ಬಾಲಿವುಡ್ ನಟಿ ಆಲಿಯಾ ಭಟ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಯ ‘ಜಿಗ್ರಾ’ ಚಿತ್ರವು ಈ ವಾರ ಬಿಡುಗಡೆ ಕಾಣುತ್ತಿದೆ. ಅವರು ಈ ಚಿತ್ರಕ್ಕೆ ನಿರ್ಮಾಪಕಿ ಕೂಡ ಹೌದು. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗಿಗೂ ಡಬ್ ಆಗಿ ಬಿಡುಗಡೆ ಕಾಣುತ್ತಿದೆ. ‘ಏಷ್ಯನ್ ಸುರೇಶ್ ಎಂಟರ್ಟೇನ್ಮೆಂಟ್ಸ್’ ಈ ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡುತ್ತಿದೆ. ಅಕ್ಟೋಬರ್ 11ರಂದು ರಿಲೀಸ್ ಆಗಲಿರುವ ಈ ಚಿತ್ರದ ಪ್ರಚಾರಕ್ಕಾಗಿ ಆಲಿಯಾ ಭಟ್ ಅವರು ಹೈದರಾಬಾದ್ಗೆ ಬಂದಿದ್ದರು. ಈ ವೇಳೆ ಅವರು ನೀಡಿದ ಹೇಳಿಕೆ ಗಮನ ಸೆಳೆದಿದೆ.
ಆಲಿಯಾ ಭಟ್ ಅವರಿಗೆ ತೆಲುಗು ಚಿತ್ರರಂಗ ಹೊಸದೇನು ಅಲ್ಲ. ಅವರು ಅಭಿನಯಿಸಿದ್ದ ‘ಬ್ರಹ್ಮಾಸ್ತ್ರ’ ಚಿತ್ರವು ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿತ್ತು. ರಾಜಮೌಳಿ ಅವರು ನಿರ್ದೇಶನ ಮಾಡಿದ್ದ ‘ಆರ್ಆರ್ಆರ್’ ಚಿತ್ರದಲ್ಲಿ ಆಲಿಯಾ ಅವರು ನಟಿಸಿದ್ದರು. ಆಲಿಯಾ ನಿರ್ಮಾಣ ಮಾಡಿದ ಚಿತ್ರವು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು.
ಈ ಕಾರಣದಿಂದ ಹೈದರಾಬಾದ್ನಲ್ಲಿ ಆಲಿಯಾ ಭಟ್ ಅವರು ‘ಜಿಗ್ರಾ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಸಮಂತಾ ಅವರು ಅತಿಥಿಯಾಗಿ ಆಗಮಿಸಿದ್ದರು. ಆಲಿಯಾ ಅವರು ‘ನಾಟು ನಾಟು..’ ಹಾಡಿನ ಬಗ್ಗೆ ಮಾತನಾಡಿದರು.
ಇದನ್ನೂ ಓದಿ: ಮತ್ತೊಂದು ತೆಲುಗು ಸಿನಿಮಾದಲ್ಲಿ ಆಲಿಯಾ ಭಟ್? ನಿರ್ದೇಶಕ ಯಾರು?
‘ನಮ್ಮ ಮನೆಯಲ್ಲಿ ಯಾವಾಗಲೂ ನಾಟು ನಾಟು ಹಾಡನ್ನು ಪ್ಲೇ ಮಾಡುತ್ತೇವೆ. ನಮ್ಮ ಮಗಳು ರಹಾ ಈ ಹಾಡಿನ ದೊಡ್ಡ ಅಭಿಮಾನಿ. ಅವಳಿಗೆ ಹಾಡು ಕೇಳೋದು ಮಾತ್ರವಲ್ಲ, ಡ್ಯಾನ್ಸ್ ಮಾಡೋದು ಇಷ್ಟ. ನಾನು ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡೋದನ್ನು ನೋಡಿದ್ದಾಳೆ. ಈ ಕಾರಣಕ್ಕೆ ಅವಳೂ ಡ್ಯಾನ್ಸ್ ಮಾಡುತ್ತಾಳೆ. ಹೀಗಾಗಿ, ಹಾಡು ನನಗೆ ವಿಶೇಷ’ ಎಂದು ಆಲಿಯಾ ಹೇಳಿದ್ದಾರೆ.
ಆಲಿಯಾ ಭಟ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರವು ಕಳೆದ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಪ್ರೆಗ್ನೆನ್ಸಿ ಬಳಿಕ ಆಲಿಯಾ ದೊಡ್ಡ ಬ್ರೇಕ್ ಪಡೆದಿಲ್ಲ. ಈಗ ಅವರ ನಟನೆಯ ‘ಜಿಗ್ರಾ’ ರಿಲೀಸ್ ಆಗುತ್ತಿದೆ. ಇದಲ್ಲದೆ, ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಈ ಚಿತ್ರಕ್ಕೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ