆ

ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ ಮಿನಿಮಮ್ 25-30 ಕೋಟಿ ರೂಪಾಯಿ ಗಳಿಕೆ ಮಾಡುತ್ತಿತ್ತು. ಆದರೆ, ಅದು ಈಗ ಅರ್ಧಕ್ಕೆ ಇಳಿದಿದೆ. ಸಲ್ಲುಗೆ ಈ ಚಿತ್ರದಿಂದ ಮತ್ತೆ ಸೋಲುವ ಭಯ ಕಾಡಿದೆ. ಇಂದು (ಏಪ್ರಿಲ್ 22) ಹಾಗೂ ನಾಳೆ (ಏಪ್ರಿಲ್ 23) ವೀಕೆಂಡ್ ಇರುವುದರಿಂದ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎಂಬುದನ್ನು ನೋಡಬೇಕಿದೆ.

ಇದನ್ನೂ ಓದಿ: ಈದ್​ಗೆ ಸಲ್ಮಾನ್ ಖಾನ್​-ಆಮಿರ್ ಖಾನ್ ಭೇಟಿ; ಈ ಫೋಟೋದಲ್ಲಿ ಮಿಸ್ಸಿಂಗ್ ಆಗಿದ್ದು ಯಾರು?

ರಿಮೇಕ್ ಮಾಡಿದ್ದರಿಂದಲೇ ಸಲ್ಮಾನ್ ಖಾನ್ ಕೈ ಸುಟ್ಟುಕೊಂಡರು ಎನ್ನುವ ಮಾತನ್ನು ಹೇಳಲಾಗುತ್ತಿದೆ. ದಕ್ಷಿಣ ಭಾರತದ ಹಿಟ್ ಚಿತ್ರಗಳನ್ನು ರಿಮೇಕ್ ಮಾಡಿ ದುಡ್ಡು ಮಾಡುವ ತಂತ್ರವನ್ನು ಬಾಲಿವುಡ್ ಅಳವಡಿಸಿಕೊಂಡಿತ್ತು. ಆದರೆ, ಒಟಿಟಿ ಯುಗದಲ್ಲಿ ಇದು ಸಾಧ್ಯವಾಗುತ್ತಿಲ್ಲ. ರಿಮೇಕ್ ಚಿತ್ರಗಳಾದ ‘ಸೆಲ್ಫೀ’, ‘ಭೋಲಾ’, ‘ಶೆಹಜಾದ’ ಚಿತ್ರಗಳು ಸೋತಿದ್ದು ಇದಕ್ಕೆ ಉತ್ತಮ ಉದಾಹರಣೆ. ತಮಿಳಿನ ‘ವೀರಂ’ ಚಿತ್ರವನ್ನು ಸಲ್ಲು ರಿಮೇಕ್ ಮಾಡಿದ್ದು, ಜನರಿಗೆ ಇಷ್ಟವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:33 am, Sat, 22 April 23