AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈ ಶ್ರೀರಾಮ್’ ಎಂದ ಆದಿಪುರುಷ್ ತಂಡ; ಲಿರಿಕಲ್ ವಿಡಿಯೋ ಕೇಳಿ ರೋಮಾಂಚನಗೊಂಡ ಫ್ಯಾನ್ಸ್

‘ಜೈ ಶ್ರೀರಾಮ್’ ಹಾಡನ್ನು ಕೇಳಿ ಮೈ ರೋಮಾಂಚನ ಆಗುತ್ತಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಪಾಸಿಟಿವ್ ವೈಬ್ ಸೃಷ್ಟಿ ಆಗುತ್ತಿರುವುದಕ್ಕೆ ಚಿತ್ರತಂಡಕ್ಕೆ ಖುಷಿ ಇದೆ.

‘ಜೈ ಶ್ರೀರಾಮ್’ ಎಂದ ಆದಿಪುರುಷ್ ತಂಡ; ಲಿರಿಕಲ್ ವಿಡಿಯೋ ಕೇಳಿ ರೋಮಾಂಚನಗೊಂಡ ಫ್ಯಾನ್ಸ್
ರಾಜೇಶ್ ದುಗ್ಗುಮನೆ
|

Updated on: Apr 22, 2023 | 1:11 PM

Share

ಪ್ರಭಾಸ್ ನಟನೆಯ ಆದಿಪುರುಷ್’ ಸಿನಿಮಾ (Adipurush Movie) ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಟ್ರೋಲ್ ಆಗುತ್ತಿರುವುದು ಇಡೀ ತಂಡಕ್ಕೆ ತಲೆನೋವು ತಂದಿದೆ. ಈಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಈ ತಂಡ ಹೊಸಹೊಸ ಪೋಸ್ಟರ್ ರಿಲೀಸ್ ಮಾಡುತ್ತಿದೆ. ಈಗ ಜೈ ಶ್ರೀರಾಮ್ (Jai Shri Ram Lyrical Motion Poster)​ ಎಂಬ ಲಿರಿಕಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಇದು ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಹಾಡನ್ನು ಕೇಳಿ ಮೈ ರೋಮಾಂಚನ ಆಗುತ್ತಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಪಾಸಿಟಿವ್ ವೈಬ್ ಸೃಷ್ಟಿ ಆಗುತ್ತಿರುವುದಕ್ಕೆ ಚಿತ್ರತಂಡಕ್ಕೆ ಖುಷಿ ಇದೆ.

ಆದಿಪುರುಷ್ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಲು ಸಾಕಷ್ಟು ಕಾರಣಗಳಿವೆ. ಚಿತ್ರದ ಬಜೆಟ್ ಈಗಾಗಲೇ 550 ಕೋಟಿ ರೂಪಾಯಿ ದಾಟಿದೆ. ರಾಮಾಯಣ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ, ಕೃತಿ ಸನೋನ್ ಸೀತೆಯ ಪಾತ್ರ ಮಾಡಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಟೀಸರ್ ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿತ್ತು. ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್ ಲುಕ್ ಸರಿ ಇಲ್ಲ ಎಂದು ಕೆಲವರು ಟೀಕೆ ಮಾಡಿದರೆ, ಗ್ರಾಫಿಕ್ಸ್ ಬಗ್ಗೆ ಒಂದಷ್ಟು ಜನರು ಕೊಂಕು ತೆಗೆದರು. ವಾನರ ಸೇನೆಯಲ್ಲಿ ಬೇರೆ ಬೇರೆ ಪ್ರಾಣಿಗಳು ಕಾಣಿಸಿದ್ದು ಕೂಡ ಟೀಕೆಗೆ ಕಾರಣವಾಯಿತು.

ಇದನ್ನೂ ಓದಿ: ‘ಆದಿಪುರುಷ್​’ ಚಿತ್ರದ ಅವಧಿ ಬರೋಬ್ಬರಿ 3 ಗಂಟೆ; ಪ್ರಭಾಸ್ ಅಭಿಮಾನಿಗಳಿಗೆ ಶುರುವಾಯ್ತು ಚಿಂತೆ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನವರಿ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸ ವಿಳಂಬ ಆದ ಕಾರಣ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಹೊಸ ಪೋಸ್ಟರ್ ರಿಲೀಸ್ ಮಾಡಿ ಜನರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈಗ ‘ಜೈ ಶ್ರೀರಾಮ್​’ ಹೆಸರಿನ ಲಿರಿಕಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿ: ವಿದೇಶಿ ಪ್ರೇಕ್ಷಕರಿಗೆ ಮೊದಲು ದರ್ಶನ ನೀಡಲಿರುವ ‘ಆದಿಪುರುಷ್​’; ಟ್ರೈಬ್ಯಾಕಾದಲ್ಲಿ ಪ್ರೀಮಿಯರ್​

ಜೂನ್ 16ರಂದು ‘ಆದಿಪುರುಷ್’ ಸಿನಿಮಾ ರಿಲೀಸ್ ಆಗುತ್ತಿದೆ. ನಿಧಾನವಾಗಿ ಚಿತ್ರತಂಡ ಪ್ರಚಾರದಲ್ಲಿ ಭಾಗಿ ಆಗುತ್ತಿದೆ. ಹೇಗಾದರೂ ಮಾಡಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಚಿತ್ರತಂಡ ಬಿದ್ದಿದೆ. ಮುಂದಿನ ದಿನಗಳಲ್ಲಿ ಸಿನಿಮಾ ತಂಡ ಟ್ರೇಲರ್ ಹಾಗೂ ಸಾಂಗ್ ಮೂಲಕ ಗಮನ ಸೆಳೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ