ತನುಶ್ರೀ ದತ್ತಾ ಟೀಕೆಗಳಿಗೆ ನಾನಾ ಮಗ ಮಲ್ಹಾರ್ ಪಾಟೇಕರ್ ಖಡಕ್ ತಿರುಗೇಟು

ದಿವಂಗತ ನಟ ನಾನಾ ಪಾಟೇಕರ್ ಅವರ ನಿಧನದ ಬಳಿಕ ನಟಿ ತನುಶ್ರೀ ದತ್ತಾ ಮಾಡಿರುವ ವಿವಾದಾತ್ಮಕ ಆರೋಪಗಳಿಗೆ ಅವರ ಮಗ ಮಲ್ಹಾರ್ ಪಾಟೇಕರ್ ತಿರುಗೇಟು ನೀಡಿದ್ದಾರೆ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಈಗಾಗಲೇ ಮುಕ್ತಾಯಗೊಂಡಿದೆ ಎಂದು ಸ್ಪಷ್ಟಪಡಿಸಿರುವ ಮಲ್ಹಾರ್, ಮುಗಿದ ಹೋದ ಹಳೆಯ ಪ್ರಕರಣವನ್ನು ಮತ್ತೆ ಕೆದುಕುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ತನುಶ್ರೀ ದತ್ತಾ ಟೀಕೆಗಳಿಗೆ ನಾನಾ ಮಗ ಮಲ್ಹಾರ್ ಪಾಟೇಕರ್ ಖಡಕ್ ತಿರುಗೇಟು
ನಾನಾ, ತನುಶ್ರೀ , ಮಲ್ಹಾರ್

Updated on: Oct 17, 2026 | 10:22 AM

ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಬಳಿಕ ಅವರ ಹಳೆಯ ಲೈಂಗಿಕ ಕಿರುಕುಳ ಆರೋಪದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ನಟಿ ತನುಶ್ರೀ ದತ್ತಾ ಅವರು ನಾನಾ ಪಾಟೇಕರ್ ಸಾವಿನ ಕುರಿತು ಹಾಗೂ ಹಿಂದಿನ ಪ್ರಕರಣದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಕುರಿತು ನಾನಾ ಪಾಟೇಕರ್ ಅವರ ಮಗ ಮಲ್ಹಾರ್ ಪಾಟೇಕರ್ ಇದೀಗ ಮೌನ ಮುರಿದ್ದಾರೆ.

ಮಲ್ಹಾರ್ ಪಾಟೇಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ತಂದೆಯ ಮೇಲಿನ ಆರೋಪಗಳು ಹಾಗೂ ಕಾನೂನು ಹೋರಾಟದ ಕುರಿತು ಸ್ಪಷ್ಟನೆ ನೀಡಿದ್ದಾರೆ. ‘ನ್ಯಾಯಾಲಯದಲ್ಲಿ ಈಗಾಗಲೇ ಈ ಪ್ರಕರಣ ಮುಕ್ತಾಯಗೊಂಡಿದೆ ಎಂದು. ಮುಗಿದು ಹೋದ ಹಳೆಯ ವಿಚಾರವನ್ನು ಮತ್ತೆ ಕೆದಕುವುದು ಸರಿಯಲ್ಲ’ ಎಂದು ಮಲ್ಹಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ ಎಂಟರಂದು ಗೋವಾದಲ್ಲಿ ಹೃದಯಾಘಾತದಿಂದ ನಾನಾ ಪಾಟೇಕರ್ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರವು ಪುಣೆಯ ದೋಂಜೆ ಫಾರ್ಮ್‌ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ನಟನ ಅಗಲಿಕೆಯ ನಂತರವೂ ತನುಶ್ರೀ ದತ್ತಾ ಅವರು ನಾನಾ ಪಾಟೇಕರ್ ವಿರುದ್ಧ ತೀವ್ರ ಟೀಕೆಗಳನ್ನು ಮುಂದುವರಿಸಿದ್ದರು.

ತನುಶ್ರೀ ದತ್ತಾ ಅವರು ನಾನಾ ಪಾಟೇಕರ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಾವಿನ ಸುತ್ತಲಿನ ಪರಿಸ್ಥಿತಿಗಳು ಮತ್ತು ಅಂತ್ಯಕ್ರಿಯೆಯ ಬಗ್ಗೆಯೂ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಅಲ್ಲದೆ ನಾನಾ ಪಾಟೇಕರ್ ವಿರುದ್ಧ ಹರಿಹಾಯ್ದು ವಿವಾದಾತ್ಮಕ ಪದಗಳನ್ನು ಬಳಸಿದ್ದರು. ಈ ಹೇಳಿಕೆಗಳು ಚಿತ್ರರಂಗದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದವು.

ಇದನ್ನೂ ಓದಿ: ತನುಶ್ರೀ ದತ್ತಾಗೆ ಕುಟುಂದವರಿಂದಲೇ ಕಿರುಕುಳ; ಕಣ್ಣೀರು ಹಾಕಿದ ನಟಿ

ತನುಶ್ರೀ ದತ್ತಾ ಅವರ ಟೀಕೆಗಳಿಗೆ ನೇರವಾಗಿ ಪ್ರತಿಕ್ರಿಯಿಸದ ಮಲ್ಹಾರ್ ಪಾಟೇಕರ್, ಸತ್ಯ ಏನೆಂಬುದು ಎಲ್ಲರಿಗೂ ಗೊತ್ತು ಎಂದಿದ್ದಾರೆ. ಕಾನೂನು ಪ್ರಕಾರ ಪ್ರಕರಣ ಈಗಾಗಲೇ ಮುಕ್ತಾಯ ಕಂಡಿದೆ ಎಂದು ಪುನರುಚ್ಚರಿಸಿದ್ದಾರೆ. ವಿವಾದಗಳನ್ನು ಸೃಷ್ಟಿಸುವವರ ಬಗ್ಗೆ ತಾವು ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:17 am, Sat, 17 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us