ಸಿದ್ದಾರ್ಥ್ ಶುಕ್ಲಾ ಸಾವಿನ ಸುದ್ದಿಯನ್ನು ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಇಂದು ಸಿದ್ದಾರ್ಥ್ ಶುಕ್ಲಾ ಮನೆಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜನೆ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ಸಿದ್ದಾರ್ಥ್ ಕುಟುಂಬ ಎಲ್ಲರ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದು, ನಮ್ಮ ಪಾಡಿಗೆ ದುಃಖಿಸಲು ಬಿಟ್ಟುಬಿಡಿ ಎಂದು ಕೋರಿದೆ.
ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ ಸಿದ್ದಾರ್ಥ್ ಶುಕ್ಲಾಗೆ ಅಪಾರ ಅಭಿಮಾನಿಗಳಿದ್ದಾರೆ. ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಸಿ ಗೆದ್ದ ಬಳಿಕವಂತೂ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿತು. ಅವರೆಲ್ಲರೂ ಸಿದ್ದಾರ್ಥ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಈಗ ಸಿದ್ದಾರ್ಥ್ ಕುಟುಂಬದವರು ಆಯೋಜಿಸುತ್ತಿರುವ ಶ್ರದ್ಧಾಂಜಲಿ ಸಭೆಗೆ ಭಾಗವಹಿಸಲು ಎಲ್ಲ ಅಭಿಮಾನಿಗಳಿಗೆ ಅವಕಾಶ ನೀಡಲಾಗಿತ್ತು. ಜೂಮ್ ಮೀಟಿಂಗ್ ಮೂಲಕ ಅನೇಕರು ಪಾಲ್ಗೊಂಡಿದ್ದರು.
ಇದಾದ ಬೆನ್ನಲ್ಲೇ ಕುಟುಂಬ ಪತ್ರಿಕಾ ಪ್ರಟಣೆ ಹೊರಡಿಸಿದೆ. ‘ಸಿದ್ದಾರ್ಥ್ ಪಯಣದ ಭಾಗವಾಗಿರುವ ಮತ್ತು ಆತನಿಗೆ ಪ್ರೀತಿಯನ್ನು ನೀಡಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಅವನು ಈಗ ನಮ್ಮ ಹೃದಯದಲ್ಲಿ ಶಾಶ್ವತವಾಗಿ ವಾಸಿಸುತ್ತಿದ್ದಾನೆ. ಹೀಗಾಗಿ, ಇದು ಖಂಡಿತವಾಗಿಯೂ ಇಲ್ಲಿಗೆ ಮುಗಿಯುವುದಿಲ್ಲ. ನಮ್ಮ ಪಾಡಿಗೆ ದುಃಖಿಸಲು ಬಿಟ್ಟುಬಿಡಿ. ಮುಂಬೈ ಪೊಲೀಸರಿಗೆ ನಾವು ವಿಶೇಷ ಧನ್ಯವಾದ ಅರ್ಪಿಸುತ್ತಿದ್ದೇವೆ. ದಯವಿಟ್ಟು ಸಿದ್ದಾರ್ಥ್ನನ್ನು ನಿಮ್ಮ ಆಲೋಚನೆ ಮತ್ತು ಪ್ರಾರ್ಥನೆಯಲ್ಲಿ ಇರಿಸಿಕೊಳ್ಳಿ. ಓಂ ಶಾಂತಿ’ ಎಂದು ಕುಟುಂಬದವರು ಬರೆದಿದ್ದಾರೆ.
ಸಿದ್ದಾರ್ಥ್ ಶುಕ್ಲಾ ಜೊತೆ ನಟಿ ಶೆಹನಾಜ್ ಗಿಲ್ ಹೆಚ್ಚು ಆಪ್ತವಾಗಿದ್ದರು. ಇಬ್ಬರ ನಡುವೆ ಪ್ರೀತಿ ಇತ್ತು ಎಂಬುದು ಕೂಡ ಈಗ ರಹಸ್ಯವಾಗಿ ಉಳಿದಿಲ್ಲ. ಸಿದ್ದಾರ್ಥ್ ನಿಧನದ ಬಳಿಕ ಶೆಹನಾಜ್ ಅವರು ಮಾನಸಿಕವಾಗಿ ಕುಸಿದುಹೋಗಿದ್ದಾರೆ. ಅವರು ಕೂಡ ಈ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ.
ಇದನ್ನೂ ಓದಿ: ಮದುವೆ ಆಗದಿದ್ರೂ ಗಂಡ-ಹೆಂಡ್ತಿ ಥರ ಪವಿತ್ರವಾಗಿತ್ತು ಆ ಸಂಬಂಧ; ಸಿದ್ದಾರ್ಥ್-ಶೆಹನಾಜ್ ಬಗ್ಗೆ ಹೊರಬಿತ್ತು ಸುದ್ದಿ
ಸಿದ್ದಾರ್ಥ್ ಶುಕ್ಲಾ ಶ್ರದ್ದಾಂಜಲಿ ಸಭೆ: ಅಭಿಮಾನಿಗಳಿಗೂ ಆಹ್ವಾನ ನೀಡಿದ ತಾಯಿ; ಇಲ್ಲಿದೆ ಮೀಟಿಂಗ್ ಲಿಂಕ್