AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಕರೀನಾ ಕಪೂರ್ ವಿರುದ್ಧ ಕಾಂಗ್ರೆಸ್ ಮುಖಂಡ ದೂರು

Kareena Kapoor: ಇತ್ತೀಚೆಗಷ್ಟೆ ನಟಿ ಕರೀನಾ ತಮ್ಮ ಸಾಮಾಜಿಕ ಜಾಲತಾಣದ ಫೋಟೋಗಳಲ್ಲಿ ಕುರಾನ್‌ನ ಶ್ಲೋಕವಿರುವ ದೊಡ್ಡ ಪುರಾತನ ಪಚ್ಚೆ ಪೆಂಡೆಂಟ್ ಧರಿಸಿದ್ದರು. ಇದೇ ಕಾರಣಕ್ಕೆ ನಟಿ ಕರೀನಾ ವಿರುದ್ಧ ಅಬ್ಬಾಸ್ ಹಫೀಜ್ ದೂರು ನೀಡಿದ್ದಾರೆ. ನಟಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಟಿ ಕರೀನಾ ಕಪೂರ್ ವಿರುದ್ಧ ಕಾಂಗ್ರೆಸ್ ಮುಖಂಡ ದೂರು
Kareena Kapoor
ಮಂಜುನಾಥ ಸಿ.
|

Updated on: Nov 12, 2026 | 2:57 PM

Share

ಮುಖ್ಯಾಂಶಗಳು

  • ನಟಿ ಕರೀನಾ ಕಪೂರ್ ವಿರುದ್ಧ ದೂರು
  • ಕಾಂಗ್ರೆಸ್ ಮುಖಂಡ ಹಫೀಜ್ ಇಂದ ಕರೀನಾಗೆ ನೊಟೀಸ್
  • ಕರೀನಾ ಕಪೂರ್ ವಿವಾದಕ್ಕೆ ಕಾರಣವೇನು?

ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ದೂರು ನೀಡಿದ್ದು ಕರೀನಾ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಇತ್ತೀಚೆಗಷ್ಟೆ ನಟಿ ಕರೀನಾ ತಮ್ಮ ಸಾಮಾಜಿಕ ಜಾಲತಾಣದ ಫೋಟೋಗಳಲ್ಲಿ ಕುರಾನ್‌ನ ಶ್ಲೋಕವಿರುವ ದೊಡ್ಡ ಪುರಾತನ ಪಚ್ಚೆ ಪೆಂಡೆಂಟ್ ಧರಿಸಿದ್ದರು. ಇದೇ ಕಾರಣಕ್ಕೆ ನಟಿ ಕರೀನಾ ವಿರುದ್ಧ ಅಬ್ಬಾಸ್ ಹಫೀಜ್ ದೂರು ನೀಡಿದ್ದಾರೆ. ನಟಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರೀನಾ ಕಪೂರ್ ಧರಿಸಿದ್ದ ಆಭರಣದ ಬಗ್ಗೆ ತಮ್ಮ ಆಕ್ಷೇಪವಿಲ್ಲ, ಆದರೆ ಧಾರ್ಮಿಕ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿದ ರೀತಿಗೆ ಆಕ್ಷೇಪವಿದೆ, ಇದರಿಂದ ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವಾಗಿದೆ ಎಂದು ಅಬ್ಬಾಸ್ ಹಫೀಜ್ ದೂರಿದ್ದಾರೆ. ಹಫೀಜ್ ಅವರ ವಕೀಲ ಮೊಹಮ್ಮದ್ ಜಫರ್ ಅವರ ಪ್ರಕಾರ, ಪೆಂಡೆಂಟ್‌ನಲ್ಲಿರುವುದು ಇಸ್ಲಾಂನಲ್ಲಿ ಪವಿತ್ರವೆಂದು ಪರಿಗಣಿತವಾದ ಪವಿತ್ರ ಕುರಾನ್‌ನ ಶ್ಲೋಕ. ಪವಿತ್ರ ಗ್ರಂಥಗಳನ್ನು ಮುಟ್ಟುವ ಅಥವಾ ಪಠಿಸುವ ಮೊದಲು ವುಜೂ (ಶುದ್ಧೀಕರಣ) ಮಾಡಬೇಕೆಂದು ಧಾರ್ಮಿಕ ಪದ್ಧತಿ ಹೇಳುತ್ತದೆ ಆದರೆ ಕರೀನಾ ಅದನ್ನು ಪಾಲಿಸಿಲ್ಲ ಎಂದಿದ್ದಾರೆ.

ಫೋಟೋಗಳು ಮತ್ತು ಸಂಬಂಧಿತ ಪೋಸ್ಟ್‌ಗಳನ್ನು ತೆಗೆಯಬೇಕು, ಕ್ಷಮೆ ಕೇಳಬೇಕು ಮತ್ತು ಧಾರ್ಮಿಕ ಬರಹವನ್ನು ಅಗೌರವವೆಂದು ಪರಿಗಣಿಸಬಹುದಾದ ರೀತಿಯಲ್ಲಿ ಪ್ರದರ್ಶಿಸುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ನಟಿಗೆ ನೀಡಲಾಗಿರುವ ನೊಟೀಸ್​​ನಲ್ಲಿ ಒತ್ತಾಯಿಸಲಾಗಿದೆ. ಕರೀನಾ ಅವರು ಧರಿಸಿದ್ದ ಪೆಂಡೆಂಟ್ ಭೋಪಾಲ್‌ನ ಬೇಗಂಗಳ ಪರಂಪರೆಗೆ ಸಂಬಂಧಿಸಿದ್ದು, ಅದನ್ನು ಫ್ಯಾಷನ್ ಆಭರಣವಾಗಿ ಅಲ್ಲ, ನಂಬಿಕೆಯ ಅಭಿವ್ಯಕ್ತಿಯಾಗಿ ಧರಿಸಲಾಗುತ್ತಿತ್ತು ಎಂದು ಹಫೀಜ್ ಹೇಳಿದ್ದಾರೆ. ಆದರೆ ಇದು ತಮ್ಮ ವೈಯಕ್ತಿಕ ಕ್ರಮ, ಇದನ್ನು ಕಾಂಗ್ರೆಸ್ ಪಕ್ಷ, ಅದರ ಸಿದ್ಧಾಂತ ಅಥವಾ ರಾಜಕೀಯ ನಿಲುವಿನೊಂದಿಗೆ ಸಂಬಂಧಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:15 ವರ್ಷಗಳ ಬಳಿಕ ಮತ್ತೆ ಶಾರುಖ್ ಖಾನ್ ಜೊತೆ ನಟಿಸುತ್ತಿದ್ದಾರೆ ಕರೀನಾ ಕಪೂರ್

ವಿವಾದವು ಸೆಲೆಬ್ರಿಟಿ ಸ್ಟೈಲಿಸ್ಟ್ ರಿಯಾ ಕಪೂರ್ ಅವರು ಸುಮಾರು 200 ವರ್ಷ ಹಳೆಯ ಭೋಪಾಲ್ ರಾಜಮನೆತನದ ಪರಂಪರೆಯ ಆಭರಣ ಎಂದು ವಿವರಿಸಿದ ಪಚ್ಚೆ ಪೆಂಡೆಂಟ್ ಸುತ್ತ ಇದೆ. ದೀಪಾವಳಿ ಲುಕ್‌ನ ಭಾಗವಾಗಿ ಕರೀನಾ ಆ ಆಭರಣ ಧರಿಸಿದ ಫೋಟೋಗಳನ್ನು ಕರೀನಾ ಧರಿಸಿದ್ದರು. ಭೋಪಾಲ್​​ನ ರಾಜಮನೆತನದೊಂದಿಗೆ ಕರೀನಾ ಅವರ ಪತಿ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ನಂಟು ಇದೆ. ಇದೇ ಕಾರಣಕ್ಕೆ ಕರೀನಾ ಆ ಆಭರಣಗಳನ್ನು ಧರಿಸಿದ್ದರು.

ಇದರ ನಡುವೆ, ಹಿಂದೂ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ತಿವಾರಿ ಅವರು ಕರೀನಾಗೆ ಬೆಂಬಲ ಸೂಚಿಸಿದ್ದು, ಅವರು ಯಾರಿಗೂ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದಿದ್ದಾರೆ. ‘ಪೆಂಡೆಂಟ್ ಅನ್ನು ಕುತ್ತಿಗೆಯಲ್ಲಿ, ಹೃದಯಕ್ಕೆ ಹತ್ತಿರ ಧರಿಸಲಾಗುತ್ತದೆ. ಅದರಲ್ಲಿ ಕುರಾನ್ ಶ್ಲೋಕಗಳಿದ್ದರೆ, ಅಗೌರವವೆಂದು ಪರಿಗಣಿಸಬಹುದಾದ ಯಾವುದೇ ಸ್ಥಳದಲ್ಲಿ ಅವರು ಅದನ್ನು ಧರಿಸುತ್ತಿರಲಿಲ್ಲ. ಅವರು ಯಾರಿಗೂ ಕ್ಷಮೆ ಕೇಳುವ ಅಗತ್ಯವಿಲ್ಲ, ಕರೀನಾ ಭೋಪಾಲ್‌ನ ಹಿಂದಿನ ರಾಜಮನೆತನದ ಸೊಸೆಯಾಗಿರುವುದರಿಂದ, ತಮ್ಮ ಅತ್ತೆಗೆ ಸೇರಿದ ಆಭರಣಗಳನ್ನು ಧರಿಸುವುದು ಸಹಜ’ ಎಂದು ತಿವಾರಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮೆಟ್ರೋ ಅನುದಾನ ಜಟಾಪಟಿ: ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ಲೈವ್
ಮೆಟ್ರೋ ಅನುದಾನ ಜಟಾಪಟಿ: ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ಲೈವ್
ಜೈಲಿನಿಂದ ಪರೋಲ್​​ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಜೈಲಿನಿಂದ ಪರೋಲ್​​ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಮೈಸೂರಿನಲ್ಲಿ ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ
ಮೈಸೂರಿನಲ್ಲಿ ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ