ಪಾಕಿಸ್ತಾನಿ ನಟಿ ಜೊತೆ ಸಿನಿಮಾ ಮಾಡಿದ ದಿಲ್ಜಿತ್ ದೊಸಾಂಜ್ಗೆ ಬ್ಯಾನ್ ಬಿಸಿ
ಪಾಕ್ ನಟಿ ಹಾನಿಯಾ ಆಮಿರ್ ಮತ್ತು ದಿಲ್ಜಿತ್ ದೊಸಾಂಜ್ ಅವರು ‘ಸರ್ದಾರ್ ಜಿ 3’ ಸಿನಿಮಾದಲ್ಲಿ ನಟಿಸಿದ್ದಾರೆ. ವಿದೇಶದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಅದರ ಪ್ರಚಾರದಲ್ಲಿ ದಿಲ್ಜಿತ್ ದೊಸಾಂಜ್ ಅವರು ಭಾಗಿಯಾಗಿದ್ದಾರೆ. ಪಾಕ್ ನಟಿ ಜೊತೆ ಸಿನಿಮಾ ಮಾಡಿದ್ದಕ್ಕಾಗಿ ದಿಲ್ಜಿತ್ ದೊಸಾಂಜ್ ಅವರನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಖ್ಯಾತ ಗಾಯಕ, ನಟ ದಿಲ್ಜಿತ್ ದೊಸಾಂಜ್ (Diljit Dosanjh) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಪಾಕಿಸ್ತಾನಿ ನಟಿ ಹಾನಿಯಾ ಆಮಿರ್ ಜೊತೆ ಸಿನಿಮಾ ಮಾಡಿದ್ದರಿಂದ ದಿಲ್ಜಿತ್ ದೊಸಾಂಜ್ ಅವರಿಗೆ ಸಂಕಷ್ಟ ಶುರುವಾಗಿದೆ. ಹೌದು, ‘ಸರ್ದಾರ್ ಜಿ 3’ (Sardaar Ji 3) ಸಿನಿಮಾದಲ್ಲಿ ದಿಲ್ಜಿತ್ ದೊಸಾಂಜ್ ಮತ್ತು ಹಾನಿಯಾ ಆಮಿರ್ (Hania Aamir) ನಟಿಸಿದ್ದಾರೆ. ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಗುತ್ತಿದೆ. ಇದರ ಪ್ರಚಾರದಲ್ಲಿ ದಿಲ್ಜಿತ್ ದೊಸಾಂಜ್ ಅವರು ಭಾಗಿಯಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ದಿಲ್ಜಿತ್ ದೊಸಾಂಜ್ ಅವರನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೂಡ ಕೇಳಿಬಂದಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಇದೆ. ಪಾಕ್ ಉಗ್ರರ ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಬಳಿಕ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿತ್ತು. ಆಗ ಪಾಕ್ ಕಲಾವಿದರನ್ನು ಭಾರತದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಯಿತು. ಅಲ್ಲದೇ ಪಾಕಿಸ್ತಾನಕ್ಕೆ ಸಂಬಂಧಿಸಿದ ಯಾವುದೇ ಮನರಂಜನಾ ಕಂಟೆಂಟ್ಗಳು ಭಾರತದಲ್ಲಿ ಪ್ರಸಾರ ಆಗಬಾರದು ಎಂದು ಆದೇಶ ಹೊರಡಿಸಲಾಯಿತು.
ಇಷ್ಟೆಲ್ಲ ಸಂಘರ್ಷ ಇದ್ದರೂ ಕೂಡ ದಿಲ್ಜಿತ್ ದೊಸಾಂಜ್ ಅವರು ‘ಸರ್ದಾರ್ ಜಿ 3’ ಪಂಜಾಬಿ ಸಿನಿಮಾದಲ್ಲಿ ಪಾಕ್ ನಟಿ ಹಾನಿಯಾ ಆಮಿರ್ ಜೊತೆ ನಟಿಸಿದ್ದಾರೆ. ಭಾರತದಲ್ಲಿ ಈ ಚಿತ್ರದ ಬಿಡುಗಡೆಗೆ ಅವಕಾಶ ಇಲ್ಲ. ಹಾಗಾಗಿ ವಿದೇಶದಲ್ಲಿ ಮಾತ್ರ ಬಿಡುಗಡೆ ಆಗುತ್ತಿದೆ. ಇದರ ಟ್ರೇಲರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ದಿಲ್ಜಿತ್ ದೊಸಾಂಜ್ ಹಂಚಿಕೊಂಡಿದ್ದಾರೆ. ಇದು ವಿವಾದಕ್ಕೆ ಕಾರಣ ಆಗಿದೆ.
ಪಂಜಾಬಿ ಸಿನಿಮಾದಲ್ಲಿ ಪಾಕಿಸ್ತಾನದ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಭಾರತದಲ್ಲಿ ನಟಿಯರೇ ಇಲ್ಲವೇ ಎಂದು ಜನರು ಖಾರವಾಗಿ ಕೇಳುತ್ತಿದ್ದಾರೆ. ‘ಸರ್ದಾರ್ ಜಿ 3’ ಸಿನಿಮಾದ ಬಿಡುಗಡೆ ಭಾರತದಲ್ಲಿ ಸೆನ್ಸಾರ್ ಮಂಡಳಿ ಅನುಮತಿ ನೀಡಿಲ್ಲ. ಹಾಗಾಗಿ ಬೇರೆ ದೇಶಗಳಲ್ಲಿ ಮಾತ್ರ ರಿಲೀಸ್ ಆಗಲಿದೆ.
ಇದನ್ನೂ ಓದಿ: ಪುಟ್ಟ ಬಾಲಕಿಗೆ ಫ್ರೀ ಟಿಕೆಟ್ ನೀಡಿದ ಗಾಯಕ ದಿಲ್ಜಿತ್ ದೊಸಾಂಜ್; ವಿಡಿಯೋ ವೈರಲ್
ದಿಲ್ಜಿತ್ ದೊಸಾಂಜ್ ಅವರು ಪಾಕಿಸ್ತಾನದ ನಟಿ ಹಾನಿಯಾ ಆಮಿರ್ ಜೊತೆ ಸಿನಿಮಾ ಮಾಡಿದ್ದೂ ಅಲ್ಲದೇ, ಆ ಸಿನಿಮಾದ ಪ್ರಚಾರವನ್ನೂ ಮಾಡುತ್ತಿರುವುದಕ್ಕೆ ಅವರನ್ನು ಬ್ಯಾನ್ ಮಾಡಬೇಕು ಎಂದು ಭಾರತೀಯ ಸಿನಿಮಾ ಹಾಗೂ ಕಿರುತೆರೆಯ ನಿರ್ದೇಶಕರ ಒಕ್ಕೂಟವು ಒತ್ತಾಯಿಸಿದೆ. ಸಿನಿಮಾದ ನಿರ್ದೇಶಕ, ನಿರ್ಮಾಪಕರನ್ನೂ ಬ್ಯಾನ್ ಮಾಡಿ ಎಂಬ ಒತ್ತಾಯ ಕೇಳಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








