‘ಅಭಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ಎಂಎನ್​ಎಸ್ ವಿರೋಧ

Fahad Khan: ಫವಾದ್ ಖಾನ್, ವೀಣಾ ಕಪೂರ್ ನಟನೆಯ ‘ಅಭಿರ್ ಗುಲಾಲ್’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಆದರೆ ಈ ಸಿನಿಮಾಕ್ಕೆ ಎಂಎನ್​ಎಸ್ ಮತ್ತು ಶಿವಸೇನಾ ಸಂಘಟನೆಗಳ ವಿರೋಧ ವ್ಯಕ್ತವಾಗಿದೆ. ಈ ಸಿನಿಮಾ ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲು ಬಿಡಲ್ಲ ಎಂದಿದೆ ಸಂಘಟನೆಗಳು.

‘ಅಭಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ಎಂಎನ್​ಎಸ್ ವಿರೋಧ
Fawad Khan

Updated on: Apr 02, 2025 | 5:18 PM

ಪಾಕಿಸ್ತಾನಿ ನಟ ಫವಾದ್ ಖಾನ್ (Fawad Khan) ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಫವಾದ್ ಖಾನ್ ‘ಅಭಿರ್ ಗುಲಾಲ್’ (Abhir Gulal) ಹಿಂದಿ ಸಿನಿಮಾದಲ್ಲಿ (Hindi Movie) ನಟಿಸಿದ್ದು, ಸಿನಿಮಾದಲ್ಲಿ ವಾಣಿ ಕಪೂರ್ ನಾಯಕಿ. ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ದಿನಾಂಕವೂ ಹತ್ತಿರವೇ ಇದೆ. ಆದರೆ ಇದೀಗ ಸಿನಿಮಾ ಬಿಡುಗಡೆಗೆ ಅಡ್ಡಿ-ಆತಂಕ ಎದುರಾಗಿದೆ. ಎಂಎನ್​ಎಸ್ (ಮಹಾರಾಷ್ಟ್ರ ನವನಿರ್ಮಾಣ ಸೇನ) ಈ ಸಿನಿಮಾದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದೆ.

ಎಂಎನ್​ಎಸ್​ನ ಅಮೆಯ್ ಕೋಪ್ಕರ್ ಮಾತನಾಡಿ, ‘ನಮಗೆ ಇತ್ತೀಚಗಷ್ಟೆ ಸಿನಿಮಾದ ಬಿಡುಗಡೆ ವಿಷಯ ತಿಳಿದು ಬಂತು. ನಾವು ಖಂಡಿತವಾಗಿಯೂ ‘ಅಭಿರ್ ಗುಲಾಲ್’ ಸಿನಿಮಾ ಮಹಾರಾಷ್ಟ್ರದಲ್ಲಿ ಬಿಡುಗಡೆ ಆಗಲು ಬಿಡುವುದಿಲ್ಲ. ಏಕೆಂದರೆ ಈ ಸಿನಿಮಾನಲ್ಲಿ ಪಾಕಿಸ್ತಾನಿ ನಟರು ನಟಿಸಿದ್ದಾರೆ. ಈ ಸಿನಿಮಾದ ಕುರಿತು ಇನ್ನಷ್ಟು ಮಾಹಿತಿಯನ್ನು ನಾವು ಕಲೆ ಹಾಕುತ್ತಿದ್ದೇವೆ. ಆ ನಂತರ ನಾವು ಈ ಸಿನಿಮಾ ಬಗ್ಗೆ ವಿವರವಾದ ಹೇಳಿಕೆ ನೀಡಲಿದ್ದೇವೆ’ ಎಂದಿದ್ದಾರೆ. ಎಂಎನ್​ಎಸ್ ಮಾತ್ರವೇ ಅಲ್ಲದೆ ಶಿವಸೇನಾ ಸಹ ಈ ಸಿನಿಮಾದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದೆ.

ಫವಾದ್ ಖಾನ್ ಪಾಕಿಸ್ತಾನದ ನಟರಾಗಿದ್ದು ಸುಮಾರು 10 ವರ್ಷದ ಬಳಿಕ ಅವರು ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಹಿಂದೆ ಫವಾದ್ ಖಾನ್, ಕರಣ್ ಜೋಹರ್ ನಿರ್ದೇಶನದ ‘ಯೇ ದಿಲ್ ಹೇ ಮುಷ್ಕಿಲ್’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾದ ಬಿಡುಗಡೆ ವೇಳೆ ಇದೇ ಎಂಎನ್​​ಎಸ್ ಮತ್ತು ಶೀವಸೇನೆ ಪ್ರತಿಭಟನೆಗಳನ್ನು ಮಾಡಿ, ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಗಲಾಟೆ ಎಬ್ಬಿಸಿತ್ತು. ಅದಾದ ಬಳಿಕ ಪಾಕಿಸ್ತಾನಿ ನಟರು ಭಾರತೀಯ ಸಿನಿಮಾದಲ್ಲಿ ನಟಿಸದಂತೆ ಅನಧಿಕೃತ ನಿಷೇಧವೇ ಹೇರಲಾಗಿತ್ತು.

ಇದನ್ನೂ ಓದಿ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ
ಮಹೇಶ್ ಬಾಬು ಜೊತೆ ನಟಿಸಿದರೂ ಸಿಗದ ಅದೃಷ್ಟ; ಈಗ ಗೂಗಲ್​ನಲ್ಲಿ ಕೆಲಸ
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ:ಭೇಷ್, ಭೇಷ್ ಎನ್ನುತ್ತಲೇ ದೂರ ತಳ್ಳಿದ ಬಾಲಿವುಡ್, ಸಿನಿಮಾದಿಂದ ಶ್ರೀಲೀಲಾ ಹೊರಕ್ಕೆ

ಆದರೆ 2023 ರಲ್ಲಿ ಪಾಕಿಸ್ತಾನಿ ನಟರು ಭಾರತದಲ್ಲಿ ನಟಿಸದಂತೆ ಹಾಗೂ ಪಾಕಿಸ್ತಾನಿ ಸಿನಿಮಾಗಳು ಭಾರತದಲ್ಲಿ ಬಿಡುಗಡೆ ಆಗದಂತೆ ನಿಷೇಧ ಹೇರುವಂತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿಯನ್ನು ಸುಪ್ರೀಂ ತಳ್ಳಿ ಹಾಕಿತು. ಹೀಗಾಗಿ ಇತ್ತೀಚೆಗೆ ಪಾಕಿಸ್ತಾನಿ ಸಿನಿಮಾಗಳು ಭಾರತದಲ್ಲಿ ಬಿಡುಗಡೆ ಆಗುತ್ತಿವೆ. ಫಹಾದ್ ಖಾನ್ ಸಹ ಸುಮಾರು 10 ವರ್ಷದ ಬಳಿಕ ಭಾರತೀಯ ಸಿನಿಮಾ ರಂಗಕ್ಕೆ ರೀ ಎಂಟ್ರಿ ನೀಡಿದ್ದಾರೆ.

ಇನ್ನು ಈಗ ಟೀಸರ್ ಬಿಡುಗಡೆ ಆಗಿರುವ ‘ಅಭಿರ್ ಗುಲಾಲ್’ ಸಿನಿಮಾ ಅನ್ನು ಆರ್ತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ. ಇದೊಂದು ಪ್ರೇಮಕತೆಯಾಗಿದ್ದು, ಭಾರತ ಮತ್ತು ಲಂಡನ್​ನಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ