AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟೆಲ್ಲ ಸಿನಿಮಾ ಮಾಡಿದ್ರೂ ದೀಪಿಕಾ ಬಿಟ್ಟಿಲ್ಲ ಸಣ್ಣ ಬುದ್ಧಿ; ಛೀ.. ಈ ರೀತಿ ಮಾಡೋದಾ?

ದೀಪಿಕಾ ಪಡುಕೋಣೆ ಅವರು 'ಸ್ಪಿರಿಟ್' ಚಿತ್ರದಿಂದ ಹೊರ ನಡೆದಿದ್ದಾರೆ. ಇದಾದ ಬೆನ್ನಲ್ಲೇ ದೀಪಿಕಾ ಕಥೆಯನ್ನು ಸೋರಿಕೆ ಮಾಡಿದ್ದಾರೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಆರೋಪಿಸಿದ್ದಾರೆ. ಚಿತ್ರದ ಬೋಲ್ಡ್ ದೃಶ್ಯಗಳು ಮತ್ತು 'ಎ' ಪ್ರಮಾಣ ಪತ್ರದ ಬಗ್ಗೆ ದೀಪಿಕಾ ಅವರ ಆಪ್ತ ವಲಯದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲ ಸಿನಿಮಾ ಮಾಡಿದ್ರೂ ದೀಪಿಕಾ ಬಿಟ್ಟಿಲ್ಲ ಸಣ್ಣ ಬುದ್ಧಿ; ಛೀ.. ಈ ರೀತಿ ಮಾಡೋದಾ?
ದೀಪಿಕಾ ಸಣ್ಣ ಬುದ್ಧಿ ವಿಚಾರ ರಿವೀಲ್
ರಾಜೇಶ್ ದುಗ್ಗುಮನೆ
|

Updated on: May 27, 2025 | 12:52 PM

Share

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಕನ್ನಡ ಚಿತ್ರರಂಗದಿಂದ ವೃತ್ತಿ ಜೀವನ ಆರಂಭಿಸಿ ಈಗ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಅವರನ್ನು ನೀಡಿದ್ದಾರೆ. ಅವರು ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇಷ್ಟೆಲ್ಲಾ ಇದ್ದರೂ ದೀಪಿಕಾ ಪಡುಕೋಣೆ ಸಣ್ಣ ಬುದ್ಧಿ ಬಿಟ್ಟಿಲ್ಲ. ಈ ವಿಚಾರವನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ರಿವೀಲ್ ಮಾಡಿದ್ದಾರೆ. ಪರೋಕ್ಷವಾಗಿ ಅವರು ಟೀಕಿಸಿದ್ದಾರೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕಥೆಯನ್ನು ಸಂದೀಪ್ ಅವರು ದೀಪಿಕಾಗೆ ಹೇಳಿದ್ದರು. ಅವರು ಕಥೆಯನ್ನು ಒಪ್ಪಿದ್ದರು. ಆದರೆ, ದೀಪಿಕಾ ಇಟ್ಟ ಡಿಮ್ಯಾಂಡ್ ಪೂರೈಸಲಾಗದ ಕಾರಣ ಅವರನ್ನು ಚಿತ್ರದಿಂದ ಕೈ ಬಿಡಲಾಯಿತು. ಇದಾದ ಬಳಿಕ ಈ ಸ್ಥಾನಕ್ಕೆ ತೃಪ್ತಿ ದಿಮ್ರಿ ಆಯ್ಕೆ ಆದರು. ಇಷ್ಟಕ್ಕೆ ಉರಿದುಕೊಂಡಿರೋ ದೀಪಿಕಾ ಅವರು ಸಣ್ಣ ಬುದ್ಧಿ ತೋರಿಸಿದ್ದಾರೆ.

ದೀಪಿಕಾ ಪಡುಕೋಣೆ ಅವರು ಚಿತ್ರದ ಕಥೆಯನ್ನು ಲೀಕ್ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಹಲವು ಬೋಲ್ಡ್ ದೃಶ್ಯಗಳು ಇದ್ದು, ಸಿನಿಮಾಗೆ ಎ ಪ್ರಮಾಣ ಪತ್ರ ಸಿಗುತ್ತದೆ ಎಂಬುದನ್ನು ದೀಪಿಕಾ ಆಪ್ತ ವಲಯದಲ್ಲಿ ರಿವೀಲ್ ಮಾಡಿದ್ದಾರೆ. ಚಿತ್ರದ ಕಥೆಯನ್ನು ಕೂಡ ಹೇಳಿದ್ದಾರೆ. ಆಪ್ತ ವಲಯದವರು ಇನ್ನಷ್ಟು ಮಂದಿಗೆ ಹೇಳಿದ್ದು, ಈಗ ಚಿತ್ರದ ಪ್ರಮುಖ ವಿಷಯಗಳೇ ಸೋರಿಕೆ ಆಗಿದೆ. ಇದರಿಂದ ಸಂದೀಪ್ ಸಿಟ್ಟಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
‘ನಾನು ಯಾರೊಂದಿಗೂ ಓಡಿ ಹೋಗಿಲ್ಲ, ಶ್ರೀಧರ್​​ಗೆ ಏಡ್ಸ್ ಬಂದಿತ್ತು’; ಪತ್ನಿ
Image
‘ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ’; ಅನುಶ್ರೀಗೆ ನೇರವಾಗಿ ಹೇಳಿದ ಮನೋಜ್
Image
ಸುರದ್ರೂಪಿ ಶ್ರೀಧರ್ ಕೊನೆಯ ದಿನಗಳು ಹೀಗಿದ್ದವು; ವೈರಿಗಳಿಗೂ ಹೀಗಾಗಬಾರದು
Image
‘ಪಾರು’ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ; ಫಲಿಸಲಿಲ್ಲ ಪ್ರಾರ್ಥನೆ

‘ನಾನು ಓರ್ವ ಕಲಾವಿದನಿಗೆ ಕಥೆ ಹೇಳುವಾಗ ಸಂಪೂರ್ಣ ನಂಬಿಕೆ ಇಡುತ್ತೇನೆ. ಯಾರಿಗೂ ಕಥೆಯನ್ನು ಹೇಳಬಾರದು ಎಂಬ ಒಪ್ಪಂದ ಇರುತ್ತದೆ. ಆದರೆ ನೀವು ನಿಯಮ ಮುರಿಯುವ ಮೂಲಕ ನಿಮ್ಮ ತನವನ್ನು ನೀವು ಬಹಿರಂಗಪಡಿಸಿದಂತಾಗಿದೆ. ಕಿರಿಯ ಕಲಾವಿದರನ್ನು ಕೆಳಕ್ಕೆ ಹಾಕಿದ್ದಲ್ಲದೆ, ನನ್ನ ಕಥೆಯನ್ನು ರಿವೀಲ್ ಮಾಡಿದ್ದೀರಿ’ ಎಂದು ಸಂದೀಪ್ ಟ್ವೀಟ್ ಮಾಡಿದ್ದಾರೆ. ಇದು ದೀಪಿಕಾಗೆ ಹೇಳಿದ್ದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಡಿಮ್ಯಾಂಡ್ ಮಾಡೋಕೆ ಶುರು ಮಾಡಿದ ದೀಪಿಕಾ ಪಡುಕೋಣೆ; ಕೈ ತಪ್ಪಿತು ಬಿಗ್ ಆಫರ್

ಮುಂದುವರಿದು, ‘ಇದು ನಿಮ್ಮ ಸ್ತ್ರೀವಾದದ ಅರ್ಥವೇ? ಒಬ್ಬ ನಿರ್ದೇಶಕನಾಗಿ ನಾನು ಸಾಕಷ್ಟು ಶ್ರಮ ಹಾಕಿರುತ್ತೇನೆ. ನಿಮಗೆ ಇದು ಅರ್ಥ ಆಗಿಲ್ಲ, ಆಗುವುದೂ ಇಲ್ಲ. ಮುಂದಿನ ಬಾರಿ ಪೂರ್ತಿ ಕಥೆಯನ್ನೇ ಹೇಳಿ. ನನಗೆ ಏನೂ ಫರಕ್ ಆಗುವದಿಲ್ಲ’ ಎಂದು ಸಿಟ್ಟನ್ನು ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ