
ಸೆಲೆಬ್ರಿಟಿಗಳ ಪ್ರತಿಯೊಂದು ನಡೆಯ ಮೇಲೂ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ಅವರ ವರ್ತನೆಯಲ್ಲಿ ಏನಾದರೂ ವ್ಯತ್ಯಾಸ ಕಾಣಿಸಿದರೆ ಕೂಡಲೇ ಗಾಸಿಪ್ಗಳು (Gossip) ಹುಟ್ಟಿಕೊಳ್ಳುತ್ತವೆ. ಪ್ರೀತಿ-ಪ್ರೇಮದ ವಿಚಾರಗಳು ಕಾಳ್ಗಿಚ್ಚಿನಂತೆ ಹರಡುತ್ತವೆ. ನಟಿ ಮೃಣಾಲ್ ಠಾಕೂರ್ ಅವರ ವಿಚಾರದಲ್ಲಿ ಈಗ ಅದೇ ರೀತಿ ಆಗಿದೆ. ಖ್ಯಾತ ಸಿಂಗರ್ ಬಾದ್ಷಾ (Badshah) ಜೊತೆ ಮೃಣಾಲ್ ಠಾಕೂರ್ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಇಬ್ಬರ ನಡುವೆ ಆಪ್ತತೆ ಹೆಚ್ಚಿರುವುದೇ ಇದಕ್ಕೆ ಕಾರಣ. ಈ ಗಾಸಿಪ್ಗಳಿಗೆ ಸ್ವತಃ ಬಾದ್ಷಾ ಅವರು ಸ್ಪಷ್ಟನೆ ನೀಡಿದ್ದಾರೆ. ಮೃಣಾಲ್ ಠಾಕೂರ್ (Mrunal Thakur) ಅವರ ಹೆಸರನ್ನು ಪ್ರಸ್ತಾಪ ಮಾಡದೆಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ನ ಕೆಲವು ಸೆಲೆಬ್ರಿಟಿಗಳು ಅದ್ದೂರಿಯಾಗಿ ದೀಪಾವಳಿ ಆಯೋಜಿಸುತ್ತಾರೆ. ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮೆಲ್ಲ ಸ್ನೇಹಿತರಿಗಾಗಿ ದೀಪಾವಳಿ ಹಬ್ಬದ ಔತಣ ಕೂಟ ಆಯೋಜಿಸಿದ್ದರು. ಈ ಪಾರ್ಟಿಗೆ ಬಂದಿದ್ದ ಮೃಣಾಲ್ ಠಾಕೂರ್ ಅವರು ಸಿಂಗರ್ ಬಾದ್ಷಾ ಜೊತೆ ಕಾಣಿಸಿಕೊಂಡರು. ಅವರಿಬ್ಬರು ಕೈ-ಕೈ ಹಿಡಿದು ನಡೆದಾಡಿದ ವಿಡಿಯೋ ವೈರಲ್ ಆಯಿತು. ಹಾಗಾಗಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ತುಂಬೆಲ್ಲ ಇವರ ಬಗ್ಗೆಯೇ ಗುಸುಗುಸು ಕೇಳಿಬರಲು ಆರಂಭಿಸಿದೆ.
ಮೃಣಾಲ್ ಠಾಕೂರ್ ಜೊತೆಗೆ ತಮ್ಮ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆಯೇ ಬಾದ್ಷಾ ಅವರು ಅಲರ್ಟ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ. ‘ಪ್ರೀತಿಯ ಇಂಟರ್ನೆಟ್ ಬಳಕೆದಾರರೇ.. ಮತ್ತೊಮ್ಮೆ ನಿಮ್ಮನ್ನು ನಿರಾಸೆ ಮಾಡಿದ್ದಕ್ಕೆ ಕ್ಷಮೆ ಇರಲಿ. ಆದರೆ ನೀವು ಊಹಿಸಿದಂತೆ ಏನೂ ಇಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಸಾಲುಗಳಲ್ಲಿ ಮೃಣಾಲ್ ಠಾಕೂರ್ ಹೆಸರು ಪ್ರಸ್ತಾಪಿಸಿಲ್ಲವಾದರೂ ಇದು ಅವರ ಬಗ್ಗೆಯೇ ಬರೆದಿದ್ದು ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ.
ಇದನ್ನೂ ಓದಿ: ಹೊಸ ಫೋಟೋಶೂಟ್ನಲ್ಲಿ ಮಿಂಚಿದ ಮೃಣಾಲ್ ಠಾಕೂರ್
ನಟಿ ಮೃಣಾಲ್ ಠಾಕೂರ್ ಅವರು ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಹೃತಿಕ್ ರೋಷನ್, ಶಾಹಿದ್ ಕಪೂರ್, ಜಾನ್ ಅಬ್ರಾಹಂ, ಫರ್ಹಾನ್ ಅಖ್ತರ್ ಮುಂತಾದ ಸ್ಟಾರ್ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆ ಅವರು ನಟಿಸಿದ ‘ಸೀತಾ ರಾಮಂ’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಚಿತ್ರದ ಯಶಸ್ಸಿನ ಬಳಿಕ ದಕ್ಷಿಣ ಭಾರತದಲ್ಲಿ ಅವರ ಬೇಡಿಕೆ ಹೆಚ್ಚಾಗಿದೆ. ಬಾದ್ಷಾ ಜೊತೆಗಿನ ಲವ್ ಗಾಸಿಪ್ ಬಗ್ಗೆ ಅವರಿನ್ನೂ ಪ್ರತಿಕ್ರಿಯೆ ನೀಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.