ನಟಿ ಅನನ್ಯಾ ಪಾಂಡೆ (Ananya Panday) ಅವರು ವೈಯಕ್ತಿಕ ಜೀವನದ ವಿಚಾರದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಇಶಾನ್ ಕಟ್ಟರ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇವರದ್ದು ಬ್ರೇಕಪ್ನಲ್ಲಿ ಕೊನೆ ಆಯಿತು. ಈಗ ಅವರು ಆದಿತ್ಯ ರಾಯ್ ಕಪೂರ್ (Aditya Roy Kapoor) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಅನೇಕ ಕಡೆಗಳಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಇವರು ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಇಂದು (ನವೆಂಬರ್ 16) ಆದಿತ್ಯ ರಾಯ್ ಕಪೂರ್ ಜನ್ಮದಿನ. ಅವರಿಗೆ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಆದಿತ್ಯ ಹಾಗೂ ಅನನ್ಯಾ ಅವರ ಆಸ್ತಿ (Net Worth) ಬಗ್ಗೆ ಇಲ್ಲಿದೆ ವಿವರ.
ಆದಿತ್ಯ ರಾಯ್ ಕಪೂರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಆಶಿಕಿ 2’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲಿಕೆ ಆಗುತ್ತದೆ. ಅನನ್ಯಾ ಪಾಂಡೆ ಕೂಡ ಕೆಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಸ್ಟಾರ್ ಕಿಡ್ ಎನ್ನುವ ಟೀಕೆಯನ್ನು ಅವರು ಆಗಾಗ ಎದುರಿಸುತ್ತಾರೆ.
ಅನನ್ಯಾ ಪಂಡೆ ಅವರು ಬಾಲಿವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಅನನ್ಯಾ ಪಾಂಡೆ. ‘ಖಾಲಿ ಪೀಲಿ’ ಮೊದಲಾದ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡರು. ‘ಲೈಗರ್’ ಸಿನಿಮಾ ಗೆಲ್ಲಲಿದೆ ಎಂದು ಭಾವಿಸಲಾಗಿತ್ತು. ಆದರೆ, ಸಿನಿಮಾ ಸೋತಿತು. ಅನನ್ಯಾ ಪಾಂಡೆ ಅವರ ಆಸ್ತಿ 40 ಕೋಟಿ ರೂಪಾಯಿ ಎನ್ನಲಾಗಿದೆ. ಸದ್ಯ ಒಂದು ದೊಡ್ಡ ಗೆಲುವಿಗಾಗಿ ಕಾದಿದ್ದಾರೆ.
ಇದನ್ನೂ ಓದಿ: ಹೊಸ ಮನೆ ಖರೀದಿಸಿ ಗೃಹ ಪ್ರವೇಶ ಮುಗಿಸಿದ ಅನನ್ಯಾ ಪಾಂಡೆ: ಬೆಲೆ ಎಷ್ಟು ಕೋಟಿ ಗೊತ್ತೆ?
ಆದಿತ್ಯ ರಾಯ್ ಕಪೂರ್ ಅವರು 2009ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಲಂಡನ್ ಡ್ರೀಮ್ಸ್’ ಅವರ ಮೊದಲ ಸಿನಿಮಾ. ಅನನ್ಯಾ ಪಾಂಡೆಗಿಂತ ಆದಿತ್ಯ ರಾಯ್ ಕಪೂರ್ ಶ್ರೀಮಂತ. ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಒಟ್ಟೂ ಆಸ್ತಿ 98 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸಿನಿಮಾ, ವೆಬ್ ಸೀರಿಸ್, ಜಾಹೀರಾತುಗಳಿಂದ ಆದಿತ್ಯ ರಾಯ್ ಕಪೂರ್ಗೆ ಹಣ ಬರುತ್ತಿದೆ.
ಇದನ್ನೂ ಓದಿ: ‘ನೀನು ನನ್ನ ಹುಡುಗನನ್ನು ನೋಡಿದ್ರೆ ಹೊಡೆಯುತ್ತೇನೆ’; ಅನನ್ಯಾಗೆ ಬೆದರಿಕೆ ಹಾಕಿದ್ದ ಸಾರಾ ಅಲಿ ಖಾನ್
ಇಬ್ಬರ ಆಸ್ತಿ: ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ಅವರ ಆಸ್ತಿ ಸೇರಿದರೆ 138 ಕೋಟಿ ರೂಪಾಯಿ ಆಗುತ್ತದೆ. ಇಬ್ಬರೂ ಮುಂಬೈನಲ್ಲಿ ಫ್ಲಾಟ್ ಹೊಂದಿದ್ದಾರೆ. ಇವರಿಗೆ ಚಿತ್ರರಂಗದಲ್ಲಿ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಅನನ್ಯಾ ಪಾಂಡೆ ಹಾಗೂ ಆದಿತ್ಯ ರಾಯ್ ಒಂದೇ ಕ್ಷೇತ್ರದಲ್ಲಿ ಇದ್ದಾರೆ. ಇವರು ಮದುವೆ ಆದರೆ ಎಲ್ಲಾ ರೀತಿಯಲ್ಲೂ ಉತ್ತಮ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.