ಅಕ್ಷಯ್ ಕುಮಾರ್​ಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು: ‘ಕೇಸರಿ 2’ ರಿಲೀಸ್​ಗೂ ಮೊದಲೇ ಫ್ಯಾನ್ಸ್ ಒತ್ತಾಯ

ಬಿಡುಗಡೆಗೂ ಮುನ್ನವೇ ‘ಕೇಸರಿ: ಚಾಪ್ಟರ್ 2’ ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ಹೈಪ್ ಜಾಸ್ತಿ ಆಗಿದೆ. ಸ್ಪೆಷಲ್ ಶೋ ನೋಡಿದ ಪ್ರೇಕ್ಷಕರು ಅಕ್ಷಯ್ ಕುಮಾರ್ ಅವರ ನಟನೆಯನ್ನು ಹೊಗಳಲು ಶುರು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಅಕ್ಷಯ್ ಕುಮಾರ್​ಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು: ‘ಕೇಸರಿ 2’ ರಿಲೀಸ್​ಗೂ ಮೊದಲೇ ಫ್ಯಾನ್ಸ್ ಒತ್ತಾಯ
Akshay Kumar

Updated on: Apr 16, 2025 | 8:55 PM

ಅಕ್ಷಯ್ ಕುಮಾರ್ ಅವರು ಅತ್ಯುತ್ತಮ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಸಿನಿಮಾಗಳು ಬಾಕ್ಸ್ ಆಫೀಸ್​ ಗಳಿಕೆಯಲ್ಲಿ ಹಿಂದೆ ಬೀಳುತ್ತಿವೆ. ಈಗ ಅವರು ‘ಕೇಸರಿ: ಚಾಪ್ಟರ್​ 2’ ಸಿನಿಮಾದಲ್ಲಿ ನಟಿಸಿದ್ದು, ಏಪ್ರಿಲ್ 18ರಂದು ಈ ಚಿತ್ರ ಬಿಡುಗಡೆ ಆಗಲಿದೆ. ವಿಶೇಷ ಏನೆಂದರೆ, ಈ ಸಿನಿಮಾ ಬಿಡುಗಡೆಗೂ ಮೊದಲೇ ಅಕ್ಷಯ್ ಕುಮಾರ್ (Akshay Kumar) ಅಭಿಮಾನಿಗಳು ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ. ಹೌದು, ಈಗಾಗಲೇ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡಿದ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆ ತಿಳಿಯುತ್ತಿದ್ದಾರೆ. ಅಲ್ಲದೇ ಅಕ್ಷಯ್ ಕುಮಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ (National Award) ಬರಬೇಕು ಎಂದು ಕೂಡ ಫ್ಯಾನ್ಸ್ ಒತ್ತಾಯ ಮಾಡುತ್ತಿದ್ದಾರೆ.

ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದ ಕುರಿತು ‘ಕೇಸರಿ: ಚಾಪ್ಟರ್ 2’ ಸಿನಿಮಾ ಸಿದ್ಧವಾಗಿದೆ. ರಿಯಲ್ ಲೈಫ್ ಘಟನೆ ಆಧಾರಿತ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಲಾಯರ್ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆ ಮೂಲಕ ಪಾಸಿಟಿವ್ ವಿಮರ್ಶೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
80 ಕೋಟಿ ರೂಪಾಯಿಗೆ ಅಪಾರ್ಟ್​ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್
ಮೋದಿ ಫಿಟ್ ಇಂಡಿಯಾ ಕರೆಗೆ ಅಕ್ಷಯ್ ಕುಮಾರ್, ವೈದ್ಯರು,ಕ್ರೀಡಾಪಟುಗಳ ಬೆಂಬಲ
ರಾಜಮೌಳಿ ಅಂಥ ನಿರ್ದೇಶಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರಾ ಅಕ್ಷಯ್ ಕುಮಾರ್?
57 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಸಂಪಾದಿಸಿದ ಆಸ್ತಿ ಎಷ್ಟು?

ಸೋಶಿಯಲ್ ಮೀಡಿಯಾದಲ್ಲಿ ಜನರು ಈಗಾಗಲೇ ‘ಕೇಸರಿ: ಚಾಪ್ಟರ್ 2’ ಸಿನಿಮಾದ ವಿಮರ್ಶೆ ತಿಳಿಸುತ್ತಿದ್ದಾರೆ. ವಿಶೇಷವಾಗಿ ಅಕ್ಷಯ್ ಕುಮಾರ್ ಅವರ ನಟನೆಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ‘ಈ ಸಿನಿಮಾದಲ್ಲಿನ ಅಕ್ಷಯ್ ಕುಮಾರ್ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸಿಗುವುದು ಖಚಿತ’ ಎಂದು ಕೆಲವರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಇದರಿಂದಾಗಿ ಸಿನಿಮಾದ ಮೇಲಿನ ಹೈಪ್ ಜಾಸ್ತಿ ಆಗಿದೆ.

2017ರಲ್ಲಿ ತೆರೆಕಂಡ ‘ರುಸ್ತುಂ’ ಸಿನಿಮಾದಲ್ಲಿನ ನಟನೆಗೆ ಅಕ್ಷಯ್ ಕುಮಾರ್ ಅವರು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಈಗ ಅವರು ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ಕೂಡ ಅದೇ ರೀತಿ ಪರ್ಫಾರ್ಮೆನ್ಸ್ ನೀಡಿದ್ದಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಸಿನಿಮಾವನ್ನು ಜನರು ಗಮನವಿಟ್ಟು ನೋಡಬೇಕು ಹಾಗೂ ಮೊಬೈಲ್ ಬದಿಗುಟ್ಟು ವೀಕ್ಷಿಸಬೇಕು ಎಂದು ಅಕ್ಷಯ್ ಕುಮಾರ್ ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ರಿಯಲ್ ಕಹಾನಿ; ಟ್ರೇಲರ್​ನಲ್ಲಿ ಅಕ್ಷಯ್​ ಕುಮಾರ್ ಅಬ್ಬರ

‘ಕೇಸರಿ’ ಸಿನಿಮಾದಲ್ಲಿ ದೇಶಭಕ್ತಿಯ ಕಥೆ ಇತ್ತು. ಈಗ ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ಕೂಡ ಅಂಥದ್ದೇ ಕಹಾನಿ ಇದೆ. ಈ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್​ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.