ಭಯೋತ್ಪಾದಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು ಸೇರಿಸಿದ ಪಾಕಿಸ್ತಾನ ಸರ್ಕಾರ​?

ಬಲೋಚಿಸ್ತಾನ್ ಗೃಹ ಇಲಾಖೆ ಹೊರಡಿಸಿದೆ ಎನ್ನಲಾದ ನೋಟಿಸ್​​ನ ಪ್ರತಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ ಆ ನೋಟಿಸ್​​ನ ಸತ್ಯಾಸತ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ಸುದ್ದಿ ಎಲ್ಲೆಡೆ ಹಬ್ಬಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಭಯೋತ್ಪಾದಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು ಸೇರಿಸಿದ ಪಾಕಿಸ್ತಾನ ಸರ್ಕಾರ​?
Salman Khan

Updated on: Oct 26, 2025 | 9:42 PM

ನಟ ಸಲ್ಮಾನ್ ಖಾನ್ (Pakistan) ಅವರಿಗೆ ವಿಶ್ವಾದ್ಯಂತ ಖ್ಯಾತಿ ಇದೆ. ಪಾಕಿಸ್ತಾನದಲ್ಲಿ ಕೂಡ ಅವರಿಗೆ ಅಭಿಮಾನಿಗಳು ಇದ್ದಾರೆ. ಆದರೆ ಪಾಕಿಸ್ತಾನದಿಂದಲೇ ಒಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಪಾಕಿಸ್ತಾನ ಸರ್ಕಾರವು ಸಲ್ಮಾನ್ ಖಾನ್ ಅವರ ಹೆಸರನ್ನು ಭಯೋತ್ಪಾದಕರ (Terrorist) ಪಟ್ಟಿಗೆ ಸೇರಿಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಬಲೋಚಿಸ್ತಾನ್ (Balochistan) ಬಗ್ಗೆ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ ಆಗಿದೆ. ಅದೇನೇ ಇದ್ದರೂ, ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿರುವುದು ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.

ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾಧ್​​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆಗ ಅವರು ಭಾರತದ ಸಿನಿಮಾಗಳ ಬಗ್ಗೆ ಮಾತನಾಡುವಾಗ ಪಾಕಿಸ್ತಾನದ ಬಗ್ಗೆ ಪ್ರಸ್​ತಾಪಿಸಿದರು. ‘ಈಗ ಸೌದಿ ಅರೇಬಿಯಾದಲ್ಲಿ ಹಿಂದಿ ಸಿನಿಮಾ ಬಿಡುಗಡೆ ಮಾಡಿದರೆ ಸೂಪರ್ ಹಿಟ್ ಆಗುತ್ತದೆ. ತಮಿಳು, ತೆಲುಗು, ಮಲಯಾಳಂ ಸಿನಿಮಾ ಬಿಡುಗಡೆ ಮಾಡಿದರೆ ನೂರಾರು ಕೋಟಿ ಕಲೆಕ್ಷನ್ ಮಾಡುತ್ತದೆ’ ಎಂದು ಸಲ್ಮಾನ್ ಖಾನ್ ಹೇಳಿದರು.

‘ಯಾಕೆಂದರೆ ಅನೇಕ ದೇಶಗಳ ಜನರು ಇಲ್ಲಿಗೆ ಬಂದಿದ್ದಾರೆ. ಬಲೋಚಿಸ್ತಾನ್ ಜನರು ಇಲ್ಲಿ ಇದ್ದಾರೆ. ಆಫ್ಘಾನಿಸ್ತಾನದ ಜನರು ಇಲ್ಲಿ ಇದ್ದಾರೆ. ಪಾಕಿಸ್ತಾನದ ಜನರು ಕೂಡ ಇಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಲ್ಮಾನ್ ಖಾನ್ ಹೇಳಿದರು. ಪಾಕಿಸ್ತಾನ ಮತ್ತು ಬಲೋಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರಗಳು ಎಂಬ ಅರ್ಥದಲ್ಲಿ ಸಲ್ಮಾನ್ ಖಾನ್ ಅವರು ಮಾತನಾಡಿದ್ದರಿಂದ ಪಾಕ್ ಸರ್ಕಾರ ಗರಂ ಆಗಿದೆ.

ಬಲೋಚಿಸ್ತಾನ ಕೂಡ ಪಾಕಿಸ್ತಾನದ ಭಾಗ. ಆದರೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಬಲೋಚಿಸ್ತಾನದ ಕೆಲವರು ಬೇಡಿಕೆ ಇಟ್ಟಿದ್ದಾರೆ. ಅಂಥವರಿಗೆ ಬೆಂಬಲ ನೀಡುವವರನ್ನು ಕೂಡ 4ನೇ ಹಂತದ ಭಯೋತ್ಪಾದಕರು ಎಂದು ಪಾಕ್ ಸರ್ಕಾರ ಪರಿಗಣಿಸುತ್ತಿದೆ. ಸಲ್ಮಾನ್ ಖಾನ್ ಅವರನ್ನು ಕೂಡ ಅಂಥವರ ಪಟ್ಟಿಗೆ ಸೇರಿಸಲಾಗಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಸೋಶಿಯಲ್ ಮೀಡಿಯಾ ಹೊರತುಪಡಿಸಿ, ಪಾಕಿಸ್ತಾನದ ಸುದ್ದಿ ಸಂಸ್ಥೆಗಳು ಅಧಿಕೃತವಾಗಿ ಈ ಬಗ್ಗೆ ವರದಿ ಮಾಡಿಲ್ಲ.

ಇದನ್ನೂ ಓದಿ: ಬಲೂಚಿಸ್ತಾನದ ಬಗ್ಗೆ ಸಲ್ಮಾನ್ ಖಾನ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ದೊಡ್ಡ ಚರ್ಚೆ

ಸಲ್ಮಾನ್ ಖಾನ್ ಅವರ ಹೆಸರನ್ನು ಪಾಕಿಸ್ತಾನ ಸರ್ಕಾರವು ಭಯೋತ್ಪಾಕರ ಪಟ್ಟಿಗೆ ಸೇರಿಸಿದ್ದು ನಿಜವಾದರೆ ನಟನಿಗೆ ಒಂದಷ್ಟು ತೊಂದರೆ ಆಗಲಿದೆ. ಭಯೋತ್ಪಾದಕರ ಜೊತೆ ನಂಟು ಹೊಂದಿದ ವ್ಯಕ್ತಿ ಎಂದು ಸಲ್ಮಾನ್ ಖಾನ್ ಮೇಲೆ ಕಣ್ಣಿ ಇಡಲಾಗುತ್ತದೆ. ಹಾಗಾಗಿ ಅವರ ಚಲನವಲನದ ಮೇಲೆ ಕಣ್ಣು ಇಡಲಾಗುತ್ತದೆ. ದೇಶದೊಳಗೆ ಅವರ ಪ್ರವೇಶವನ್ನು ನಿಯಂತ್ರಿಸಲಾಗುತ್ತದೆ. ಇದರಿಂದ ಸಲ್ಮಾನ್ ಖಾನ್ ಹೆಸರಿಗೆ ಅಪಖ್ಯಾತಿ ಬರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.