ದುಬಾರಿಯಾದ ಸಲ್ಮಾನ್ ಖಾನ್ ಸಿನಿಮಾ; 40 ದಿನ ರೀಶೂಟ್

'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಶೀರ್ಷಿಕೆ ಈಗ 'ಮಾತೃಭೂಮಿ' ಎಂದು ಬದಲಾಗಿದೆ. ಭಾರತ-ಚೀನಾ ಸಂಬಂಧಗಳ ಸೂಕ್ಷ್ಮತೆ ಮತ್ತು ರಾಜಕೀಯ ಸನ್ನಿವೇಶದಿಂದಾಗಿ ಈ ಬದಲಾವಣೆ ಮಾಡಲಾಗಿದ್ದು, ಕಥೆಯನ್ನು ಗಲ್ವಾನ್ ಸಂಘರ್ಷದಿಂದ ಶಾಂತಿ, ಸಾಮರಸ್ಯ ಮತ್ತು ಯುದ್ಧದ ಪರಿಣಾಮಗಳ ಕಡೆಗೆ ತಿರುಗಿಸಲಾಗಿದೆ. ಸದ್ಯ ಈ ವಿಷಯ ಬಾಲಿವುಡ್ ಅಂಗದಲ್ಲಿ ಚರ್ಚೆ ಆಗುತ್ತಿದೆ.

ದುಬಾರಿಯಾದ ಸಲ್ಮಾನ್ ಖಾನ್ ಸಿನಿಮಾ; 40 ದಿನ ರೀಶೂಟ್
ಸಲ್ಮಾನ್ ಖಾನ್

Updated on: Mar 17, 2026 | 1:25 PM

‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾದ ಟೈಟಲ್​​ನ ಇತ್ತೀಚೆಗೆ ‘ಮಾತೃಭೂಮಿ’ (Matrabhoomi) ಎಂದು ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ತಂಡ ರಿವೀಲ್ ಮಾಡಿರಲಿಲ್ಲ. ಹೀಗಿರುವಾಗಲೇ ಇದರ ಹಿಂದಿನ ಅಸಲಿ ವಿಷಯ ರಿವೀಲ್ ಆಗಿದೆ. ಸಲ್ಮಾನ್ ಖಾನ್ ಸಿನಿಮಾ ದುಬಾರಿ ಆಗಿದೆ. ತಂಡದವರು ಸಿನಿಮಾದ ಟೈಟಲ್ ಬದಲಿಸಿದ್ದು ಮಾತ್ರವಲ್ಲ, 40 ದಿನಗಳ ರೀ ಶೂಟ್ ಮಾಡುತ್ತಿದ್ದಾರೆ.

ಅಪೂರ್ವ ಲಖಿಯಾ ಅವರು ‘ಮಾತೃಭೂಮಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಸಂಘರ್ಷದ ಬಗ್ಗೆ ಸಿನಿಮಾ ಇದೆ. ದಿವಂಗತ ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. 2205ರ ಸೆಪ್ಟೆಂಬರ್​​ ಅಲ್ಲಿ ಲಡಾಕ್​​​ನಲ್ಲಿ ಸಿನಿಮಾ ಶೂಟ್ ಮಾಡುವ ಪ್ಲ್ಯಾನ್ ಇತ್ತು. ಡಿಸೆಂಬರ್ ವೇಳೆಗೆ ಆ ಭಾಗದಲ್ಲಿ ಸಿನಿಮಾ ಶೂಟ್ ಕಂಪ್ಲೀಟ್ ಮಾಡುವ ಆಲೋಚನೆ ಇತ್ತು.

ಈಗ ಸಿನಿಮಾ ದುಬಾರಿ ಆಗುತ್ತಿದೆ. ಫೆಬ್ರವರಿಯಿಂದಲೇ ಸಿನಿಮಾದ ರೀಶೂಟ್ ಮುಂಬೈನಲ್ಲಿ ನಡೆದಿದೆ ಎನ್ನಲಾಗಿದೆ. ಸಿನಿಮಾದ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿರುವ ಕಾರಣದಿಂದ ರೀ ಶೂಟಿಂಗ್ ನಡೆದಿದೆ ಎಂದು ಹೇಳಲಾಗುತ್ತಾ ಇದೆ.

ಚೈನೀಸ್ ಹಾಡನ್ನು ಸಿನಿಮಾದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುತ್ತಿದೆ. ಹಿಮೇಶ್ ರೇಶ್ಮಿಯಾ ಅವರು ಈ ಹಾಡನ್ನು ಕಂಪೋಸ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರು ಕೂಡ ಈ ಹಾಡಿನಲ್ಲಿ ಇರಲಿದ್ದಾರೆ. ರೆಕಾರ್​ಡ್ ಮುಗಿದ ಬಳಿಕ ಹಾಡಿನ ಶೂಟ್ ನಡೆಯಲಿದೆ.

ಇದನ್ನೂ ಓದಿ: ‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆ ಬದಲು: ಸಲ್ಮಾನ್ ಖಾನ್ ಚಿತ್ರಕ್ಕೆ ಈಗ ‘ಮಾತೃಭೂಮಿ’ ಟೈಟಲ್

ಸದ್ಯದ ರಾಜಕೀಯ ಸನ್ನಿವೇಶಗಳ ಕಾರಣದಿಂದ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಥೆ ಬದಲಿಸಲಾಗಿದೆ. ಗಲ್ವಾನ್ ಸಂಘರ್ಷದ ಮೇಲೆ ಮಾತ್ರ ಕೇಂದ್ರೀಕರಿಸುವ ಬದಲು ಶಾಂತಿ, ಸಾಮರಸ್ಯ ಮತ್ತು ಯುದ್ಧ ಮಾಡುವುದರಿಂದ ಹೋಗುವ ಜೀವಗಳ ವಿಷಯದ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:20 pm, Tue, 17 March 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us