ಸಹ ನಟನ ಮೇಲೆ ಮಹೇಶ್ ಬಾಬು ಮೂತ್ರ ಮಾಡುವ ದೃಶ್ಯಕ್ಕೆ ಅಸಹ್ಯ ವ್ಯಕ್ತಪಡಿಸಿದ ಫ್ಯಾನ್ಸ್

ಸಹ ನಟನ ಮೇಲೆ ಮಹೇಶ್ ಬಾಬು ಮೂತ್ರ ಮಾಡುವ ದೃಶ್ಯಕ್ಕೆ ಅಸಹ್ಯ ವ್ಯಕ್ತಪಡಿಸಿದ ಫ್ಯಾನ್ಸ್
ಮಹೇಶ್ ಬಾಬು

ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ 12ರಂದು ತೆರೆಗೆ ಬಂದು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಮಧ್ಯೆ ಸಿನಿಮಾದಲ್ಲಿ ಬರುವ ದೃಶ್ಯವೊಂದಕ್ಕೆ ಫ್ಯಾನ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ

TV9kannada Web Team

| Edited By: Rajesh Duggumane

May 13, 2022 | 2:54 PM

ನಟ ಮಹೇಶ್ ಬಾಬು (Mahesh Babu) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಗೌರವ ಇದೆ. ಅವರು ಸದಾ ವಿವಾದಗಳಿಂದ ದೂರ ಇರಲು ಬಯಸುತ್ತಾರೆ. ಯಾವುದಾದರೂ ವಿಚಾರ ವಿವಾದದ ಕಿಡಿ ಹೊತ್ತಿಸುತ್ತದೆ ಎನ್ನುವ ಸೂಚನೆ ಸಿಕ್ಕರೆ ಸಾಕು ಅತ್ತ ಸುಳಿಯುವುದೂ ಇಲ್ಲ. ‘ಹಿಂದಿ ಚಿತ್ರರಂಗಕ್ಕೆ ನನ್ನನ್ನು ಭರಿಸುವ ಶಕ್ತಿ ಇಲ್ಲ’ ಎಂದು ಅವರು ಇತ್ತೀಚೆಗೆ ಹೇಳಿದ್ದು ಸಾಕಷ್ಟು ಚರ್ಚೆ ಸೃಷ್ಟಿ ಮಾಡಿತ್ತು. ಈಗ ಮಹೇಶ್ ಬಾಬು ಅವರ ಕಟ್ಟಾಭಿಮಾನಿಗಳು ಅವರ ಬಗ್ಗೆ ಹಾಗೂ ನಿರ್ದೇಶಕ ಪರಶುರಾಮ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ‘ಸರ್ಕಾರು ವಾರಿ ಪಾಟ’ ಸಿನಿಮಾದ (Sarkaru Vaari Paata Movie) ಒಂದು ದೃಶ್ಯ.

ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ 12ರಂದು ತೆರೆಗೆ ಬಂದು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ಮಹೇಶ್ ಬಾಬು ಅವರ ಡೈಹಾರ್ಡ್​ ಫ್ಯಾನ್ಸ್​ಗೆ ಹೆಚ್ಚು ಇಷ್ಟವಾಗಿದೆ. ಈ ಮಧ್ಯೆ ಸಿನಿಮಾದಲ್ಲಿ ಬರುವ ದೃಶ್ಯವೊಂದಕ್ಕೆ ಫ್ಯಾನ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಹೇಶ್ ಬಾಬು ಅವರು ಈ ದೃಶ್ಯ ಮಾಡಲು ಒಪ್ಪಬಾರದಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕಥಾನಾಯಕ ಮಾಹಿ (ಮಹೇಶ್ ಬಾಬು) ತನಗೆ ನಿದ್ರೆ ಬರುವುದಿಲ್ಲ ಎಂದು ನಾಯಕಿ ಕಲಾವತಿಯನ್ನು (ಕೀರ್ತಿ ಸುರೇಶ್) ಮನೆಗೆ ಕರೆಸಿಕೊಳ್ಳುತ್ತಾನೆ. ಕಲಾವತಿ ಮಾವ ಸುಬ್ಬರಾಜು (ಸುಬ್ಬರಾಜು) ಕೂಡ ಅವಳ ಜತೆ ಬರುತ್ತಾನೆ. ರಾತ್ರಿ ಮಾಹಿ ಮಲಗಿದ್ದಾಗ ಲ್ಯಾಪ್​ಟಾಪ್ ಕದಿಯಲು ಸುಬ್ಬರಾಜು ಮುಂದಾಗುತ್ತಾನೆ. ಈ ವೇಳೆ ಮಾಹಿ ನಿದ್ದೆಯಲ್ಲಿ ನಡೆದು ಬರುತ್ತಾನೆ. ಮಾಹಿಯಿಂದ ತಪ್ಪಿಸಿಕೊಳ್ಳೋಕೆ ಸುಬ್ಬರಾಜು ಟಾಯ್ಲೆಟ್​ಗೆ ಓಡಿ ಹೋಗಿ ಕಮೋಡ್​ಮೇಲೆ ಕೂರತ್ತಾನೆ. ಮಾಹಿ ಕೂಡ ಅಲ್ಲಿಗೆ ಹೋಗುತ್ತಾನೆ. ಮಾಹಿ ಟಾಯ್ಲೆಟ್​ನಿಂದ ಹೊರ ಬಂದಾಗ ಸುಬ್ಬರಾಜುನ ತಲೆಯಿಂದ ಮೂತ್ರ ಬೀಳುತ್ತಿರುವ ರೀತಿಯಲ್ಲಿ ದೃಶ್ಯವನ್ನು ತೋರಿಸಲಾಗಿದೆ. ಇಲ್ಲಿ ನೇರವಾಗಿ ಏನನ್ನೂ ತೋರಿಸದಿದ್ದರೂ ಫ್ಯಾನ್ಸ್ ಈ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಇದು ಸಂಪೂರ್ಣವಾಗಿ ಕಾಮಿಡಿ ಉದ್ದೇಶದಿಂದ ಹೆಣೆದ ದೃಶ್ಯ. ಆದರೆ, ಇಷ್ಟು ಕೀಳುಮಟ್ಟದಲ್ಲಿ ದೃಶ್ಯವನ್ನು ತೋರಿಸಬಾರದಿತ್ತು ಎಂಬುದು ಫ್ಯಾನ್ಸ್ ಅಭಿಪ್ರಾಯ. ಈ ಬಗ್ಗೆ ಮಹೇಶ್ ಬಾಬು ಆಗಲಿ ಚಿತ್ರತಂಡದವರಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಒಳ್ಳೆಯ ಕಲೆಕ್ಷನ್ ಮಾಡಿದ ‘ಸರ್ಕಾರು ವಾರಿ ಪಾಟ’

ಕೇವಲ ತೆಲುಗಿನಲ್ಲಿ ರಿಲೀಸ್​ ಆದ ‘ಸರ್ಕಾರು ವಾರಿ ಪಾಟ’ ಸಿನಿಮಾಗೆ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್​ ನೀಡಿದ್ದಾರೆ. ಫಸ್ಟ್​ ಡೇ ಬರೋಬ್ಬರಿ 45 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂಬ ವರದಿ ಆಗಿದೆ. ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್​ ಬಾಬು ಅವರು ಮಾಸ್ ಅವತಾರ ತಾಳಿದ್ದಾರೆ. ಬ್ಯಾಂಕಿಂಗ್​ ಕ್ಷೇತ್ರದ ಕುರಿತಾದ ಕಥೆಯನ್ನು ಇಟ್ಟುಕೊಂಡು ಅವರು ಪ್ರೇಕ್ಷಕರಿಗೆ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ಪರಶುರಾಮ್​ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಮಹೇಶ್​ ಬಾಬು ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್​ ನಟಿಸಿದ್ದಾರೆ. ಅದ್ದೂರಿ ಆ್ಯಕ್ಷನ್​ ದೃಶ್ಯಗಳನ್ನು ಮಹೇಶ್​ ಬಾಬು ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada