ಪಹಲ್ಗಾಮ್ ಉಗ್ರರ ದಾಳಿ; ಶಿವಮೊಗ್ಗದ ಮಂಜುನಾಥ್ ಪತ್ನಿ ಮಾತು ಕೇಳಿ ರವೀನಾ ಟಂಡನ್ ರಕ್ತ ಕೊತ ಕೊತ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಜನರು ಮೃತಪಟ್ಟಿದ್ದು, ಇದರಲ್ಲಿ ಕರ್ನಾಟಕದ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ. ಬಾಲಿವುಡ್ ನಟರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ಅನೇಕ ಕನ್ನಡ ಸೆಲೆಬ್ರಿಟಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ ಎಂಬುದು ಗಮನಾರ್ಹ. ಮಂಜುನಾಥ್ ಅವರ ಪತ್ನಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ರವೀನಾ ಶಾಕ್ ಹೊರಹಾಕಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿ; ಶಿವಮೊಗ್ಗದ ಮಂಜುನಾಥ್ ಪತ್ನಿ ಮಾತು ಕೇಳಿ ರವೀನಾ ಟಂಡನ್ ರಕ್ತ ಕೊತ ಕೊತ
ಮಂಜುನಾಥ್ ಕುಟುಂಬ-ರವೀನಾ

Updated on: Apr 23, 2025 | 7:11 AM

ಜಮ್ಮು-ಕಾಶ್ಮೀರದ ಪಹಲ್ಗಾಮ್​​ನಲ್ಲಿ (Pahalgam) ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ 28 ಜನರು ಮೃತಪಟ್ಟಿದ್ದಾರೆ. ಕರ್ನಾಟಕದ ಇಬ್ಬರು ಮೃತಪಟ್ಟ ಬಗ್ಗೆ ವರದಿ ಆಗಿದೆ. ಬೆಂಗಳೂರಿನ ಭರತ್ ಭೂಷಣ್ ಹಾಗೂ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. 28 ಜನರ ಸಾವಿಗೆ ಚಿತ್ರರಂಗ ಕೂಡ ಸಂತಾಪ ಸೂಚಿಸಿದೆ. ಶಿವಮೊಗ್ಗ ಮಂಜುನಾಥ್ ಸಾವಿನ ಬಗ್ಗೆ ಮಾಡಿರೋ ಟ್ವೀಟ್​ನ ರೀಟ್ವೀಟ್ ಮಾಡಿಕೊಂಡಿರೋ ರವೀನಾ ಟಂಡನ್ ಶಾಕ್ ಹೊರಹಾಕಿದ್ದಾರೆ. ಅಲ್ಲದೆ, ಇಡೀ ಬಾಲಿವುಡ್ ಈ ಹೇಯ ಕೃತ್ಯದ ಬಗ್ಗೆ ಧ್ವನಿ ಎತ್ತಿದೆ.

ಮಂಜುನಾಥ್ ಅವರನ್ನು ಹತ್ಯೆ ಮಾಡುವಾಗ ಅವರ ಪತ್ನಿ ತಮ್ಮನ್ನೂ ಕೊಲ್ಲುವಂತೆ ಕೇಳಿಕೊಂಡಿದ್ದರು. ಆದರೆ, ಅವರನ್ನು ಕೊಲ್ಲದೇ ಉಗ್ರರು ‘ಹೋಗಿ ಮೋದಿಗೆ ಹೇಳು’ ಎಂದಿದ್ದರಂತೆ. ಇದನ್ನು ಅಳುತ್ತಲೇ ಮಾಧ್ಯಮಗಳ ಮುಂದೆ ಮಂಜುನಾಥ್ ಪತ್ನಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾಡಿರೋ ಟ್ವೀಟ್​ನ ರವೀನಾ ರೀ ಟ್ವೀಟ್ ಮಾಡಿದ್ದಾರೆ. ‘ಓಂ ಶಾಂತಿ. ನನ್ನ ಕಡೆಯಿಂದ ಸಂತಾಪ ಸೂಚಿಸುತ್ತೇನೆ. ಆಘಾತ ಮತ್ತು ಕೋಪ ಬರುತ್ತಿದೆ. ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ. ನಾವೆಲ್ಲರೂ ಆಂತರಿಕ ಜಗಳವನ್ನು ಬಿಟ್ಟು, ಒಂದಾಗಿ ನಿಜವಾದ ಶತ್ರುವನ್ನು ಅರಿತುಕೊಳ್ಳುವ ಸಮಯ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
ಮಹೇಶ್ ಬಾಬುಗೆ ಸಂಕಷ್ಟ; ಖ್ಯಾತ ನಟನಿಗೆ ಬಂತು ಇಡಿ ನೋಟಿಸ್
ಶ್ರೀದೇವಿನ ಕನ್ನಡಕ್ಕೆ ತರಲು ಹೋಗಿದ್ದ ರವಿಚಂದ್ರನ್; ಆಮೇಲೆ ಆಗಿದ್ದೇನು?
ಚಾಕು ಇರಿತ ಪ್ರಕರಣ ನಡೆದ 3 ತಿಂಗಳಿಗೆ ಹೊಸ ಮನೆ ಖರೀದಿಸಿದ ಸೈಫ್ ಅಲಿ ಖಾನ್
‘ನಾನು ಮಾತ್ರ ಅಲ್ಲಾರೀ’; ಸ್ಟಾರ್ ಕಲಾವಿದರ ಡ್ರಗ್ಸ್ ಪುರಾಣ ಬಿಚ್ಚಿಟ್ಟ ಶೈನ್

ಸೋನು ಸೂದ್ ಅವರು ಈ ಕೃತ್ಯದ ಬಗ್ಗೆ ಟ್ವೀಟ್ ಮಾಡಿದ್ದು, ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ನಾಗರಿಕ ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ. ಈ ಹೇಯ ಕೃತ್ಯವು ಸ್ವೀಕಾರಾರ್ಹವಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ವಿವೇಕ್ ಒಬೆರಾಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಕನ್ನಡದ ಬಹುತೇಕ ದೊಡ್ಡ ಸೆಲೆಬ್ರಿಟಿಗಳು ಈ ಬಗ್ಗೆ ಮೌನವಹಿಸಿದ್ದಾರೆ. ಈ ಬಗ್ಗೆ ಅವರುಗಳು ಯಾವುದೇ ಟ್ವೀಟ್ ಆಗಲಿ, ಪೋಸ್ಟ್ ಆಗಲಿ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.