Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುತ್ತಿರುವ ಕ್ಯೂಟ್ ನಟಿ ! ಅಭಿಮಾನಿಗಳು ಪುಲ್ ಹ್ಯಾಪಿ

ಖ್ಯಾತ ನಟಿ ಹಾಗೂ ಬ್ಯೂಟಿ ಕ್ಯೂನ್ ಟ್ರೆಸ್ ಕರಿಷ್ಮಾ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೆಬ್ರವರಿ 5 ರಂದು ಉದ್ಯಮಿ ವರುಣ್ ಬಂಗೇರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗುರುವಾರದಿಂದಲ್ಲೇ ಕರಿಷ್ಮಾ ಮನೆಯಲ್ಲಿ ಮದುವೆಯ ಸಂಭ್ರಮಗಳು ಪ್ರಾರಂಭವಾಗಿದ್ದು ಮತ್ತು ಹಿಂದೂ ಸಂಪ್ರಾದಯಗಳಂತೆ ಹಳದಿ ಶಾಸ್ತ್ರಗಳಲ್ಲಿ ಭಾಗಿಯಾಗುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಮದುವೆಯಾಗುತ್ತಿರುವ ಕ್ಯೂಟ್ ನಟಿ ! ಅಭಿಮಾನಿಗಳು ಪುಲ್ ಹ್ಯಾಪಿ
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Feb 04, 2022 | 3:14 PM

ಖ್ಯಾತ ನಟಿ ಹಾಗೂ ಬ್ಯೂಟಿ ಕ್ವೀನ್  ಕರಿಷ್ಮಾ ತನ್ನಾ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೆಬ್ರವರಿ 5 ರಂದು ಉದ್ಯಮಿ ವರುಣ್ ಬಂಗೇರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗುರುವಾರದಿಂದಲ್ಲೇ ಕರಿಷ್ಮಾ ಮನೆಯಲ್ಲಿ ಮದುವೆಯ ಸಂಭ್ರಮಗಳು ಪ್ರಾರಂಭವಾಗಿದ್ದು ಮತ್ತು ಹಿಂದೂ ಸಂಪ್ರಾದಯಗಳಂತೆ ಹಳದಿ ಶಾಸ್ತ್ರಗಳಲ್ಲಿ ಭಾಗಿಯಾಗುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ . ಸಂತಸದ ಸಂಭ್ರಮದ ವಾತರಣವನ್ನು ನನ್ನ ಮನೆಯಲ್ಲಿ ಆಗುತ್ತಿದೆ. ಬಂಧು-ಮಿತ್ರರು ಈ ಕಾರ್ಯದಲ್ಲಿ ಭಾಗವಾಗುತ್ತಿರುವುದು ತುಂಬಾ ಖುಷಿಯನ್ನು ನೀಡುತ್ತಿದ್ದಾರೆ. ಕ್ಯೂಟ್ ಫೋಟೋಗಳ ಮೂಲಕ ಅಭಿಮಾನಿಗಳ ಹೃದಯವನ್ನು ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕರಿಷ್ಮಾ ಮದುವೆ ಫೋಟೋಗಳು ಹೆಚ್ಚು ಹೆಚ್ಚು ಸದ್ದು ಮಾಡುತ್ತದೆ.

ಅವರು Instagram ನಲ್ಲಿ ಹಂಚಿಕೊಂಡಿರುವ ಫೋಟೋಗಳು ಅವರ ತಯಾರಿಯು ಅದ್ಧೂರಿಯಾಗಿದೆ ಎಂದು ತಿಳಿಸುತ್ತಿದೆ. ವಧು-ವರಿಗೆ ಅಭಿಮಾನಿಗಳು ವಿಶ್ ಮಾಡಿದ್ದು, ಅವರ ಸಂತಸದ ಕ್ಷಣದಲ್ಲಿ ನಾವು ಭಾಗಿಯಾಗುತ್ತೇವೆ ಎನ್ನುವ ಮಾತುಗಳನ್ನು ಕೂಡ ಹೇಳಿಕೊಂಡಿದ್ದಾರೆ. ವೈಯಕ್ತಿವಾಗಿ ಕರಿಷ್ಮಾ ಅವರು ಧರಿಸರುವ ಡ್ರೆಸ್ ಅವರ ಸಂತೋಷದ ದಿನಗಳನ್ನು ತಿಳಿಸುತ್ತದೆ. ಸ್ನ್ಯಾಪ್ ಜೊತೆಗೆ ಅವರು ತಮ್ಮ ಮದುವೆಯ ಬಗ್ಗೆ ಬರೆದುಕೊಂಡಿದ್ದಾರೆ, “ಸಂತೋಷದ ಸಮೃದ್ಧಿ, ಸ್ಮೈಲ್ ಎಲ್ಲವನ್ನೂ ಹೇಳುತ್ತದೆ.”

ಕರಿಷ್ಮಾ ಅವರು ಮದುವೆಗೆ ಸಾಕ್ಷಿಯಾಗಲಿರುವ ಮದುವೆ ಮಂಟಪ ಅಲಂಕಾರಗಳು ಹೆಚ್ಚು ಆಕರ್ಷನಿಯವಾಗಿದ್ದು, ಹೂಗಳಿಂದ, ಸಂಪ್ರಾದಯ ವಸ್ತುಗಳ ಜೋಡಣೆಯೇ ಎಲ್ಲವೂ ಕಣ್ಮಾನ ಸೆಳೆಯುವಂತಿದೆ. ಪ್ರತಿಯೊಂದನ್ನು ಅದ್ಭುತವಾಗಿ ಈ ಕಾರ್ಯಕ್ರಮದಲ್ಲಿ ನಿವರ್ಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹೂವಿನ ಅಲಂಕಾರ, ಆಭರಣಗಳ ಅಲಂಕಾರಗಳೊಂದಿಗೆ ಸಿದ್ಧಗೊಂಡ ನಟಿಯನ್ನು ಕಂಡು ಅಭಿಮಾನಿಗಳು ಪುಲ್ ಹ್ಯಾಪಿಯಾಗಿದ್ದಾರೆ. ಅಭಿಮಾನಿಗಳಿಗೂ ಕ್ಯೂಟ್, ಸೂಪರ್ ಆಗಿ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಗಳನ್ನು ಮಾಡಿಕೊಂಡಿದ್ದಾರೆ. ಹಲವಾರು ಸಂಘ -ಸಂಸ್ಥೆಗಳು ಹಾಗೂ ಬಾಲಿವುಡ್ ದಂಡು ಇವರ ಮದುವೆಗೆ ಸಾಕ್ಷಿಯಾಗಲಿದೆ. ಜೊತೆಗೆ ಜೋಡಿಗಳಿಗೆ ಶುಭಾಶಯ ಹಾರೈಕೆಯನ್ನು ಮಾಡಿದೆ. ಇದೀಗ ಸಮಾರಂಭದ ಚಿತ್ರಗಳು ವೈರಲ್ ಆಗಿದ್ದು ಮತ್ತು ಅಭಿಮಾನಿಗಳು ವಧುವಿನ ಮುಖದ ಮೇಲಿನ ಸಂತೋಷದ ಹೊಳಪಿನ ಮೇಲೆ ಗೀಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

39 ವರ್ಷ ವಯಸ್ಸಿನ ನಟಿಯ ಅಭಿಮಾನಿಗಳ ಬಳಗ ಕರಿಷ್ಮಾ ಮತ್ತು ವರುಣ್ ಕೈ ಹಿಡಿದು ಒಟ್ಟಿಗೆ ಪೋಸ್ ನೀಡುತ್ತಿರುವ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿವೆ. ಈ ಸಮಾರಂಭದಲ್ಲಿ ಇಬ್ಬರೂ ತಮ್ಮ ಮುಖಕ್ಕೆ ಅರಿಶಿನ ಹಚ್ಚಿಕೊಳ್ಳುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದು ವೀಡಿಯೊದಲ್ಲಿ, ಕರಿಷ್ಮಾ ವರುಣ್‌ನ ಮಡಿಲಲ್ಲಿ ಕುಳಿತು ವರಣ್ ಗೆ ಚುಂಬನ ನೀಡುತ್ತಿರುವ ಪೋಟೊವನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಮದುವೆ ಸಂಭ್ರದಲ್ಲಿರುವ ಕರಿಷ್ಮಾ ವರುಣ್ ಅವರು ವರಿಸಿಕೊಂಡು ಸುಖದಾಂಪತ್ಯವನ್ನು ನಡೆಸಲು ಸಜ್ಜಾಗುತ್ತಿದ್ದಾರೆ.

(Instagram ಕೃಪೆ)

Published On - 1:07 pm, Fri, 4 February 22