ಅಕ್ಷಯ್ ಕುಮಾರ್ ಈಗ ಭಾರತೀಯ ಪ್ರಜೆ; ಕೆನಡಾ ಪೌರತ್ವ ಬಿಟ್ಟು ಭಾರತದ ನಾಗರೀಕನಾದ ನಟ

| Updated By: ಮದನ್​ ಕುಮಾರ್​

Updated on: Aug 15, 2023 | 2:20 PM

ಈ ವರ್ಷದ ಸ್ವಾತಂತ್ರ್ಯ ದಿನದ (ಆಗಸ್ಟ್ 15) ಪ್ರಯುಕ್ತ ಭಾರತೀಯ ಪೌರತ್ವ ಸಿಕ್ಕ ವಿಚಾರವನ್ನು ಅಕ್ಷಯ್ ಕುಮಾರ್ ರಿವೀಲ್ ಮಾಡಿದ್ದಾರೆ. ‘ಹೃದಯ ಮತ್ತು ಪೌರತ್ವ ಎರಡೂ ಭಾರತದ್ದೇ. ಸ್ವಾತಂತ್ರ್ಯ ದಿನದ ಶುಭಾಶಯ. ಜೈ ಹಿಂದ್’ ಎಂದು ಅವರು ಬರೆದುಕೊಂಡಿದ್ದಾರೆ. ಪೌರತ್ವದ ದಾಖಲೆಗಳನ್ನು ಅವರು ತೋರಿಸಿದ್ದಾರೆ.

ಅಕ್ಷಯ್ ಕುಮಾರ್ ಈಗ ಭಾರತೀಯ ಪ್ರಜೆ; ಕೆನಡಾ ಪೌರತ್ವ ಬಿಟ್ಟು ಭಾರತದ ನಾಗರೀಕನಾದ ನಟ
ಅಕ್ಷಯ್​ ಕುಮಾರ್​
Follow us on

ನಟ ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರು ವಿವಾದಗಳ ಮೂಲಕವೂ ಸಾಕಷ್ಟು ಸುದ್ದಿ ಆಗಿದ್ದಾರೆ. ಅವರು ಈ ಮೊದಲು ಕೆನಡಾದ ಪೌರತ್ವ ಹೊಂದಿದ್ದರು. ಈ ವಿಚಾರ ತಿಳಿದ ಬಳಿಕ ಸಾಷ್ಟು ಮಂದಿ ಅಕ್ಷಯ್ ಅವರನ್ನು ಟೀಕೆ ಮಾಡಿದ್ದರು. ಅವರು ಹಲವು ವರ್ಷಗಳ ಕಾಲ ಭಾರತದಲ್ಲೇ ಇದ್ದ ಹೊರತಾಗಿಯೂ ಅವರಿಗೆ ಇಲ್ಲಿನ ಪೌರತ್ವ ಸಿಕ್ಕಿರಲಿಲ್ಲ. ಕೊನೆಗೂ ಅವರು ಭಾರತೀಯ ಪ್ರಜೆ ಆಗಿದ್ದಾರೆ. ಭಾರತದ ಪೌರತ್ವ (Indian Citizenship) ಪಡೆದ ಬಗ್ಗೆ ಅಕ್ಷಯ್ ಕುಮಾರ್ ಅವರು ಟ್ವಿಟರ್ (Akshay Kumar Twitter) ಮೂಲಕ ಘೋಷಣೆ ಮಾಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಅಕ್ಷಯ್ ಕುಮಾರ್ ಅವರು ಕೆನಡಾದ ಪೌರತ್ವ ಹೊಂದಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅಕ್ಷಯ್ ಕುಮಾರ್ ಬಳಿ ಭಾರತ ಬಿಟ್ಟು ಕೆನಡಾಗೆ ತೆರಳುವಂತೆ ಅನೇಕರು ಹೇಳಿದ್ದರು. ಇದು ಅಕ್ಷಯ್ ಕುಮಾರ್ ಅವರಿಗೆ ಬೇಸರ ಮೂಡಿಸಿತ್ತು. 2019ರಲ್ಲಿ ಅಕ್ಷಯ್ ಕುಮಾರ್ ಅವರು ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಕೊವಿಡ್ ಕಾರಣದಿಂದ ಈ ಪ್ರಕ್ರಿಯೆ ವಿಳಂಬ ಆಯಿತು.

ಇದನ್ನೂ ಓದಿ: ಸನ್ನಿ ಡಿಯೋಲ್​ಗೆ ಭರ್ಜರಿ ಗೆಲುವು; ಅಕ್ಷಯ್ ಕುಮಾರ್ ಎದುರು ತೊಡೆ ತಟ್ಟಿದ ನಟ

ಈ ವರ್ಷದ ಸ್ವಾತಂತ್ರ್ಯ ದಿನದ (ಆಗಸ್ಟ್ 15) ಪ್ರಯುಕ್ತ ಭಾರತೀಯ ಪೌರತ್ವ ಸಿಕ್ಕ ವಿಚಾರವನ್ನು ಅಕ್ಷಯ್ ಕುಮಾರ್ ರಿವೀಲ್ ಮಾಡಿದ್ದಾರೆ. ‘ಹೃದಯ ಮತ್ತು ಪೌರತ್ವ ಎರಡೂ ಭಾರತದ್ದೇ. ಸ್ವಾತಂತ್ರ್ಯ ದಿನದ ಶುಭಾಶಯ. ಜೈ ಹಿಂದ್’ ಎಂದು ಅವರು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಅವರು ಕೇಂದ್ರ ಸರ್ಕಾರ ನೀಡಿದ ಪೌರತ್ವದ ದಾಖಲೆಗಳನ್ನು ತೋರಿಸಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಅಕ್ಷಯ್ ಕುಮಾರ್ ಟ್ವೀಟ್​:

ಈ ಮೊದಲು ಅವರು ಕೆನಡಾ ನಾಗರಿಕತ್ವ ಪಡೆದಿದ್ದು ಏಕೆ ಎಂಬುದನ್ನು ಸಂದರ್ಶನದಲ್ಲಿ ವಿವರಿಸಿದ್ದರು. ಅಕ್ಷಯ್ ಕುಮಾರ್ ಅವರು ಸಾಲು ಸಾಲು ಸಿನಿಮಾಗಳು ಸೋಲು ಕಂಡವು. ಇದರಿಂದ ಅಕ್ಷಯ್ ಅವರು ಚಿಂತೆಗೆ ಒಳಗಾದರು. ಇನ್ನು ಭಾರತದಲ್ಲಿ ತಮಗೆ ಉಳಿಗಾಲ ಇಲ್ಲ ಎಂದು ಅವರು ಭಾವಿಸಿದರು. ಈ ಕಾರಣಕ್ಕೆ ಅವರು ಭಾರತ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಂಡರು. ‘ಕೆನಡಾದಲ್ಲಿ ನನ್ನ ಗೆಳೆಯ ಇದ್ದಾನೆ. ಆತ ಅಲ್ಲಿಗೆ ಬಂದು ಕೆಲಸ ಮಾಡುವಂತೆ ಹೇಳಿದ. ಹೀಗಾಗಿ ನಾನು ಅಲ್ಲಿನ ಪೌರತ್ವಕ್ಕೆ ಕೋರಿ ಅರ್ಜು ಸಲ್ಲಿಸಿದೆ ಮತ್ತು ನನಗೆ ಅಲ್ಲಿನ ಪೌರತ್ವ ಸಿಕ್ಕಿತು. ನನ್ನ ಎರಡು ಸಿನಿಮಾಗಳು ರಿಲೀಸ್​ಗೆ ರೆಡಿ ಇದ್ದವು. ಅವೆರಡೂ ಸೂಪರ್ ಹಿಟ್ ಆಯಿತು. ಬಳಿಕ ನನಗೆ ಸಾಕಷ್ಟು ಸಿನಿಮಾ ಆಫರ್ ಬಂತು. ನಾನು ಕೆನಡಾ ಪೌರತ್ವ ಹೊಂದಿದ್ದೇನೆ ಅನ್ನೋದನ್ನೇ ಮರೆತಿದ್ದೆ’ ಎಂಬುದಾಗಿ ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಕಪಾಳಕ್ಕೆ ಹೊಡೆದವರಿಗೆ 10 ಲಕ್ಷ ರು: ಬಹುಮಾನ ಘೋಷಿಸಿದ ಹಿಂದೂಪರ ಸಂಘಟನೆ

ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಮೊದಲಾದವರು ನಟಿಸಿರುವ ಈ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿದೆ. ಅಕ್ಷಯ್ ಕುಮಾರ್ ಅವರು ಈ ಚಿತ್ರದಲ್ಲಿ ಶಿವನ ಪಾತ್ರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.