AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಆಗಲಿದೆ ದುರಂತ ಅಂತ್ಯ ಕಂಡ ನಟಿಯ ಜೀವನ

Bollywood news in Kannada: ಸಿನಿಮಾ ನಟ ಅಥವಾ ನಟಿಯರ ಬಗ್ಗೆ ಸಿನಿಮಾಗಳು ಆಗುವುದು ಸಾಮಾನ್ಯ. ಈಗಾಗಲೇ ಸಾಕಷ್ಟು ಯಶಸ್ವಿ ನಟರ ಬಗ್ಗೆ ದುರಂತ ಅಂತ್ಯ ಕಂಡ ನಟಿಯರ ಬಗ್ಗೆ ಸಿನಿಮಾಗಳಾಗಿವೆ. ಇದೇ ಸಾಲಿಗೆ ಮತ್ತೊಂದು ಸಿನಿಮಾ ಸೇರುತ್ತಿದೆ. ಬಾಲಿವುಡ್​ನ ದಿಗ್ಗಜ ನಟಿಯೊಬ್ಬರ ಜೀವನ ತೆರೆಗೆ ಬರಲಿದೆ. ತೆರೆಯ ಮೇಲೆ ಮಿಂಚಿ ಸಣ್ಣ ವಯಸ್ಸಿಗೆ ಅಂತ್ಯ ಕಂಡ ನಟಿಯ ಬದುಕು ಸಿನಿಮಾ ಆಗಲಿದೆ.

ಸಿನಿಮಾ ಆಗಲಿದೆ ದುರಂತ ಅಂತ್ಯ ಕಂಡ ನಟಿಯ ಜೀವನ
Meena Kumari
ಮಂಜುನಾಥ ಸಿ.
|

Updated on: Jun 24, 2025 | 11:30 AM

Share

ಸಿನಿಮಾ (Cinema) ನಟರುಗಳ ಜೀವನವನ್ನು ಸಿನಿಮಾ ಮಾಡುವುದು ಹೊಸದೇನೂ ಅಲ್ಲ. ಈಗಾಗಲೇ ಕೆಲವು ನಟರು, ನಟಿಯರ ಜೀವನ ಆಧರಿಸಿದ ಸಿನಿಮಾಗಳು ತೆರೆಗೆ ಬಂದಿದ್ದು ಭಾರಿ ಯಶಸ್ಸನ್ನು ಗಳಿಸಿವೆ. ಗಮನಿಸಬೇಕಾದುದೆಂದರೆ ಯಶಸ್ವಿ ನಾಯಕನ ಜೀವನ ಸಿನಿಮಾ ಆಗುತ್ತವೆ. ಉದಾಹರಣೆಗೆ ‘ಸಂಜು’, ‘ಎನ್​ಟಿಆರ್’ ಇತರೆ. ಆದರೆ ಯಶಸ್ವಿ ನಾಯಕಿಯರ ಜೀವನ ಕತೆ ಸಿನಿಮಾ ಆಗುವುದಿಲ್ಲ ಬದಲಿಗೆ ದುರಂತ ಅಂತ್ಯ ಕಂಡ ನಟಿಯರ ಜೀವನವಷ್ಟೆ ಸಿನಿಮಾ ಆಗುತ್ತದೆ. ಸಿಲ್ಕ್ ಸ್ಮಿತಾ, ಕನ್ನಡದ ನಟಿ ಕಲ್ಪನಾ, ಶಕೀಲಾ, ಸಾವಿತ್ರಿ ಇತರೆ ಇತರೆ, ಇದೇ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೇರುತ್ತಿದೆ.

ಬಾಲಿವುಡ್ ನಟಿ ಮೀನಾ ಕುಮಾರಿಯ ಜೀವನ ಕತೆ ಸಿನಿಮಾ ಆಗಲಿದೆ. ಮಹಜಬೀನ್ ಬಾನೊ ಅಲಿಯಾಸ್ ಮೀನಾ ಕುಮಾರಿ, ಬಾಲಿವುಡ್​ನ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದವರು. ಭಾರತದಲ್ಲಿ ಮೊದಲಿಗೆ ಸಿನಿಮಾ ಪ್ರಾರಂಭವಾದ ಹೊಸತರಲ್ಲಿ ನಾಯಕಿಯಾಗಿ ನಟಿಸಿದ ಕೆಲವೇ ನಟಿಯರಲ್ಲಿ ಮೀನಾ ಕುಮಾರಿ ಸಹ ಒಬ್ಬರು. 1938 ರಲ್ಲಿ ತಮ್ಮ ಎಂಟನೇ ವಯಸ್ಸಿಗೆ ವಯಸ್ಸಿಗೆ ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಮೀನಾ ಕುಮಾರಿ, ತಮ್ಮ 13ನೇ ವಯಸ್ಸಿಗೆ ನಾಯಕಿಯಾದರು.

ಮೀನಾ ಕುಮಾರಿ ಸಿನಿಮಾ ವೃತ್ತಿ ಜೀವನ ಅದ್ಭುತವಾಗಿಯೇ ಇತ್ತು. ಆದರೆ ಮೀನಾರ ಖಾಸಗಿ ಬದುಕು ನರಕ ಸದೃಷವಾಗಿತ್ತು. ಅದಕ್ಕೆ ಕಾರಣ ಅವರು ಪ್ರೀತಿಸಿ ಮದುವೆಯಾದ ಕಮಲ್ ಅಮ್ರೋಹಿ. ಅದಾಗಲೇ ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿದ್ದ ಕಮಲ್ ಅನ್ನು ಗುಟ್ಟಾಗಿ ಮೀನಾ ಕುಮಾರಿ ಮದುವೆ ಆಗಿದ್ದರು. ಆದರೆ ಆ ಮದುವೆಯಿಂದಲೇ ಅವರು ಜೀವನದ ನೆಮ್ಮದಿ ಕಳೆದುಕೊಳ್ಳುವಂತಾಯ್ತು. ಪತಿಯಿಂದ ಸಾಕಷ್ಟು ಹಿಂಸೆ, ನೋವುಗಳನ್ನು ಅನುಭವಿಸಿದ ಮೀನಾ ಕುಮಾರಿ, ಕುಡಿತಕ್ಕೆ ದಾಸರಾದರು. ಪ್ರತಿ ದಿನ ಬಾಟಲುಗಟ್ಟಲೆ ಕುಡಿಯಲು ಆರಂಭಿಸಿದರು. ಕೊನೆಗೆ ಕೇವಲ 38 ವರ್ಷ ವಯಸ್ಸಿನವರಾಗಿದ್ದಾಗ ಲಿವರ್ ಸಮಸ್ಯೆಯಿಂದ ಅಸುನೀಗಿದರು.

ಇದನ್ನೂ ಓದಿ:ಅನುಪಮಾ ಪರಮೇಶ್ವರನ್ ಸಿನಿಮಾಗೆ ಸೆನ್ಸಾರ್ ಕಿರಿಕ್

ಈಗ ಮೀನಾ ಕುಮಾರಿ ಬದುಕು ಸಿನಿಮಾ ಆಗುತ್ತಿದ್ದು, ನಟಿ ಕಿಯಾರಾ ಅಡ್ವಾಣಿಯನ್ನು ಮೀರಾ ಕುಮಾರಿ ಪಾತ್ರದಲ್ಲಿ ನಟಿಸುವಂತೆ ಕೋರಲಾಗಿದೆ. ಪ್ರಸ್ತುತ ತಾಯಿ ಆಗುವ ಖುಷಿಯಲ್ಲಿರುವ ಕಿಯಾರಾ ಅಡ್ವಾಣಿ ಆಫರ್​ಗೆ ಇನ್ನೂ ಓಕೆ ಎಂದಿಲ್ಲ. ಇದೀಗ ಮತ್ತೊಬ್ಬ ನಟಿಯ ಹುಡುಕಾಟ ನಡೆಯುತ್ತಿದೆ. ಮೀನಾ ಕುಮಾರಿ ಬದುಕಿನ ಬಗ್ಗೆ ಈಗಾಗಲೇ ಕೆಲವು ಡಾಕ್ಯುಮೆಂಟರಿಗಳು, ಪುಸ್ತಕಗಳನ್ನು ಬರೆಯಲಾಗಿದೆ. ಇದೇ ಮೊದಲ ಬಾರಿಗೆ ಅವರ ಬದುಕಿನ ಬಗ್ಗೆ ಸಿನಿಮಾ ನಿರ್ಮಾಣ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ