ಸ್ಟಾರ್ ನಟನ ಜತೆ ಜಗಳಕ್ಕೆ ಇಳಿದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮಹೇಶ್ ಬಾಬು ನೋಡಿ ಗಪ್​ಚುಪ್

ಸಿನಿಮಾ ಥಿಯೇಟರ್​ನಲ್ಲಿ ಟಿಕೆಟ್​ ಪಡೆಯಲು ನಿಹಾರಿಕಾ ಸಾಲಿನಲ್ಲಿ ನಿಂತಿರುತ್ತಾರೆ. ನೋಡನೋಡುತ್ತಿದ್ದಂತೆ ಅವರ ಎದುರು ಒಂದಷ್ಟು ಮಂದಿ ಬಂದು ಸಾಲಿನಲ್ಲಿ ನಿಲ್ಲುತ್ತಾರೆ. ಇದೇ ಸಮಯಕ್ಕೆ ಆದಿವಿಶೇಷ್ ಕೂಡ ಬಂದು ನಿಲ್ಲುತ್ತಾರೆ. ಹೀಗೆ ವಿಡಿಯೋ ಪ್ರಾರಂಭವಾಗುತ್ತದೆ.

ಸ್ಟಾರ್ ನಟನ ಜತೆ ಜಗಳಕ್ಕೆ ಇಳಿದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮಹೇಶ್ ಬಾಬು ನೋಡಿ ಗಪ್​ಚುಪ್
ನಿಹಾರಿಕಾ ಎನ್​ಎಂ
Updated By: ರಾಜೇಶ್ ದುಗ್ಗುಮನೆ

Updated on: May 30, 2022 | 3:15 PM

ಸಿನಿಮಾ ಪ್ರಚಾರಕ್ಕೆ ಈಗ ಹತ್ತು ಹಲವು ಮಾರ್ಗಗಳು ಸೃಷ್ಟಿ ಆಗಿವೆ. ಸೋಶಿಯಲ್​ ಮೀಡಿಯಾ (Social Media), ಯೂಟ್ಯೂಬ್​ ಮೂಲಕವೂ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಬಹುದು. ಅನೇಕರು ಈ ರೀತಿಯ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಿದಂತೆ ವಿಡಿಯೋ ಕಂಟೆಂಟ್ ಕ್ರಿಯೇಟರ್​​ಗಳ ಸಂಖ್ಯೆ ಹೆಚ್ಚಾಗಿದೆ. ಅವರ ಸಹಾಯದಿಂದ ಸಿನಿಮಾಗೆ ಪ್ರಚಾರ ನೀಡಲಾಗುತ್ತದೆ. ದೊಡ್ಡ ಸ್ಟಾರ್ ನಟರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಪ್ರಮೋಷನ್​ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಜೂನ್​ 3ರಂದು ರಿಲೀಸ್ ಆಗುವ ‘ಮೇಜರ್’ ಸಿನಿಮಾದವರು (Major Movie) ಕೂಡ ಇದೇ ಮಾರ್ಗ ಅನುಸರಿಸಿದ್ದಾರೆ. ಕಂಟೆಂಟ್ ಕ್ರಿಯೇಟರ್​ ನಿಹಾರಿಕಾ ಎನ್​.ಎಂ. (Niharika NM) ಜತೆ ಆದಿವಿಶೇಷ್ ವಿಶೇಷ ವಿಡಿಯೋ ಮಾಡಿದ್ದಾರೆ. ಮಹೇಶ್ ಬಾಬು ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ.

ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿ ‘ಮೇಜರ್’ ಸಿನಿಮಾ ತೆರೆಗೆ ಬರುತ್ತಿದೆ. ಮುಂಬೈ ದಾಳಿಯ ಕಥೆ ಸಿನಿಮಾದಲ್ಲಿ ಹೈಲೈಟ್ ಆಗಲಿದೆ. ಅನೇಕ ಜನರ ಜೀವ ಉಳಿಸಿದ ಸಂದೀಪ್​ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಈ ಸಿನಿಮಾ ಸಿದ್ಧಗೊಂಡಿದೆ. ಚಿತ್ರದ ಪ್ರಚಾರಕ್ಕಾಗಿ ಆದಿವಿಶೇಷ್​ ಅವರು ನಿಹಾರಿಕಾ ಜತೆ ಕೈ ಜೋಡಿಸಿದ್ದಾರೆ. ಈ ವಿಡಿಯೋ ಸಖತ್ ಫನ್ನಿ ಆಗಿದೆ.

ಇದನ್ನೂ ಓದಿ
ಆಮಿರ್​ ಖಾನ್​ ಮೇಲೆ ನಾಗ ಚೈತನ್ಯ ಫ್ಯಾನ್ಸ್​ ಬೇಸರ; ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​ನಿಂದ ನಿರಾಸೆ
ಮಹೇಶ್ ಬಾಬು ಬಳಿ ಕೀ ಕದಿಯಲು ಬಂದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮುಂದೇನಾಯ್ತು?
ಕಂಟೆಂಟ್ ಕ್ರಿಯೇಟರ್ ನಿಹಾರಿಕಾಗೆ ಪಂಚ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್​; ವಿಡಿಯೋ ವೈರಲ್
Niharika Konidela: ರೇವ್​ ಪಾರ್ಟಿ ಮೇಲೆ ಪೊಲೀಸ್​ ದಾಳಿ; ಚಿರಂಜೀವಿ ಕುಟುಂಬದ ಮನೆ ಮಗಳು ನಿಹಾರಿಕಾ ಕೊನಿಡೆಲಾ ವಶಕ್ಕೆ​

ಸಿನಿಮಾ ಥಿಯೇಟರ್​ನಲ್ಲಿ ಟಿಕೆಟ್​ ಪಡೆಯಲು ನಿಹಾರಿಕಾ ಸಾಲಿನಲ್ಲಿ ನಿಂತಿರುತ್ತಾರೆ. ನೋಡನೋಡುತ್ತಿದ್ದಂತೆ ಅವರ ಎದುರು ಒಂದಷ್ಟು ಮಂದಿ ಬಂದು ಸಾಲಿನಲ್ಲಿ ನಿಲ್ಲುತ್ತಾರೆ. ಇದೇ ಸಮಯಕ್ಕೆ ಆದಿವಿಶೇಷ್ ಕೂಡ ಬಂದು ನಿಲ್ಲುತ್ತಾರೆ. ‘ನಿಮಗೆ ಲೈನ್ ಕಾಣುತ್ತಿಲ್ಲವೇ? ಹೀಗೆ ಬಂದು ಮಧ್ಯ ನಿಲ್ಲುತ್ತೀರಲ್ಲ. ಓವರ್​ಸ್ಮಾರ್ಟ್​ ರೀತಿ ವರ್ತಿಸಬೇಡಿ’ ಎಂದಿದ್ದಾರೆ ನಿಹಾರಿಕಾ. ಆದಿವಿಶೇಷ್ ಅವರು ಅನಿವಾರ್ಯವಾಗಿ ಹಿಂದೆ ಹೋಗಿ ನಿಲ್ಲುತ್ತಾರೆ. ಇದೇ ಸಮಯಕ್ಕೆ ಮತ್ತೊಬ್ಬರು ಬಂದು ಮುಂದೆ ನಿಲ್ಲುತ್ತಾರೆ. ಅವರ ಬಳಿಯೂ ಜಗಳ ಹೋಗುತ್ತಾರೆ ನಿಹಾರಿಕಾ. ತಿರುಗಿ ನೋಡಿದರೆ ಮಹೇಶ್ ಬಾಬು. ಆಗ ನಿಹಾರಿಕಾ ಸೈಲೆಂಟ್ ಆಗುತ್ತಾರೆ. ‘ನೀವು ಎಲ್ಲಿ ನಿಲ್ಲುತ್ತೀರೋ ಅಲ್ಲಿಂದಲೇ ಲೈನ್​ ಸ್ಟಾರ್ಟ್​’ ಎನ್ನುತ್ತಾರೆ. ಈ ಫನ್ನಿ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು 7 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಮಹೇಶ್ ಬಾಬು ‘ಮೇಜರ್’ ಸಿನಿಮಾಗೆ ಬಂಡವಾಳ ಹೂಡಿದವರಲ್ಲಿ ಒಬ್ಬರು. ಈ ಕಾರಣಕ್ಕೆ ಅವರು ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

‘ಕೆಜಿಎಫ್ 2’ ರಿಲೀಸ್ ಸಂದರ್ಭದಲ್ಲಿ ಯಶ್ ಜತೆ ರೀಲ್ಸ್ ಮಾಡಿದ್ದರು ನಿಹಾರಿಕಾ. ‘ಸರ್ಕಾರು ವಾರಿ ಪಾಟ’ ಸಿನಿಮಾ ಸಂದರ್ಭದಲ್ಲಿ ಮಹೇಶ್ ಬಾಬು ಜತೆ ಫನ್ನಿ ವಿಡಿಯೋ ಮಾಡಿದ್ದರು. ಈ ಎರಡೂ ವಿಡಿಯೋಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.