Kriti sanon: ವರುಣ್ ಧವನ್​ ನಡೆಗೆ ಕೃತಿ ಸನೋನ್ ಬೇಸರ; ಮುರಿದು ಹೋಯ್ತಾ ಫ್ರೆಂಡ್​ಶಿಪ್​?

ವರುಣ್ ಧವನ್ ಹೇಳಿಕೆಯಿಂದ ಕೃತಿಗೆ ಸಾಕಷ್ಟು ಬೇಸರ ಆಗಿದೆ. ಇಬ್ಬರ ಮಧ್ಯೆ ಇರುವ ಫ್ರೆಂಡ್​ಶಿಪ್ ಮುರಿದು ಹೋಯ್ತಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.

Kriti sanon: ವರುಣ್ ಧವನ್​ ನಡೆಗೆ ಕೃತಿ ಸನೋನ್ ಬೇಸರ; ಮುರಿದು ಹೋಯ್ತಾ ಫ್ರೆಂಡ್​ಶಿಪ್​?
ವರುಣ್ ಧವನ್-ಕೃತಿ ಸನೋನ್

Updated on: Mar 09, 2023 | 8:51 AM

ಚಿತ್ರರಂಗದಲ್ಲಿ ಡೇಟಿಂಗ್ ತುಂಬಾನೇ ಕಾಮನ್. ಈ ಬಗ್ಗೆ ನಿತ್ಯ ಒಂದಿಲ್ಲೊಂದು ಸುದ್ದಿ ಕೇಳಿ ಬರುತ್ತಲೇ ಇರುತ್ತವೆ. ಈ ವಿಚಾರದಲ್ಲಿ ಸೆಲೆಬ್ರಿಟಿಗಳು ಗುಟ್ಟು ಕಾಯ್ದುಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಮಾಹಿತಿ ಲೀಕ್ ಆಗಿ ಬಿಡುತ್ತವೆ. ಇತ್ತೀಚೆಗೆ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಪ್ರಭಾಸ್ (Prabhas) ಹೆಸರು ನಟಿ ಕೃತಿ ಸನೋನ್ ಜೊತೆ ತಳುಕು ಹಾಕಿಕೊಂಡಿತ್ತು. ಇದು ಅನೇಕರ ಅಚ್ಚರಿಗೂ ಕಾರಣ ಆಗಿತ್ತು. ಅಂದಹಾಗೆ, ಈ ವದಂತಿ ದೊಡ್ಡದಾಗುವಂತೆ ಮಾಡಿದ್ದು ವರುಣ್ ಧವನ್ (Varun Dhawan). ಈ ಬಗ್ಗೆ ಕೃತಿಗೆ ಸಾಕಷ್ಟು ಬೇಸರ ಇದೆ.

ಡೇಟಿಂಗ್ ವಿಚಾರ

ಕೃತಿ ಸನೋನ್ ಹಾಗೂ ಪ್ರಭಾಸ್ ‘ಆದಿಪುರುಷ್​’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಾಮಾಯಣ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದ್ದು ಪ್ರಭಾಸ್ ರಾಮನ ಪಾತ್ರ ಮಾಡಿದರೆ ಕೃತಿ ಸೀತೆಯ ಪಾತ್ರ ಮಾಡಿದ್ದರು. ಈ ಜೋಡಿ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇದಕ್ಕೆ ಕಾರಣವನ್ನು ಹುಡುಕಿ ಹೊರಟ ಅನೇಕರು ಪ್ರೀತಿಯ ಟ್ಯಾಗ್ ಕೊಟ್ಟಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿತು.

ವರುಣ್ ಧವನ್ ಹೇಳಿಕೆಯಿಂದ ಹೆಚ್ಚಿತು ಕುತೂಹಲ

ಕಳೆದ ವರ್ಷ ರಿಯಾಲಿಟಿ ಶೋ ಒಂದರಲ್ಲಿ ವರುಣ್ ಧವನ್ ಹಾಗೂ ಕೃತಿ ಸನೋನ್ ಭಾಗಿ ಆಗಿದ್ದರು. ಇದನ್ನು ಕರಣ್ ಜೋಹರ್ ನಡೆಸಿಕೊಡುತ್ತಿದ್ದರು. ನಾಯಕಿಯರ ಪಟ್ಟಿ ಮಾಡುವ ಟಾಸ್ಕ್​​ನ ನೀಡಲಾಗಿತ್ತು. ಈ ವೇಳೆ ವರುಣ್ ಧವನ್ ಅವರು ಹಲವು ಹೀರೋಯಿನ್​ಗಳ ಹೆಸರು ತೆಗೆದುಕೊಂಡರು. ಆದರೆ, ಕೃತಿ ಸನೋನ್​ ಹೆಸರನ್ನು ಅವರು ಕೈ ಬಿಟ್ಟಿದ್ದರು. ಈ ಬಗ್ಗೆ ಮಾತನಾಡುವಾಗ, ‘ಈ ಪಟ್ಟಿಯಲ್ಲಿ ಕೃತಿ ಸನೋನ್​ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್​ ಮಾಡುತ್ತಿದ್ದಾರೆ’ ಎಂದು ವರುಣ್​ ಧವನ್​ ಹೇಳಿದ್ದರು. ‘ಪ್ರಾಜೆಕ್ಟ್​ ಕೆ’ ಸಿನಿಮಾಗಾಗಿ ಪ್ರಭಾಸ್​ ಅವರು ದೀಪಿಕಾ ಜೊತೆ ಶೂಟಿಂಗ್​ ಮಾಡುತ್ತಿದ್ದಾರೆ. ಹಾಗಾಗಿ ವರುಣ್​ ಧವನ್​ ಹೇಳಿದ್ದು ಪ್ರಭಾಸ್​ ಬಗ್ಗೆಯೇ ಎಂದು ಎಲ್ಲರೂ ಊಹಿಸಿದ್ದರು.

ಇದನ್ನೂ ಓದಿ
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ಬೇಸರಗೊಂಡ ಕೃತಿ

ಇತ್ತೀಚೆಗೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೃತಿ, ‘ವರುಣ್ ಧವನ್ ಅದನ್ನು ಹೇಳಿದಾಗ ನನಗೆ ತುಂಬಾನೇ ಬೇಸರ ಆಯಿತು. ಈ ವಿಚಾರದ ಬಗ್ಗೆ ಪ್ರಭಾಸ್​ಗೆ ಹೇಳಬೇಕು ಎನಿಸಿತು. ನಾನು ಪ್ರಭಾಸ್​ಗೆ ಕಾಲ್ ಮಾಡಿ ವರುಣ್ ಧವನ್ ಈ ರೀತಿ ಹೇಳಿದ್ದಾರೆ ಎಂಬುದನ್ನು ಹೇಳಿದೆ. ಅವರು ‘ಆದರೆ ಯಾಕೆ?’ ಎಂದು ಪ್ರಶ್ನೆ ಮಾಡಿದರು. ನನಗೆ ಗೊತ್ತಿಲ್ಲ ಎಂದು ಉತ್ತರ ಕೊಟ್ಟೆ. ವರುಣ್​ಗೆ ಹುಚ್ಚು ಹಿಡಿದಿದೆ ಎಂದು ನಾನು ಪ್ರಭಾಸ್ ಬಳಿ ಹೇಳಿದ್ದೆ’ ಎಂಬುದಾಗಿ ಕೃತಿ ಸನೋನ್ ಹೇಳಿಕೊಂಡಿದ್ದಾರೆ. ವರುಣ್ ಧವನ್ ಹೇಳಿಕೆಯಿಂದ ಕೃತಿಗೆ ಸಾಕಷ್ಟು ಬೇಸರ ಆಗಿದೆ. ಇಬ್ಬರ ಮಧ್ಯೆ ಇರುವ ಫ್ರೆಂಡ್​ಶಿಪ್ ಮುರಿದು ಹೋಯ್ತಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:50 am, Thu, 9 March 23