ಭಾರತೀಯ ಚಿತ್ರರಂಗದಲ್ಲಿ ದಣಿವರಿಯದ ನಟ ಅಕ್ಷಯ್ ಕುಮಾರ್ ಅವರು ಸಿನಿಮಾ ಸಲುವಾಗಿ ಸದಾ ಕಾಲ ಬ್ಯುಸಿ ಆಗಿರುತ್ತಾರೆ. ಸಮಯ ಪಾಲನೆಯಲ್ಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ. ಆ ಕಾರಣಕ್ಕಾಗಿ ಅವರು ಬೇಗ ಬೇಗ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ. ಪರಿಣಾಮವಾಗಿ ಅವರ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಬಿಡುಗಡೆ ಆಗುತ್ತವೆ. ಇತ್ತೀಚೆಗಷ್ಟೇ ‘ರಾಮ್ ಸೇತು’ ಸಿನಿಮಾದ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಅದರ ಬೆನ್ನಲೇ ಅಕ್ಷಯ್ ಕುಮಾರ್ ಅವರು ‘ಓಹ್ ಮೈ ಗಾಡ್ 2’ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.
2012ರಲ್ಲಿ ತೆರೆಕಂಡ ‘ಓಹ್ ಮೈ ಗಾಡ್’ ಚಿತ್ರ ಸೂಪರ್ ಹಿಟ್ ಆಗಿತ್ತು. ಅದರ ಸೀಕ್ವೆಲ್ ಆಗಿ ‘ಓಹ್ ಮೈ ಗಾಡ್ 2’ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಪರೇಶ್ ರಾವಲ್, ಅಕ್ಷಯ್ ಕುಮಾರ್, ಯಾಮಿ ಗೌತಮ್ ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಕೆಲವು ದೃಶ್ಯಗಳಿಗೆ ಶೂಟಿಂಗ್ ಮಾಡಲಾಗಿದೆ. ಅಕ್ಷಯ್ ಕುಮಾರ್ ಅವರು ಈಗ ಶೂಟಿಂಗ್ ಸೆಟ್ ಸೇರಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಅವರು ಫಸ್ಟ್ಲುಕ್ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಎರಡು ಪೋಸ್ಟರ್ಗಳನ್ನು ಅಕ್ಷಯ್ ಕುಮಾರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದಿಯೋಗಿ ರೀತಿಯಲ್ಲಿ ಅವರು ವೇಷ ಧರಿಸಿದ್ದು, ಅವರ ಎದುರು ಅಸಹಾಯಕನಾಗಿ ಕುಳಿತಿರುವ ಬಾಲಕನ ಚಿತ್ರ ಇದೆ. ಇನ್ನೊಂದು ಪೋಸ್ಟರ್ನಲ್ಲಿ ಶಿವ ಯಾರನ್ನೋ ಕೈ ಹಿಡಿದುಕೊಂಡು ಮುನ್ನಡೆಸುತ್ತಿರುವುದು ಹೈಲೈಟ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
‘ಓಹ್ ಮೈ ಗಾಡ್ 2’ ಚಿತ್ರಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಸಮಾಜದ ಒಂದು ಬಹುಮುಖ್ಯ ವಿಷಯದ ಮೇಲೆ ಬೆಳಕು ಚೆಲ್ಲುವ ನಮ್ಮ ಪ್ರಾಮಾಣಿಕ ಪ್ರಯತ್ನವಿದು. ಈ ಪಯಣದಲ್ಲಿ ಆದಿಯೋಗಿಯ ಆಶೀರ್ವಾದ ನಮ್ಮ ಮೇಲಿರಲಿ. ಹರ ಹರ ಮಹದೇವ್’ ಎಂದು ಅಕ್ಷಯ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
‘कर्ता करे न कर सके शिव करे सो होय ..’ ??
Need your blessings and wishes for #OMG2, our honest and humble attempt to reflect on an important social issue. May the eternal energy of Adiyogi bless us through this journey. हर हर महादेव@TripathiiPankaj @yamigautam @AmitBrai pic.twitter.com/VgRZMVzoDy— Akshay Kumar (@akshaykumar) October 23, 2021
ಇದಲ್ಲದೆ, ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನ.5ರಂದು ವಿಶ್ವಾದ್ಯಂತ ಆ ಸಿನಿಮಾ ತೆರೆ ಕಾಣಲಿದೆ. ‘ಸೂರ್ಯವಂಶಿ’ ಚಿತ್ರಕ್ಕೆ ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದು, ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ. ಅಜಯ್ ದೇವಗನ್, ರಣವೀರ್ ಸಿಂಗ್ ಕೂಡ ಅಭಿನಯಿಸಿದ್ದಾರೆ.
ಇದನ್ನೂ ಓದಿ:
‘ತಪ್ಪಾಗಿ ಈ ಡ್ಯಾನ್ಸ್ ಮಾಡಿದ್ರೆ ನಿಮ್ಮ ಭವಿಷ್ಯಕ್ಕೆ ತೊಂದರೆ ಆಗಬಹುದು’: ಅಕ್ಷಯ್ ಕುಮಾರ್ ವಾರ್ನಿಂಗ್
ಸೈನಿಕರ ಬಗ್ಗೆ ಅಕ್ಷಯ್ ಕುಮಾರ್ ಹೊಸ ಸಿನಿಮಾ; ಪೋಸ್ಟರ್ನಲ್ಲಿ ತಪ್ಪು ಕಂಡುಹಿಡಿದ ಮಾಜಿ ಸೇನಾಧಿಕಾರಿ