ಸೆಲೆಬ್ರಿಟಿಗಳ ಲವ್​, ಮದುವೆ ಹಿಂದಿನ ಕರಾಳ ಸತ್ಯ ತೆರೆದಿಟ್ಟ ನೋರಾ ಫತೇಹಿ

|

Updated on: Apr 11, 2024 | 7:55 PM

‘ಇವರೆಲ್ಲ ಲಾಭಕ್ಕಾಗಿ ಬದುಕುವ ಜನ. ನಿಮ್ಮ ಜನಪ್ರಿಯತೆಯನ್ನು ಬಳಸಿಕೊಳ್ಳಲು ನೋಡುತ್ತಾರೆ. ಇಂಥವರು ನನ್ನ ಜತೆ ಇರಲು ಸಾಧ್ಯವಿಲ್ಲ. ಆದ್ದರಿಂದ ನಾನು ಯಾವುದೇ ಹುಡುಗನ ಹಿಂದೆ ಹೋಗಿಲ್ಲ, ಡೇಟಿಂಗ್​ ಮಾಡಿಲ್ಲ. ಆದರೆ ಇದೆಲ್ಲವೂ ನನ್ನ ಎದುರಲ್ಲೇ ನಡೆಯುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆ ಆಗ್ತಾರೆ’ ಎಂದು ನೋರಾ ಫತೇಹಿ ಹೇಳಿದ್ದಾರೆ.

ಸೆಲೆಬ್ರಿಟಿಗಳ ಲವ್​, ಮದುವೆ ಹಿಂದಿನ ಕರಾಳ ಸತ್ಯ ತೆರೆದಿಟ್ಟ ನೋರಾ ಫತೇಹಿ
ನೋರಾ ಫತೇಹಿ
Follow us on

ನಟಿ, ಡ್ಯಾನ್ಸರ್​ ನೋರಾ ಫತೇಹಿ (​Nora Fatehi) ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕೆನಡಾದಿಂದ ಬಂದ ಅವರು ಭಾರತದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಸದ್ಯಕ್ಕಂತೂ ನೋರಾ ಫತೇಹಿ ಸಿಂಗಲ್​ ಆಗಿದ್ದಾರೆ. ಆದರೂ ಕೂಡ ಅವರು ಬಾಲಿವುಡ್​ (​Bollywood) ಮಂದಿಯ ಲವ್​, ರಿಲೇಷನ್​ಶಿಪ್​, ಮದುವೆ ಬಗ್ಗೆ ಮಾತನಾಡಿದ್ದಾರೆ. ರಣವೀರ್​ ಅಲಹಬಾದಿಯಾ ಅವರ ಪಾಡ್​ಕಾಸ್ಟ್​ಗೆ ನೀಡಿದ ಸಂದರ್ಶನದಲ್ಲಿ ನೋರಾ ಫತೇಹಿ ಅವರು ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳ ಲವ್​ ಮತ್ತು ಮದುವೆಯ ಹಿಂದಿರುವ ಕರಾಳ ಸತ್ಯವನ್ನು ಅವರು ತೆರೆದಿಟ್ಟಿದ್ದಾರೆ.

‘ಅವರೆಲ್ಲ ಲಾಭಕ್ಕಾಗಿ ಇರುವವರು. ನಿಮ್ಮ ಹೆಸರನ್ನು ಬಳಸಿಕೊಳ್ಳಲು ನೋಡುತ್ತಾರೆ. ಅಂಥವರು ನನ್ನ ಜೊತೆ ಇರಲು ಸಾಧ್ಯವಿಲ್ಲ. ಹಾಗಾಗಿ ನಾನು ಯಾವುದೇ ಹುಡುಗನ ಹಿಂದೆ ಹೋಗಿಲ್ಲ. ಡೇಟಿಂಗ್​ ಮಾಡಿಲ್ಲ. ಆದರೆ ನನ್ನ ಎದುರಲ್ಲೇ ಇದೆಲ್ಲ ನಡೆಯುತ್ತಿದೆ. ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆ ಆಗುತ್ತಾರೆ’ ಎಂದು ನೋರಾ ಫತೇಹಿ ಹೇಳಿದ್ದಾರೆ. ಅಲ್ಲದೇ ಅದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ.

‘ಪ್ರಸಿದ್ಧಿ ಇರುವ ತಮ್ಮ ಹೆಂಡತಿ ಅಥವಾ ಗಂಡನ ಹೆಸರನ್ನು ಈ ಜನರು ಬಳಸಿಕೊಳ್ಳುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಸಂಪರ್ಕ ಹೆಚ್ಚಿಸಿಕೊಳ್ಳುತ್ತಾರೆ. ಹಣ ಗಳಿಸಲು, ಪ್ರಚಲಿತದಲ್ಲಿ ಇರಲು ಮದುವೆ ಆಗುತ್ತಾರೆ. ಆ ವ್ಯಕ್ತಿಯನ್ನು ಮದುವೆ ಆದರೆ ಮುಂದಿನ 3 ವರ್ಷಗಳ ಕಾಲ ತಾನು ಸುದ್ದಿಯಲ್ಲಿ ಇರಬಹುದು. ಯಾಕೆಂದರೆ ಆ ವ್ಯಕ್ತಿಯ ಬಳಿ ಮೂರು ಸಿನಿಮಾಗಳು ಇವೆ. ಅವು ಬಾಕ್ಸ್​ ಆಫೀಸ್​ನಲ್ಲಿ ಹಿಟ್​ ಆಗುತ್ತವೆ. ಆ ಅಲೆಯಲ್ಲಿ ತಾನು ತೇಲಬಹುದು ಎಂಬುದು ಅಂಥವರ ಲೆಕ್ಕಾಚಾರ ಆಗಿರುತ್ತದೆ’ ಎಂದು ನೋರಾ ಫತೇಹಿ ಹೇಳಿದ್ದಾರೆ.

ಇದನ್ನೂ ಓದಿ: ಸೀರೆಯಲ್ಲಿ ಗಮನ ಸೆಳೆದ ನೋರಾ ಫತೇಹಿ

‘ಇಂಥವರು ದುಡ್ಡಿಗಾಗಿ ಇದನ್ನೆಲ್ಲ ಮಾಡುತ್ತಾರೆ. ಹಣಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಷ್ಟವೇ ಇಲ್ಲದ ವ್ಯಕ್ತಿಯನ್ನು ಮದುವೆ ಆಗಿ ಜೀವನ ಮಾಡುವುದಕ್ಕಿಂತ ಕೆಟ್ಟದ್ದು ಬೇರೆ ಏನೂ ಇಲ್ಲ. ವೈಯಕ್ತಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಸಂತಸವನ್ನು ತ್ಯಾಗ ಮಾಡುವುದರಲ್ಲಿ ಅರ್ಥವಿಲ್ಲ. ಕೆಲಸ ಮತ್ತು ವೈಯಕ್ತಿಕ ಬದುಕನ್ನು ಮಿಶ್ರಣ ಮಾಡಬಾರದು. ಖಿನ್ನತೆ, ಆತ್ಮಹತ್ಯೆಯ ಆಲೋಚನೆ ಯಾಕೆ ಬರುತ್ತದೆ ಅಂತ ನಿಮಗೆ ಅಚ್ಚರಿ ಆಗುತ್ತದೆ’ ಎಂದಿದ್ದಾರೆ ನೋರಾ ಫತೇಹಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.