ಸಿನಿಮಾ ಟಿಕೆಟ್ ದರ ಏರಿಕೆ ಬಗ್ಗೆ ಅನೇಕರು ಅಪಸ್ವರ ಎತ್ತುತ್ತಲೇ ಇದ್ದಾರೆ. ಟಿಕೆಟ್ ದರ ದುಬಾರಿ ಆಗಿರುವುದರಿಂದ ಸಾಮಾನ್ಯ ಜನರು ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡೋಕೆ ಸಾಧ್ಯವಾಗುತ್ತಿಲ್ಲ ಎಂಬ ಮಾತು ಸದಾ ಚರ್ಚೆಯಲ್ಲಿದೆ. ವಿಶೇಷ ದಿನಂದು ಟಿಕೆಟ್ ದರ ಇಳಿಸುವ ಟ್ರೆಂಡ್ ಇತ್ತೀಚೆಗೆ ಜೋರಾಗಿದೆ. ‘ರಾಷ್ಟ್ರೀಯ ಸಿನಿಮಾ ದಿನ’ದ ಪ್ರಯುಕ್ತ ಅಕ್ಟೋಬರ್ 13ರಂದು ಟಿಕೆಟ್ ದರವನ್ನು 99 ರೂಪಾಯಿ ನಿಗದಿ ಮಾಡಲಾಗಿತ್ತು. ಇದು ‘ಜವಾನ್’ (Jawan Movie) ಚಿತ್ರಕ್ಕೆ ಸಹಕಾರಿ ಆಗಿದೆ. ಶುಕ್ರವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
ಕಳೆದ ವರ್ಷ ರಾಷ್ಟ್ರೀಯ ಸಿನಿಮಾ ದಿನಾಚರಣೆಯ ಪ್ರಯುಕ್ತ 75 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಇದು ‘ಬ್ರಹ್ಮಾಸ್ತ್ರ’ ಸಿನಿಮಾಗೆ ಸಹಕಾರಿ ಆಗಿತ್ತು. ಈ ಬಾರಿಯೂ ಅದೇ ರೀತಿ ಆಗಲಿದೆ ಎಂದು ಊಹಿಸಲಾಗಿತ್ತು. ಈ ಊಹೆ ಸರಿಯಾಗಿದೆ. ದೊಡ್ಡ ಸಿನಿಮಾಗಳು ಯಾವುದೂ ಈ ವಾರ ರಿಲೀಸ್ ಆಗಿಲ್ಲ. ಈ ಕಾರಣದಿಂದ ಈ ಮೊದಲು ರಿಲೀಸ್ ಆದ ಸಿನಿಮಾಗಳನ್ನೇ ನೋಡಲಾಗಿದೆ. ‘ಜವಾನ್’ ಸಿನಿಮಾ ಅಕ್ಟೋಬರ್ 13ರಂದು 5 ಕೋಟಿ ರೂಪಾಯಿ ಗಳಿಕೆ ಮಾಡಿದೆ.
‘ಜವಾನ್’ ಸಿನಿಮಾ 70ರಿಂದ 80 ಲಕ್ಷ ರೂಪಾಯಿ ಗಳಿಕೆ ಮಾಡುತ್ತಾ ಬರುತ್ತಿತ್ತು. 99 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದ್ದರಿಂದ ಶುಕ್ರವಾರ ಇದರ ಗಳಿಕೆ 5 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಇದರಿಂದ ‘ಜವಾನ್’ ಸಿನಿಮಾದ ಭಾರತದ ಕಲೆಕ್ಷನ್ 632 ಕೋಟಿ ರೂಪಾಯಿ ಹಾಗೂ ವಿಶ್ವ ಮಟ್ಟದಲ್ಲಿ 1125 ಕೋಟಿ ರೂಪಾಯಿ ಆಗಿದೆ.
ಯಾವ ಹಿಂದಿ ಚಿತ್ರವೂ 1100 ಕೋಟಿ ರೂಪಾಯಿ ಗಳಿಕೆಯನ್ನು ಮೀರಿರಲಿಲ್ಲ ಎನ್ನಲಾಗುತ್ತಿದೆ. ಈ ಸಾಧನೆಯನ್ನು ‘ಜವಾನ್’ ಸಿನಿಮಾ ಮಾಡಿ ತೋರಿಸಿದೆ. ಶಾರುಖ್ ಖಾನ್ ಅವರ ಹೋಂ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರದಿಂದ ಶಾರುಖ್ ಅವರು ಭರ್ಜರಿ ಲಾಭ ಕಂಡಿದ್ದಾರೆ.
ಇದನ್ನೂ ಓದಿ: ‘ಹಾಲಿವುಡ್ ಸ್ಟುಡಿಯೋ ಜೊತೆ ಮಾತುಕತೆ ನಡೆಯುತ್ತಿದೆ’; ‘ಜವಾನ್’ ಬಳಿಕ ಹೆಚ್ಚಿತು ಅಟ್ಲಿ ಬೇಡಿಕೆ
ಅಕ್ಷಯ್ ಕುಮಾರ್ ನಟನೆಯ ‘ಮಿಷನ್ ರಾಣಿಗಂಜ್’ ಸಿನಿಮಾಗೂ ‘ರಾಷ್ಟ್ರೀಯ ಸಿನಿಮಾ ದಿನ’ ವರದಾನವಾಗಿದೆ. ಈ ಸಿನಿಮಾ ಕೂಡ 5 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರದ ಒಟ್ಟಾರೆ ಗಳಿಕೆ 23.25 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಸ್ಟಾರ್ ಹೀರೋ. ಅವರ ಚಿತ್ರಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಉದಾಹರಣೆ ಇದೆ. ಆದರೆ, ಇತ್ತೀಚೆಗೆ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸಾಧಾರಣದಲ್ಲೇ ಸಾಧಾರಣ ಗಳಿಕೆ ಮಾಡುತ್ತಿವೆ. ‘ಮಿಷನ್ ರಾಣಿಗಂಜ್’ ಕೂಡ ಇದಕ್ಕೆ ಉತ್ತಮ ಉದಾಹರಣೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ