Miss India: ಮಿಸ್​ ಇಂಡಿಯಾ ಗೆದ್ದ ಸಿನಿ ಶೆಟ್ಟಿಗೆ ಸಿಗುತ್ತೆ ದೊಡ್ಡ​​ ಚಾನ್ಸ್​; ಹೀಗೆ ಬಾಲಿವುಡ್ ಟಿಕೆಟ್​ ಪಡೆದವರ ಲಿಸ್ಟ್​ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Jul 04, 2022 | 1:10 PM

Miss India Sini Shetty: ಕರ್ನಾಟಕ ಮೂಲದ ಸುಂದರಿ ಸಿನಿ ಶೆಟ್ಟಿ ಅವರು 2022ರ ಮಿಸ್​ ಇಂಡಿಯಾ ಪಟ್ಟಕ್ಕೆ ಏರಿದ್ದಾರೆ. ಶೀಘ್ರದಲ್ಲೇ ಅವರಿಗೆ ಬಾಲಿವುಡ್​ನಿಂದ ದೊಡ್ಡ ದೊಡ್ಡ ಆಫರ್​ ಸಿಗಲಿದೆ.

Miss India: ಮಿಸ್​ ಇಂಡಿಯಾ ಗೆದ್ದ ಸಿನಿ ಶೆಟ್ಟಿಗೆ ಸಿಗುತ್ತೆ ದೊಡ್ಡ​​ ಚಾನ್ಸ್​; ಹೀಗೆ ಬಾಲಿವುಡ್ ಟಿಕೆಟ್​ ಪಡೆದವರ ಲಿಸ್ಟ್​ ಇಲ್ಲಿದೆ..
Follow us on

ಫ್ಯಾಷನ್​ ಲೋಕಕ್ಕೂ ಚಿತ್ರರಂಗಕ್ಕೂ ಹತ್ತಿರದ ನಂಟು. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹಳ ಬೇಗ ಸಿನಿಮಾ ಜಗತ್ತಿನ ಪರಿಚಯ ಆಗುತ್ತದೆ. ಮಿಸ್​ ಇಂಡಿಯಾ (Miss India), ಮಿಸ್​ ವರ್ಲ್ಡ್​ ರೀತಿಯ ಕಿರೀಟ ಗೆದ್ದರೆ ಅನೇಕ ಅವಕಾಶಗಳು ಹರಿದು ಬರುತ್ತವೆ. ಅದರಲ್ಲೂ ಬಾಲಿವುಡ್​ ಲೋಕಕ್ಕೆ ಎಂಟ್ರಿ ಪಡೆಯಲು ನೇರ ಟಿಕೆಟ್​ ಸಿಗುತ್ತದೆ. ಆ ರೀತಿ ಬಿ-ಟೌನ್​ ಪ್ರವೇಶ ಪಡೆದವರ ದೊಡ್ಡ ಲಿಸ್ಟ್​ ಇದೆ. ಈಗ ಕರ್ನಾಟಕ ಮೂಲದ ಬೆಡಗಿ ಸಿನಿ ಶೆಟ್ಟಿ ಅವರು ಫೆಮಿನಾ ಮಿಸ್​ ಇಂಡಿಯಾ 2022 (Miss India 2022) ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಎಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸಿನಿ ಶೆಟ್ಟಿ (Miss India Sini Shetty) ಅವರಿಗೆ ಖಂಡಿತವಾಗಿ ಬಾಲಿವುಡ್​ ಮಂದಿ ಆಫರ್ ನೀಡುತ್ತಾರೆ. ಅವರು ಯಾವ ಪ್ರಾಜೆಕ್ಟ್​ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಸೌಂದರ್ಯ ಸ್ಪರ್ಧೆ ಗೆದ್ದು ಹಿಂದಿ ಚಿತ್ರರಂಗಕ್ಕೆ ಪ್ರವೇಶ ಪಡೆದ ನಟಿಯರು ಅನೇಕರಿದ್ದಾರೆ.

  1. ಜೂಹಿ ಚಾವ್ಲಾ – ಮಿಸ್​ ಇಂಡಿಯಾ ಯೂನಿವರ್ಸ್​ 1984: ಕೇವಲ 17ನೇ ವಯಸ್ಸಿನಲ್ಲೇ ಜೂಹಿ ಚಾವ್ಲಾ ಅವರು ಮಿಸ್​ ಇಂಡಿಯಾ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡರು. ನಂತರ ಅವರು ಬಾಲಿವುಡ್​ಗೆ ಕಾಲಿಟ್ಟು ಮಿಂಚಿದರು. ಬಳಿಕ ಕನ್ನಡ ಸೇರಿ ಅನೇಕ ಭಾಷೆಯ ಚಿತ್ರದಲ್ಲಿ ನಟಿಸಿದರು.
  2. ಐಶ್ವರ್ಯಾ ರೈ – ಮಿಸ್​ ವರ್ಲ್ಡ್​ 1994: ಫ್ಯಾಷನ್​ ಲೋಕದಲ್ಲಿ ಸಕ್ರಿಯವಾಗಿದ್ದ ಐಶ್ವರ್ಯಾ ರೈ ಅವರು 1994ರಲ್ಲಿ ಮಿಸ್​ ವರ್ಲ್ಡ್​ ಸ್ಪರ್ಧೆ ಗೆದ್ದರು. 1997ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸೂಪರ್​ ಹಿಟ್​ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.
  3. ಸುಷ್ಮಿತಾ ಸೇನ್​ – ಮಿಸ್​ ಯೂನಿವರ್ಸ್​ 1994: ನಟಿ ಸುಷ್ಮಿತಾ ಸೇನ್​ ಅವರು 1994ರಲ್ಲಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡರು. ಅವರನ್ನು ಬಾಲಿವುಡ್​ ಕೈ ಬೀಸಿ ಕರೆಯಿತು. ಹಿಂದಿ ಬಳಿಕ ತಮಿಳು, ಬೆಂಗಾಲಿ ಭಾಷೆಯ ಸಿನಿಮಾಗಳಲ್ಲೂ ಸುಷ್ಮಿತಾ ಸೇನ್​ ನಟಿಸಿದರು.
  4. ಲಾರಾ ದತ್ತಾ – ಮಿಸ್​ ಯೂನಿವರ್ಸ್​ 2000: ಬಾಲಿವುಡ್​ಗೆ ಎಂಟ್ರಿ ನೀಡಲು ಲಾರಾ ದತ್ತ ಅವರಿಗೆ ಟಿಕೆಟ್​ ಸಿಕ್ಕಿದ್ದೇ ಬ್ಯೂಟಿ ಸ್ಪರ್ಧೆ ಗೆದ್ದ ಬಳಿಕ. 2000ರಲ್ಲಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಅವರು ಹಿಂದಿನ ಹಲವು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.
  5. ಇದನ್ನೂ ಓದಿ
    Miss World 2021: ವಿಶ್ವ ಸುಂದರಿ ಸ್ಪರ್ಧೆ ಗೆದ್ದ ಪೋಲೆಂಡ್​ನ ಕರೋಲಿನಾ ಬಿಲಾವ್ಸ್ಕಾ
    ಮಿಸ್​ ಯೂನಿವರ್ಸ್​ ಹರ್ನಾಜ್​ ಸಂಧು ಭಾರತಕ್ಕೆ ಬರುತ್ತಿದ್ದಂತೆ ಭೇಟಿಯಾಗಿ ಸೆಲ್ಫೀ ತೆಗೆದುಕೊಂಡ ಶಶಿ ತರೂರ್​; ಸಮಚಿತ್ತ, ಆಕರ್ಷಕ ಎಂದು ಹೊಗಳಿಕೆ
    ಮಿಸ್ ಯೂನಿವರ್ಸ್​ ಮತ್ತು ಮಿಸ್ ವರ್ಲ್ಡ್​ ಏನು ವ್ಯತ್ಯಾಸ? ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ?
    Viral Video: ‘ಮಿಸಸ್​ ಶ್ರೀಲಂಕಾ’ ವಿಜೇತೆಗೆ ವೇದಿಕೆ ಮೇಲೆಯೇ ಅವಮಾನ, ತಲೆಗೆ ಗಾಯ; ಕಿರೀಟ ಕಿತ್ತುಕೊಂಡ ಮಾಜಿ ವಿನ್ನರ್​, ಅಳುತ್ತ ನಡೆದ ವಿನ್ನರ್​
  6. ಪ್ರಿಯಾಂಕಾ ಚೋಪ್ರಾ – ಮಿಸ್​ ವರ್ಲ್ಡ್​ 2000: ಮಿಸ್​ ವರ್ಲ್ಡ್​ ಗೆದ್ದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ಗೆ ಕಾಲಿಟ್ಟರು. ಹಿಂದಿ ಚಿತ್ರರಂಗದಲ್ಲಿ ಭಾರಿ ಯಶಸ್ಸು ಪಡೆದ ಬಳಿಕ ಅವರು ಹಾಲಿವುಡ್​ಗೂ ಎಂಟ್ರಿ ನೀಡಿದರು.
  7. ಪೂಜಾ ಹೆಗ್ಡೆ – ಮಿಸ್​ ಯೂನಿವರ್ಸ್​ 2010: ಈಗ ನಟಿ ಪೂಜಾ ಹೆಗ್ಡೆ ಅವರು ಬಹುಬೇಡಿಕೆಯ ಹೀರೋಯಿನ್​ ಆಗಿ ಮೆರೆಯುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಗೆದ್ದಿದ್ದೇ ಅವರಿಗೆ ಚಿತ್ರರಂಗಕ್ಕೆ ಟಿಕೆಟ್​ ಸಿಗಲು ಕಾರಣ ಆಯ್ತು. ಈಗ ಅವರಿಗೆ ಕೈ ತುಂಬ ಆಫರ್​ಗಳಿವೆ.
  8. ರಾಕುಲ್​ ಪ್ರೀತ್​ ಸಿಂಗ್​ – ಮಿಸ್​ ಇಂಡಿಯಾ 2011: ನಟಿ ರಾಕುಲ್​ ಪ್ರೀತ್​ ಸಿಂಗ್​ ಅವರು 2011ರ ಮಿಸ್​ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 5ನೇ ಸ್ಥಾನ ಪಡೆದರು. 5 ಟೈಟಲ್​ಗಳನ್ನು ಅವರು ವಿನ್​ ಆದರು. ಬಳಿಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು ಯಶಸ್ಸು ಕಂಡರು.
  9. ಮಾನುಷಿ ಚಿಲ್ಲರ್​-  ಮಿಸ್​ ವರ್ಲ್ಡ್​ 2017: ಇತ್ತೀಚೆಗೆ ತೆರೆಕಂಡ ಅಕ್ಷಯ್​ ಕುಮಾರ್​ ನಟನೆಯ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರದಿಂದ ಬಾಲಿವುಡ್​ಗೆ ಕಾಲಿಟ್ಟರು ನಟಿ ಮಾನುಷಿ ಚಿಲ್ಲರ್​. 2017ರ ಮಿಸ್​ ವರ್ಲ್ಡ್​ ಕಿರೀಟ ಗೆದ್ದ ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ.
  10. ತಾಪ್ಸೀ ಪನ್ನು, ತನುಶ್ರೀ ದತ್ತ, ಊರ್ವಶಿ ರೌಟೇಲಾ, ಜಾಕ್ವೆಲಿನ್​ ಫರ್ನಾಂಡಿಸ್​, ಇಶಾ ಗುಪ್ತಾ, ನಮ್ರತಾ ಶಿರೋಡ್ಕರ್​, ಸೆಲಿನಾ ಜೇಟ್ಲಿ, ದಿಯಾ ಮಿರ್ಜಾ, ನೇಹಾ ಧೂಪಿಯಾ ಸೇರಿದಂತೆ ಅನೇಕರು ಕೂಡ ಇದೇ ಹಾದಿಯಲ್ಲಿ ಬಾಲಿವುಡ್​ ಟಿಕೆಟ್​ ಗಿಟ್ಟಿಸಿದರು.

ಇದನ್ನೂ ಓದಿ: ಹೊಂಬಾಳೆ ಜತೆ ಸಿನಿಮಾ ಮಾಡಲಿದ್ದಾರೆ ಮಾಜಿ ಮಿಸ್​ ವರ್ಲ್ಡ್​ ಮಾನುಷಿ ಚಿಲ್ಲರ್​? ಕುತೂಹಲ ಮೂಡಿಸಿದ ಭೇಟಿ

ಮಿಸೆಸ್​ ವರ್ಲ್ಡ್​​​​ 2022ನಲ್ಲಿ ಭಾರತವನ್ನು ಪ್ರತಿನಿಧಿಸಿದ ನವದೀಪ್​ ಕೌರ್ ಯಾರು?

Published On - 1:01 pm, Mon, 4 July 22