ಮಹೇಶ್ ಬಾಬು ಬಳಿ ಕೀ ಕದಿಯಲು ಬಂದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮುಂದೇನಾಯ್ತು?

ಮಹೇಶ್ ಬಾಬು ಬಳಿ ಕೀ ಕದಿಯಲು ಬಂದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮುಂದೇನಾಯ್ತು?
ನಿಹಾರಿಕಾ

‘ಕೆಜಿಎಫ್​ ಚಾಪ್ಟರ್​ 2’ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾಗೆ ಒಳ್ಳೆಯ  ಪ್ರಚಾರ ನೀಡಲಾಗಿತ್ತು. ಮಹೇಶ್ ಬಾಬು ಹಲವು ವಾಹಿನಿಯವರಿಗೆ ಸಂದರ್ಶನ ನೀಡಿದ್ದರು. ಅದೇ ರೀತಿ ಮಹೇಶ್​ ಬಾಬು ಅವರನ್ನು ನಿಹಾರಿಕಾ ಭೇಟಿ ಮಾಡಿದ್ದಾರೆ.

TV9kannada Web Team

| Edited By: Rajesh Duggumane

May 15, 2022 | 4:46 PM

ಸಿನಿಮಾ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾ ಒಳ್ಳೆಯ ಮಾಧ್ಯಮವಾಗಿ ಮಾರ್ಪಟ್ಟಿದೆ. ಸಿನಿಮಾ ಮಂದಿ ಸಾಮಾಜಿಕ ಜಾಲತಾಣದ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಾರೆ. ಸೋಶಿಯಲ್ ಮೀಡಿಯಾ (Social Media) ಬಳಕೆ ಹೆಚ್ಚಿದಂತೆ ವಿಡಿಯೋ ಕಂಟೆಂಟರ್ ಕ್ರಿಯೇಟರ್​​ಗಳ ಸಂಖ್ಯೆ ಹೆಚ್ಚಾಗಿದೆ. ಅವರ ಸಹಾಯದಿಂದ ಸಿನಿಮಾಗೆ ಪ್ರಚಾರ ನೀಡಲಾಗುತ್ತದೆ. ದೊಡ್ಡ ಸ್ಟಾರ್ ನಟರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಪ್ರಚಾರ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಸರ್ಕಾರು ವಾರಿ ಪಾಟ’ ಸಿನಿಮಾದವರು (Sarkaru Vaari Paata) ಕೂಡ ಇದೇ ಮಾರ್ಗ ಅನುಸರಿಸಿದ್ದಾರೆ. ಕಂಟೆಂಟ್ ಕ್ರಿಯೇಟರ್​ ನಿಹಾರಿಕಾ ಎನ್​.ಎಂ. (Niharika NM) ಜತೆ ನಟ ಮಹೇಶ್ ಬಾಬು ರೀಲ್ಸ್ ಮಾಡಿದ್ದಾರೆ.

‘ಕೆಜಿಎಫ್​ ಚಾಪ್ಟರ್​ 2’ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾಗೆ ಒಳ್ಳೆಯ  ಪ್ರಚಾರ ನೀಡಲಾಗಿತ್ತು. ಮಹೇಶ್ ಬಾಬು ಹಲವು ವಾಹಿನಿಯವರಿಗೆ ಸಂದರ್ಶನ ನೀಡಿದ್ದರು. ಅದೇ ರೀತಿ ಮಹೇಶ್​ ಬಾಬು ಅವರನ್ನು ನಿಹಾರಿಕಾ ಭೇಟಿ ಮಾಡಿದ್ದಾರೆ. ನಿಹಾರಿಕಾ ಒಂದು ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

‘ಸರ್ಕಾರು ವಾರಿ ಪಾಟ’ ಸಿನಿಮಾದ ಟ್ರೇಲರ್​​ನಲ್ಲಿ ಒಂದು ಕೀ ಬಂಚ್ ಹೈಲೈಟ್ ಆಗಿತ್ತು. ಮಹೇಶ್ ಬಾಬು ಅವರು ಬ್ಯಾಂಕ್​ನ ಕೀಗಳನ್ನು ಹಿಡಿದು ಕೂರುತ್ತಾರೆ. ಇದರ ಮೂಲಕವೇ ಅವರು ಫೈಟ್​ ಮಾಡುತ್ತಾರೆ. ಇದೇ ವಿಚಾರವನ್ನು ಇಟ್ಟುಕೊಂಡು ನಿಹಾರಿಕಾ ರೀಲ್ಸ್ ಮಾಡಿದ್ದಾರೆ.

ಮಹೇಶ್​ ಬಾಬುಗೆ ಸೇರಿದ ಕೀ ಬಂಚ್ ಟೇಬಲ್​ ಮೇಲೆ ಇಟ್ಟಿರಲಾಗುತ್ತದೆ. ಇದನ್ನು ಕದಿಯೋಕೆ ನಿಹಾರಿಕಾ ಬರುತ್ತಾರೆ. ಕದಿಯುವುದಕ್ಕೂ ಮೊದಲು ಸಾಕಷ್ಟು ಸರ್ಕಸ್​ ಮಾಡುತ್ತಾರೆ. ಆ ಬಳಿಕ ಅವರು ಕೀ ಬಂಚ್ ಕದಿಯೋಕೆ ಯಶಸ್ವಿ ಆಗುತ್ತಾರೆ. ಈ ವೇಳೆ ಬರುವ ಮಹೇಶ್ ಬಾಬು ಅವರು ‘ನೀವು ನನ್ನ ಪ್ರೀತಿಯನ್ನು ಕದಿಯಬಹುದು, ಫ್ರೆಂಡ್​ಶಿಪ್ ಕದಿಯಬಹುದು, ಆದರೆ ಹಣವನ್ನು ಮಾತ್ರ ಕದಿಯೋಕೆ ಆಗಲ್ಲ’ ಎಂದು ಹೇಳುತ್ತಾರೆ. ನಂತರ ಅಲ್ಲೇ ಇಟ್ಟ ಸ್ಯಾಂಡ್​ವಿಚ್ ತಿನ್ನುತ್ತಾರೆ ನಿಹಾರಿಕಾ. ಈ ವಿಡಿಯೋ ಸುಮಾರು 9 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

View this post on Instagram

A post shared by Niharika Nm (@niharika_nm)

ಯಶ್ ಜತೆ ರೀಲ್ಸ್ ಮಾಡಿದ್ದ ನಿಹಾರಿಕಾ

ಯಶ್ ಹಾಗೂ ನಿಹಾರಿಕಾ ಈ ಮೊದಲು ರೀಲ್ಸ್ ಮಾಡಿದ್ದರು. ‘ಕೆಜಿಎಫ್​ 2’ ಸಿನಿಮಾದ ‘ವಾಯ್ಲೆನ್ಸ್​.​​. ವಾಯ್ಲೆನ್ಸ್​​.​. ವಾಯ್ಲೆನ್ಸ್​..’ ಡೈಲಾಗ್ ಸಖತ್ ಫೇಮಸ್ ಆಗಿದೆ. ಇದೇ ಡೈಲಾಗ್​ಅನ್ನು ನಿಹಾರಿಕಾ ಹೇಳಿದ್ದರು. ಕೈನಲ್ಲಿ ಬಾಟಲ್ ಒಂದನ್ನು ಇಟ್ಟುಕೊಂಡ ನಿಹಾರಿಕಾ, ‘ವಾಯ್ಲೆನ್ಸ್​​.. ವಾಯ್ಲೆನ್ಸ್​​.. ವಾಯ್ಲೆನ್ಸ್​..​’ ಎಂದು ಹೇಳೋಕೆ ಶುರು ಮಾಡಿದ್ದಾರೆ. ಏನೇ ಮಾಡಿದರೂ ಆ ಬಾಟಲಿಯ ಮುಚ್ಚಳ ತೆಗೆಯಲು ಸಾಧ್ಯವಾಗಿಲ್ಲ. ‘ಯಾರು ಈ ಬಾಟಲಿ ಕೊಟ್ಟಿದ್ದು. ಬೇರೆ ಬಾಟಲಿ ಕೊಡಿ’ ಎಂದು ಮತ್ತೊಂದು ಬಾಟಲಿ ತೆಗೆದುಕೊಳ್ಳುತ್ತಾರೆ ನಿಹಾರಿಕಾ. ಆಗ ಯಶ್ ಎಂಟ್ರಿ ಆಗುತ್ತದೆ. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada