ಮಾಧುರಿ ದೀಕ್ಷಿತ್ಗೆ ಇತ್ತು ‘ಲತ್ತೆ’ ಪಟ್ಟ; ಇದು ತೊಳೆದು ಹೋಗಿದ್ದು ಹೇಗೆ?

| Updated By: ಮಂಜುನಾಥ ಸಿ.

Updated on: Feb 17, 2025 | 9:10 AM

Madhuri Dixit: ಮಾಧುರಿ ದೀಕ್ಷಿತ್ ಬಾಲಿವುಡ್​ನ ಸ್ಟಾರ್ ನಟಿಯರಲ್ಲಿ ಒಬ್ಬರು. ಅವರು ನಟಿಸಿದ್ದಾರೆಂದರೆ ಸಾಕು ಸಿನಿಮಾಗಳು ಹಿಟ್ ಆಗುತ್ತಿದ್ದ ಕಾಲವೊಂದಿತ್ತು. ಆದರೆ ಮಾಧುರಿ ದೀಕ್ಷಿತ್​ ಕೆಟ್ಟ ಸಮಯವನ್ನೂ ಸಹ ಚಿತ್ರರಂಗದಲ್ಲಿ ನೋಡಿದ್ದಾರೆ. ಮಾಧುರಿ ದೀಕ್ಷಿತ್ ಅವರನ್ನು ಅದೃಷ್ಟಹೀನ ನಟಿ ಎಂದು ಸಹ ಒಂದು ಸಮಯದಲ್ಲಿ ಕರೆಯಲಾಗುತ್ತಿತ್ತು.

ಮಾಧುರಿ ದೀಕ್ಷಿತ್ಗೆ ಇತ್ತು ‘ಲತ್ತೆ’ ಪಟ್ಟ; ಇದು ತೊಳೆದು ಹೋಗಿದ್ದು ಹೇಗೆ?
Madhuri
Follow us on

ಮಾಧುರಿ ದೀಕ್ಷಿತ್ ಅವರು ಬಾಲಿವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ನಟನೆಯ ಜೊತೆಗೆ ಡ್ಯಾನ್ಸ್ ಮೂಲಕವೂ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರು ಹಲವರಿಗೆ ಮಾದರಿ. ಒಂದು ಕಾಲದಲ್ಲಿ ಅವರು ಮಾಡಿದ ಹವಾ ಅಷ್ಟಿಷ್ಟಲ್ಲ. ಅವರಿಗೆ ಈ ಮೊದಲು ಒಂದು ವಿಚಾರ ಸಾಕಷ್ಟು ಹಿನ್ನಡೆ ತಂದಿತ್ತು. ಅವರನ್ನು ಎಲ್ಲರೂ ಲತ್ತೆ ಎಂದು ಕರೆಯುತ್ತಿದ್ದರು. ಅವರು ದುರಾದೃಷ್ಟವನ್ನು ತರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ನಂತರ ಇದು ತೊಳೆದು ಹೋಯಿತು.

ಸಂದರ್ಶನದಲ್ಲಿ ಮಾತನಾಡಿದ್ದ ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರ ಕುಮಾರ್ ಅವರು ಮಾಧುರಿ ದೀಕ್ಷಿತ್ ಅವರು ಬಂದರೆ ಕೆಲಸ ಕೆಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಅಲ್ಲದೆ, ಅವರನ್ನು ಯಾರೊಬ್ಬರೂ ಸಿನಿಮಾದಲ್ಲಿ ಹಾಕಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಇಂದ್ರ ಕುಮಾರ್ ಅವರು ‘ದಿಲ್ ಆ್ಯಂಡ್ ಬೇಟಾ’ ಚಿತ್ರದಲ್ಲಿ ಮಾಧುರಿಯವರನ್ನು ಆಯ್ಕೆ ಮಾಡಿದಾಗ ಟೀಕೆಗೆ ಒಳಗಾಗಿದ್ದರು.

‘ಆ ಸಮಯದಲ್ಲಿ ಮಾಧುರಿ ದೀಕ್ಷಿತ್ ನಟಿಸಿದ ಯಾವ ಸಿನಿಮಾಗಳೂ ಹಿಟ್ ಆಗುತ್ತಾ ಇರಲಿಲ್ಲ. ಹೀಗಾಗಿ ಅವರನ್ನು ದುರಾದೃಷ್ಟ ತರುವವಳು ಎಂದು ಕರೆಯಲಾಗುತ್ತಿತ್ತು’ ಎಂದಿದ್ದಾರೆ ಇಂದ್ರ ಕುಮಾರ್ ಅವರು. ಆಗ ಇಂದ್ರ ಕುಮಾರ್ ಅವರು ‘ದಿಲ್’ ಚಿತ್ರದಲ್ಲಿ ಆಮಿರ್ ಖಾನ್ ಜೊತೆ ನಟಿಸಲು ಮಾಧುರಿಯವರನ್ನು ಆಯ್ಕೆ ಮಾಡಿದರು. ನಂತರ ಬೆಟಾ ಚಿತ್ರಕ್ಕೂ ಅವರನ್ನು ಆಯ್ಕೆ ಮಾಡಿಕೊಂಡರು. ‘ನಿಮಗೇನು ಹಚ್ಚೇ? ಅವರ ಯಾವ ಸಿನಿಮಾಗಳೂ ಹಿಟ್ ಆಗಿಲ್ಲ’ ಎಂದು ಟೀಕಿಸಿದ್ದರಂತೆ.

ಇದನ್ನೂ ಓದಿ:ಬಾಲಿವುಡ್​ನಲ್ಲಿ ಬಂಪರ್ ಅವಕಾಶ ಬಾಚಿಕೊಂಡ ಶ್ರೀಲೀಲಾ

ಇಂದ್ರ ಕುಮಾರ್ ಅವರು ಇದೆಲ್ಲವನ್ನೂ ನಂಬುತ್ತಾ ಇರಲಿಲ್ಲ. ಮಾಧುರಿ ದೀಕ್ಷಿತ್ ಬಗ್ಗೆ ಅವರಿಗೆ ನಂಬಿಕೆ ಇತ್ತು. ಅವರ ಸಿನಿಮಾಗಳ ಬಗ್ಗೆ ಅವರು ಬಲವಾದ ನಂಬಿಕೆ ಹೊಂದಿದ್ದರು. ಮಾಧುರಿಯಲ್ಲಿ ಏನೋ ಇದೆ ಎಂದು ಅವರು ಬಲವಾಗಿ ನಂಬಿದ್ದರು.

ನಂತರ ಮಾಧುರಿ ನಟಿಸಿದ ‘ತೇಜಾಬ್’, ‘ರಾಮ್ ಲಖನ್’ ಹಿಟ್ ಆದ ಬಳಿಕ ಅವರನ್ನು ನೋಡುವ ರೀತಿ ಬದಲಾಯಿತು. ಮತ್ತೆ ಅವರಿಗೆ ಅವಕಾಶಗಳು ಬರೋಕೆ ಆರಂಭಿಸಿದವು. ಇತ್ತೀಚೆಗೆ ಮಾಧುರಿ ದೀಕ್ಷಿತ್ ಅವರು ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಗಮನ ಸೆಳೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ