ಖ್ಯಾತ ನಿರ್ದೇಶಕನ ಕಚೇರಿ ಮುಂದೆ ಕಾಣಿಸಿಕೊಂಡ ರಶ್ಮಿಕಾ; ಬಾಲಿವುಡ್​ನಲ್ಲಿ 3ನೇ ಚಿತ್ರ ಯಾರ ಜೊತೆ?

Rashmika Mandanna: ಅಕ್ಷಯ್​ ಕುಮಾರ್​ ನಟನೆಯ ‘ರಕ್ಷಾ ಬಂಧನ್​’ ಮತ್ತು ‘ಅತರಂಗಿ ರೇ’ ಚಿತ್ರಕ್ಕೆ ಆನಂದ್​ ಎಲ್​. ರಾಯ್​ ನಿರ್ದೇಶನ ಮಾಡುತ್ತಿದ್ದಾರೆ. ಅಂಥ ಪ್ರತಿಭಾನ್ವಿತ ನಿರ್ದೇಶಕನ ಕಚೇರಿ ಎದುರು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಖ್ಯಾತ ನಿರ್ದೇಶಕನ ಕಚೇರಿ ಮುಂದೆ ಕಾಣಿಸಿಕೊಂಡ ರಶ್ಮಿಕಾ; ಬಾಲಿವುಡ್​ನಲ್ಲಿ 3ನೇ ಚಿತ್ರ ಯಾರ ಜೊತೆ?
ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿ ಉಳಿದಿಲ್ಲ. ಬಾಲಿವುಡ್​ ಸಿನಿಮಾಗಳಲ್ಲೂ ಅವರಿಗೆ ಬೇಡಿಕೆ ಹೆಚ್ಚಿದೆ. ಈಗಾಗಲೇ ಅಮಿತಾಭ್​ ಬಚ್ಚನ್​, ಸಿದ್ದಾರ್ಥ್​ ಮಲ್ಹೋತ್ರಾ ಮುಂತಾದ ಸ್ಟಾರ್​ ಕಲಾವಿದರ ಜೊತೆ ನಟಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ. ಅಮಿತಾಭ್ ಜೊತೆ ‘ಗುಡ್​ ಬೈ’ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ (Mission Majnu) ಸಿನಿಮಾದಲ್ಲಿ ಅವರು ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾಗಳ ಬಿಡುಗಡೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ಅಷ್ಟರಲ್ಲಾಗಲೇ ಬಾಲಿವುಡ್​ನಲ್ಲಿ ರಶ್ಮಿಕಾ 3ನೇ ಸಿನಿಮಾ ಒಪ್ಪಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ. ಈಗ ಅವರು ಖ್ಯಾತ ನಿರ್ದೇಶಕ ಆನಂದ್​ ಎಲ್​. ರಾಯ್​ (Anand L Rai) ಅವರ ಕಚೇರಿ ಎದುರು ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಎಲ್ಲೆಲ್ಲೂ ಅವರ ಫೋಟೋಗಳು ವೈರಲ್​ ಆಗುತ್ತಿವೆ.

ಹಿಂದಿ ಚಿತ್ರರಂಗದಲ್ಲಿ ವಿಶೇಷ ರೀತಿಯ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡವರು ನಿರ್ದೇಶಕ ಆನಂದ್​ ಎಲ್​. ರಾಯ್​. ಅವರು ನಿರ್ದೇಶಿಸಿದ ‘ತನು ವೆಡ್ಸ್​ ಮನು’ ಚಿತ್ರವನ್ನು ಪ್ರೇಕ್ಷಕರು ಸಖತ್​ ಮೆಚ್ಚಿಕೊಂಡಿದ್ದರು. ಸದ್ಯ ಅವರು ಅಕ್ಷಯ್​ ಕುಮಾರ್​ ಜೊತೆ ಎರಡು ಸಿನಿಮಾ ಮಾಡುತ್ತಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ‘ರಕ್ಷಾ ಬಂಧನ್​’ ಮತ್ತು ‘ಅತರಂಗಿ ರೇ’ ಚಿತ್ರಕ್ಕೆ ಆನಂದ್​ ನಿರ್ದೇಶನ ಮಾಡುತ್ತಿದ್ದಾರೆ. ಅಂಥ ಪ್ರತಿಭಾನ್ವಿತ ನಿರ್ದೇಶಕನ ಕಚೇರಿ ಎಂದು ರಶ್ಮಿಕಾ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಆನಂದ್​ ಎಲ್​. ರಾಯ್​ ಜೊತೆ ರಶ್ಮಿಕಾ ಹೊಸ ಸಿನಿಮಾದ ಕಥೆ ಕೇಳಲು ಬಂದಿರಬಹುದು ಅಥವಾ ಈಗಾಗಲೇ ಅವರು ಚಿತ್ರಕ್ಕೆ ಸಹಿ ಹಾಕಿರಬಹುದು ಎಂದು ಊಹಿಸಲಾಗುತ್ತಿದೆ. ಹಾಗಾಗಿ ಅವರ ಮೂರನೇ ಬಾಲಿವುಡ್​ ಸಿನಿಮಾಗೆ ಆನಂದ್​ ಎಲ್​. ರಾಯ್​ ನಿರ್ದೇಶನ ಮಾಡುತ್ತಾರೆ ಎಂಬ ಗುಮಾನಿ ಮೂಡಿದೆ. ಆದರೆ ಈ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಹಲವು ಹಿಂದಿ ಸಿನಿಮಾ ಆಫರ್​ಗಳು ರಶ್ಮಿಕಾ ಅವರನ್ನು ಹುಡುಕಿಕೊಂಡು ಬರುತ್ತಿವೆ. ಆ ಸಿನಿಮಾದ ಮಾತುಕತೆ ಮತ್ತು ಕೆಲಸಗಳಿಗಾಗಿ ಪದೇಪದೇ ಅವರು ಮುಂಬೈಗೆ ತೆರಳಬೇಕಾಗಿದೆ. ಹಾಗಾಗಿ ಅವರು ಮುಂಬೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಅಲ್ಲದೇ ಗೋವಾದಲ್ಲೂ ಒಂದು ಐಷಾರಾಮಿ ಬಂಗಲೆ ಹೊಂದಿದ್ದಾರೆ. ಸಿನಿಮಾ ಮಾತ್ರವಲ್ಲದೇ ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿರುವ ಅವರು ಜಾಹೀರಾತುಗಳಿಂದಲೂ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಗಮನವೆಲ್ಲ ‘ಪುಷ್ಪ’ ಸಿನಿಮಾದ ಮೇಲಿದೆ. ಡಿ.17ರಂದು ಆ ಚಿತ್ರ ಬಿಡುಗಡೆ ಆಗಲಿದ್ದು, ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಜೋಡಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ:

ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಡೇಟಿಂಗ್​ ಮಾಡುವ ಬಗ್ಗೆ ರಶ್ಮಿಕಾ ಮಂದಣ್ಣ ಹೇಳೋದೇನು?

‘ರಶ್ಮಿಕಾ ಊಟ’ ಮಾರಾಟಕ್ಕಿದೆ; ಇದನ್ನು ತಿನ್ನೋದು ಹೇಗೆ? ವಿಡಿಯೋ ಸಮೇತ ವಿವರಿಸಿದ ನಟಿ

Click on your DTH Provider to Add TV9 Kannada