ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೆನೆಯ ಒಂದು ತಿಂಗಳ ಸಂಪಾದನೆ ಎಷ್ಟು?

ಮಾಧುರಿ ದೀಕ್ಷಿತ್ ಮತ್ತು ಡಾ. ಶ್ರೀರಾಮ್ ನೇನೆ ಅವರ ಆಸ್ತಿಯ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಡಾ. ನೇನೆ ಅವರ ವಾರ್ಷಿಕ ಆದಾಯ 98 ಲಕ್ಷ ರೂಪಾಯಿಗಳಾಗಿದ್ದು, ಮಾಸಿಕ ಆದಾಯ 7 ಲಕ್ಷಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಮಾಧುರಿ ಅವರು ಪ್ರತಿ ಚಿತ್ರಕ್ಕೆ 4-5 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಅವರ ಸಂಯುಕ್ತ ಆಸ್ತಿ 350-400 ಕೋಟಿ ರೂಪಾಯಿಗಳಷ್ಟಿದೆ.

ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೆನೆಯ ಒಂದು ತಿಂಗಳ ಸಂಪಾದನೆ ಎಷ್ಟು?
ಶ್ರೀರಾಮ್- ಮಾಧುರಿ
Updated By: ರಾಜೇಶ್ ದುಗ್ಗುಮನೆ

Updated on: May 28, 2025 | 9:06 AM

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ (Madhuri Dixit), ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಡಾ. ಶ್ರೀರಾಮ್ ನೆನೆ ಅವರನ್ನು ಭೇಟಿಯಾದರು. 1999ರ ಅಕ್ಟೋಬರ್​ನ ಮದುವೆಯಾದ ನಂತರ, ಮಾಧುರಿ ಅಮೆರಿಕದ ಡೆನ್ವರ್‌ನಲ್ಲಿ ನೆಲೆಸಿದರು. ಅವಳು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ವಾಸಿಸುತ್ತಿದ್ದರು. ನಂತರ ಅಕ್ಟೋಬರ್ 2011ರಲ್ಲಿ, ಅವರು ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಮರಳಿದರು ಮತ್ತು ಇಲ್ಲಿ ನಟನೆಯನ್ನು ಪುನರಾರಂಭಿಸಿದರು. ಮಾಧುರಿ ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಅವರ ತಿಂಗಳ ಸಂಭಾವನೆ ಬಗ್ಗೆ ತಿಳಿಯೋಣ.

ಶ್ರೀರಾಮ್ ನೆನೆ ಪಾತ್‌ಫೈಂಡರ್ ಹೆಲ್ತ್ ಸೈನ್ಸಸ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಅವರು ಐಐಟಿ ಜೋಧಪುರದ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು. ಮಾಧುರಿಯವರ ಒಟ್ಟು ಆಸ್ತಿ ಸುಮಾರು 250 ಕೋಟಿ ರೂ.ಗಳಾಗಿದ್ದು, ಡಾ. ಶ್ರೀರಾಮ್ ನೇನೆ ಕೂಡ 100 ರಿಂದ 150 ಕೋಟಿ ರೂ.ಗಳ ಆಸ್ತಿಯ ಮಾಲೀಕರು. ಈ ಇಬ್ಬರ ಒಟ್ಟು ಸಂಪತ್ತು ಸುಮಾರು 350 ರಿಂದ 400 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಡಾ. ಶ್ರೀರಾಮ್ ನೆನೆ ಅವರ ವಾರ್ಷಿಕ ಆದಾಯ 98 ಲಕ್ಷ ರೂ. ಅಂದರೆ ಅವರು ಪ್ರತಿ ತಿಂಗಳು ಏಳು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುತ್ತಾರೆ.

ಮಾಧುರಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಳೆದ ವರ್ಷ, ಅವರು ‘ಭೂಲ್ ಭುಲೈಯಾ 3′ ಚಿತ್ರದಲ್ಲಿ ಕಾಣಿಸಿಕೊಂಡರು. ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್ ಮತ್ತು ತೃಪ್ತಿ ದಿಮ್ರಿ ಕೂಡ ಇದರಲ್ಲಿ ನಟಿಸಿದ್ದಾರೆ. ಈ ಚಿತ್ರ 400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಕಳೆದ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಇದಾಗಿತ್ತು. ಮತ್ತೊಂದೆಡೆ, ಮಾಧುರಿ ಒಂದು ಚಿತ್ರಕ್ಕೆ ಸುಮಾರು ನಾಲ್ಕರಿಂದ ಐದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಇದನ್ನೂ ಓದಿ
ನಟಿ ದೀಪಿಕಾಗೆ ಕ್ಯಾನ್ಸರ್; ಹೊಟ್ಟೆಯಲ್ಲಿದೆ ಟೆನಿಸ್ ಬಾಲ್ ಆಕಾರದ ಗಡ್ಡೆ
RCB ಗೆಲುವಿನ ಖುಷಿಯಲ್ಲಿ ವಿರಾಟ್​ಗೆ ಮುತ್ತಿನ ಸುರಿಮಳೆ ಸುರಿಸಿದ ಅನುಷ್ಕಾ
ಕಮಲ್ ಹಾಸನ್ ವಿವಾದ: ಕನ್ನಡಿಗರ ಕೆರಳಿಸಿದ ನಟನ​ ಚಿತ್ರಕ್ಕೆ ಸಂಕಷ್ಟ
‘ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ’; ಅನುಶ್ರೀಗೆ ನೇರವಾಗಿ ಹೇಳಿದ ಮನೋಜ್

ಇದನ್ನೂ ಓದಿ: ಮಾಧುರಿ ದೀಕ್ಷಿತ್ ರಿಯಾಲಿಟಿ ಶೋಗೆ ಪಡೆಯುತ್ತಾರೆ 25 ಕೋಟಿ ರೂಪಾಯಿ; ಒಟ್ಟೂ ಆಸ್ತಿ ಎಷ್ಟು?  

ಮಾಧುರಿ ದೀಕ್ಷಿತ್ ಅವರಿಗೆ ತಿಂಗಳ ಸಂಭಾವನೆ ಇಷ್ಟೇ ಬರುತ್ತದೆ ಎಂಬುದು ನಿಗದಿ ಆಗಿಲ್ಲ. ಸಿನಿಮಾ ಒಪ್ಪಿಕೊಂಡಾಗ ಅವರು ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅದೇ ರೀತಿ ಪ್ರಚಾರ ಇದ್ದಾಗಲೂ ಅವರು ಹೆಚ್ಚಿ ಸಂಭಾವನೆ ಸಿಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:58 am, Wed, 28 May 25