- Kannada News Photo gallery Prabhas starrer Adipurush to have premiere in Tribeca Film Festival on 13th June
Adipurush: ವಿದೇಶಿ ಪ್ರೇಕ್ಷಕರಿಗೆ ಮೊದಲು ದರ್ಶನ ನೀಡಲಿರುವ ‘ಆದಿಪುರುಷ್’; ಟ್ರೈಬ್ಯಾಕಾದಲ್ಲಿ ಪ್ರೀಮಿಯರ್
Tribeca Film Festival: ‘ಟ್ರೈಬ್ಯಾಕಾ ಫಿಲ್ಮ್ ಫೆಸ್ಟಿವಲ್’ನಲ್ಲಿ ‘ಆದಿಪುರುಷ್’ ಸಿನಿಮಾ ಪ್ರೀಮಿಯರ್ ಆಗಲಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಪ್ರಭಾಸ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
Updated on:Apr 19, 2023 | 6:25 PM

ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ರಾಮಾಯಣವನ್ನು ಆಧರಿಸಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದಾರೆ. ಈ ಸಿನಿಮಾದ ಪ್ರೀಮಿಯರ್ ಶೋಗೆ ಸಕಲ ಸಿದ್ಧತೆ ನಡೆದಿದೆ.

ಪ್ರತಿಷ್ಠಿತ ಟ್ರೈಬ್ಯಾಕಾ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಳ್ಳಲು ‘ಆದಿಪುರುಷ್’ ಸಿನಿಮಾ ಆಯ್ಕೆ ಆಗಿದೆ. ಇದು ಇಡೀ ತಂಡಕ್ಕೆ ಸಂತಸ ತಂದಿದೆ. ಜೂನ್ 13ರಂದು ಸಿನಿಮೋತ್ಸವದಲ್ಲಿ ಈ ಸಿನಿಮಾದ ಪ್ರೀಮಿಯರ್ ಆಗಲಿದೆ. ಆ ಬಗ್ಗೆ ಚಿತ್ರರಂಗ ಮಾಹಿತಿ ಹಂಚಿಕೊಂಡಿದೆ.

3ಡಿ ರೂಪದಲ್ಲಿ ‘ಆದಿಪುರುಷ್’ ಚಿತ್ರ ಪ್ರದರ್ಶನಗೊಳ್ಳಲಿದೆ. ‘ಇದು ಭಾರತೀಯ ಸಿನಿಮಾಗೆ ಸಂದ ಗೌರವ. ನಮ್ಮ ಚಿತ್ರ ವಿದೇಶದಲ್ಲಿ ಪ್ರದರ್ಶನ ಆಗುತ್ತಿರುವುದು ಸಂತಸ ತಂದಿದೆ. ಒಬ್ಬ ಭಾರತೀಯನಾಗಿ ಅಲ್ಲಿನ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ನೋಡಲು ಕಾತುರನಾಗಿದ್ದೇನೆ’ ಎಂದು ಪ್ರಭಾಸ್ ಹೇಳಿದ್ದಾರೆ.

‘ಟಿ ಸೀರೀಸ್’ನ ಭೂಷಣ್ ಕುಮಾರ್ ಅವರು ‘ಆದಿಪುರುಷ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ಮೂಡಿಬಂದಿದೆ. ವಿಶ್ವಾದ್ಯಂತ ಜೂನ್ 16ರಂದು ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ನಡೆಯುವ ಪ್ರೀಮಿಯರ್ನಲ್ಲಿ ವಿದೇಶಿ ಪ್ರೇಕ್ಷಕರು ಸಿನಿಮಾ ನೋಡಲಿದ್ದಾರೆ.

ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಕೃತಿ ಸನೋನ್, ಸನ್ನಿ ಸಿಂಗ್, ದೇವದತ್ತ ನಾಗೆ, ವತ್ಸಲ್ ಸೇಠ್, ಸೋನಾಲ್ ಚೌಹಾಣ್ ಮುಂತಾದವರು ನಟಿಸಿದ್ದಾರೆ. ಅಜಯ್-ಅತುಲ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಓಂ ರಾವತ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಕನ್ನಡದಲ್ಲೂ ಈ ಚಿತ್ರ ಡಬ್ ಆಗಿ ತೆರೆಕಾಣಲಿದೆ.
Published On - 6:25 pm, Wed, 19 April 23




