ನಟ ಆಮಿರ್ ಖಾನ್ ಅವರು ನಿರ್ಮಾಪಕನಾಗಿ ಸಾಮಾಜಿಕ ಕಳಜಳಿ ಇರುವಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಈ ವರ್ಷ ಅವರು ನಿರ್ಮಾಣ ಮಾಡಿದ ‘ಲಾಪತಾ ಲೇಡೀಸ್’ ಸಿನಿಮಾ ಉತ್ತಮ ವಿಮರ್ಶೆ ಪಡೆದುಕೊಂಡಿತು. ಈ ಸಿನಿಮಾಗೆ ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ. ಹೊಸ ಕಲಾವಿದರು ಮುಖ್ಯಭೂಮಿಕೆ ನಿಭಾಯಿಸಿರುವ ‘ಲಾಪತಾ ಲೇಡೀಸ್’ ಸಿನಿಮಾಗೆ ಈಗ ಇನ್ನೊಂದು ವಿಶೇಷ ಗೌರವ ಸಿಗುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ಇಂದು (ಆಗಸ್ಟ್ 9) ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ!
ಲಿಂಗ ಸಮಾನತೆ ಬಗ್ಗೆ ‘ಲಾಪತಾ ಲೇಡೀಸ್’ ಸಿನಿಮಾದಲ್ಲಿ ಹೇಳಲಾಗಿದೆ. ವಿಮರ್ಶಕರು ಈ ಸಿನಿಮಾಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರಮಂದಿರದಲ್ಲಿ ತೆರೆಕಂಡ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಿಯೂ ಈ ಸಿನಿಮಾ ಹೆಚ್ಚು ಜನರನ್ನು ತಲುಪಿತು. ಅನೇಕ ಸೆಲೆಬ್ರಿಟಿಗಳು ‘ಲಾಪತಾ ಲೇಡೀಸ್’ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಈಗ ಸುಪ್ರೀಂ ಕೋರ್ಟ್ನಲ್ಲಿ ಪ್ರದರ್ಶನ ಕಾಣುತ್ತಿರುವುದು ವಿಶೇಷ.
Movie “Laapataa Ladies” to be screened at the #SupremeCourt tomorrow as part of gender sensitisation training.
Movie director Kiran Rao and producer Aamir Khan to be present for interaction. pic.twitter.com/XaBlrcGrsp
— Live Law (@LiveLawIndia) August 8, 2024
ಸುಪ್ರೀಂ ಕೋರ್ಟ್ ಜಡ್ಜ್ಗಳಿಗಾಗಿ, ಅವರ ಕುಟುಂಬದವರಿಗಾಗಿ, ಅಧಿಕಾರಿಗಳಿಗಾಗಿ ‘ಲಾಪತಾ ಲೇಡೀಸ್’ ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ. ಇದರಲ್ಲಿ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಭಾಗಿ ಆಗಿದ್ದಾರೆ. ಸುಪ್ರೀಂ ಕೋರ್ಟ್ನ 75ನೇ ವಾರ್ಷಿಕೋತ್ಸವದ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ‘ಲಾಪತಾ ಲೇಡೀಸ್’ ಸಿನಿಮಾ ಪ್ರದರ್ಶನ ಆಗುತ್ತಿದೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಟ್ರೆಂಡಿಂಗ್ನಲ್ಲಿ ನಂಬರ್ ಒನ್ ಆಯ್ತು ‘ಲಾಪತಾ ಲೇಡೀಸ್’ ಸಿನಿಮಾ
ಶುಕ್ರವಾರ (ಆಗಸ್ಟ್ 9) ಸಂಜೆ 4.15ರಿಂದ 6.20ರ ತನಕ ಸುಪ್ರೀಂ ಕೋರ್ಟ್ನ ಸಿ-ಬ್ಲಾಕ್ ಆಡಿಟೋರಿಯಂನಲ್ಲಿ ‘ಲಾಪತಾ ಲೇಡೀಸ್’ ಸಿನಿಮಾ ಪ್ರದರ್ಶನ ನಡೆಯುತ್ತಿದೆ. ಸಿನಿಮಾ ನೋಡಿದ ಬಳಿಕ ಜಡ್ಜ್ಗಳು ಯಾವ ರೀತಿ ಅಭಿಪ್ರಾಯ ತಿಳಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಸಿನಿಮಾವನ್ನು ಆಯ್ಕೆ ಮಾಡಿದ್ದರಿಂದ ಆಮಿರ್ ಖಾನ್, ಕಿರಣ್ ರಾವ್ ಅವರಿಗೆ ದೊಡ್ಡ ಗೌರವ ಸಿಕ್ಕಂತೆ ಆಗಿದೆ. ಈ ಸಿನಿಮಾದಲ್ಲಿ ನಿತಾಂಷಿ ಘೋಯಲ್, ಸ್ಪರ್ಶ್ ಶ್ರೀವಾಸ್ತವ್, ಪ್ರತಿಭಾ ರಂಟಾ, ರವಿ ಕಿಶನ್, ಛಾಯಾ ಕದಂ ಮುಂತಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.