Raj Kundra: ಪತಿ ರಾಜ್​ ಕುಂದ್ರಾರ ನೀಲಿ ಚಿತ್ರ ದಂಧೆಯಲ್ಲಿ ಶಿಲ್ಪಾ ಶೆಟ್ಟಿಯೂ ಭಾಗಿ?!-ಮೌನ ಮುರಿದ ಮುಂಬೈ ಪೊಲೀಸರು

Shilpa Shetty: ಈಗ ಹಲವರು ಶಿಲ್ಪಾ ಶೆಟ್ಟಿ ಬಗ್ಗೆ ಮಾತನಾಡುತ್ತಿದ್ದಾರೆ. ಪತಿ ರಾಜಕುಂದ್ರಾರ ಈ ದಂಧೆಯ ಬಗ್ಗೆ ಅವರಿಗೆ ಗೊತ್ತಿರಲಿಲ್ಲವಾ? ಅವರೂ ಇದರಲ್ಲಿ ಭಾಗಿಯಾಗಿದ್ದಾರಾ? ಎಂಬಿತ್ಯಾಗಿ ಪ್ರಶ್ನೆಗಳು ಸಹಜವಾಗಿಯೇ ಎದ್ದಿವೆ.

Raj Kundra: ಪತಿ ರಾಜ್​ ಕುಂದ್ರಾರ ನೀಲಿ ಚಿತ್ರ ದಂಧೆಯಲ್ಲಿ ಶಿಲ್ಪಾ ಶೆಟ್ಟಿಯೂ ಭಾಗಿ?!-ಮೌನ ಮುರಿದ ಮುಂಬೈ ಪೊಲೀಸರು
ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ
Edited By:

Updated on: Jul 21, 2021 | 1:19 PM

ನೀಲಿ ಚಿತ್ರ (Porn) ಗಳನ್ನು ಚಿತ್ರೀಕರಿಸಿ ಅದನ್ನು ಹಲವು ಆ್ಯಪ್​ಗಳಿಗೆ ಅಪ್ಲೋಡ್ ಮಾಡುವ ದಂಧೆ ಮೂಲಕ ಹಣ ಗಳಿಸುತ್ತಿದ್ದ ಆರೋಪದ ಮೇಲೆ ಉದ್ಯಮಿ ರಾಜ್​ಕುಂದ್ರಾ (Raj Kundra)ರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರಾಜ್ ಕುಂದ್ರಾ ಕ್ರೆಂಡಿಂಗ್​ ಎಂಬ ಹೆಸರಿನ ಇಂಗ್ಲೆಂಡ್​ನ ಕಂಪನಿಯೊಂದರ ಮೇಲೆ 10 ಕೋಟಿ ರೂಪಾಯಿ ಹೂಡಿಕೆಯನ್ನೂ ಮಾಡಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ರಾಜ್​ ಕುಂದ್ರಾ ಸದ್ಯ ಪೊಲೀಸ್​ ಕಸ್ಟಡಿಯಲ್ಲೇ ಇದ್ದಾರೆ. ಈ ಮಧ್ಯೆ ರಾಜ್​ ಕುಂದ್ರಾ ಪ್ರಕರಣದಲ್ಲಿ ಯಾರೆಲ್ಲ ಸಂತ್ರಸ್ತರಿದ್ದೀರೋ ಅವರೆಲ್ಲ ಬಂದು ದೂರು ದಾಖಲಿಸಬಹುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಅದೆಲ್ಲದರ ಜತೆ ಈಗ ಹಲವರು ಶಿಲ್ಪಾ ಶೆಟ್ಟಿ ಬಗ್ಗೆ ಮಾತನಾಡುತ್ತಿದ್ದಾರೆ. ಪತಿ ರಾಜಕುಂದ್ರಾರ ಈ ದಂಧೆಯ ಬಗ್ಗೆ ಅವರಿಗೆ ಗೊತ್ತಿರಲಿಲ್ಲವಾ? ಅವರೂ ಇದರಲ್ಲಿ ಭಾಗಿಯಾಗಿದ್ದಾರಾ? ಎಂಬಿತ್ಯಾಗಿ ಪ್ರಶ್ನೆಗಳು ಸಹಜವಾಗಿಯೇ ಎದ್ದಿವೆ. ಈಗ ರಾಜ್​ ಕುಂದ್ರಾ ನೀಲಿಚಿತ್ರ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ಪಾತ್ರವಿದೆಯಾ ಎಂಬ ಬಗ್ಗೆ ಮುಂಬೈ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್​ ಭಾರಂಬೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್​ ಕುಂದ್ರಾ ಅವರ ನೀಲಿಚಿತ್ರ ಚಿತ್ರೀಕರಣ ದಂಧೆಯಲ್ಲಿ ಶಿಲ್ಪಾ ಶೆಟ್ಟಿಯವರೂ ಭಾಗಿಯಾಗಿದ್ದಾರೆ ಎಂಬುದಕ್ಕೆ ಇದುವರೆಗೂ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದಿದ್ದಾರೆ. ಪ್ರಸಕ್ತ ವಿಚಾರದ ಬಗ್ಗೆ ನಾವು ಇನ್ನಷ್ಟು ತನಿಖೆ ನಡೆಸುತ್ತಿದ್ದೇವೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಸಂತ್ರಸ್ತರೆನಿಸಿಕೊಂಡವರು ಮುಂದೆ ಬಂದು ಮುಂಬೈ ಕ್ರೈಂ ಬ್ರ್ಯಾಂಚ್​​ನಲ್ಲಿ ದೂರು ದಾಖಲಿಸಬೇಕು ಎಂದು ಹೇಳಿದ್ದಾರೆ.

ಈ ಸಂಬಂಧ ಮೊದಲ ಸಲ ಫೆಬ್ರವರಿಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಲೇ ಹಲವು ಕಲಾವಿದರು ಧ್ವನಿ ಎತ್ತಿದ್ದರು. ತಮ್ಮ ಬಳಿ ನಗ್ನ, ಅರೆನಗ್ನವಾಗಿ ನಟಿಸಲು ಹೇಳಲಾಗಿತ್ತು ಎಂದೂ ಬಹಿರಂಗಪಡಿಸಿದ್ದಾರೆ. ಈಗ ಎಲ್ಲವನ್ನೂ ವಿಸ್ತೃತ ತನಿಖೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿ ಇರುವ 1 ರೂಪಾಯಿಯ ಹಳೆ ನೋಟು ಸಹ ಲಕ್ಷ ಲಕ್ಷ ಗಳಿಸಿಕೊಡಬಹುದು; ಖರ್ಚು ಮಾಡೋ ಮುಂಚೆ ಈ ಲೇಖನ ಓದಿ

Published On - 11:23 am, Wed, 21 July 21