ಕಂಠಪೂರ್ತಿ ಕುಡಿದು ಬಿಗ್ ಬಾಸ್ ನಡೆಸಿಕೊಟ್ಟ ಸಲ್ಮಾನ್ ಖಾನ್? ವಿಡಿಯೋ ವೈರಲ್
ಸಲ್ಮಾನ್ ಖಾನ್ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಕುಡಿದು ನಡೆಸಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಅಭಿಮಾನಿಗಳು ಇದರ ಹಿಂದಿನ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿ, ಸತತ ಪ್ರಯಾಣ, ಮತ್ತು ನಿದ್ದೆ ಇಲ್ಲದ ಕಾರಣ ಸಲ್ಮಾನ್ ಕಣ್ಣುಗಳು ಊದಿಕೊಂಡಿದ್ದವು. ಅವರ ಮುಖದಲ್ಲಿ ಕಾಣಿಸಿದ ಆಯಾಸವನ್ನು ಕುಡಿತ ಎಂದು ತಪ್ಪಾಗಿ ಅರ್ಥೈಸಲಾಗಿದೆ.

ನಟ ಸಲ್ಮಾನ್ ಖಾನ್ (Salman Khan) ಅವರು ‘ಬಿಗ್ ಬಾಸ್’ ಶೋ ನಡೆಸಿಕೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವೀಕೆಂಡ್ನಲ್ಲಿ ಅವರು ನಡೆಸಿಕೊಡೋ ಎಪಿಸೋಡ್ ತುಂಬಾನೇ ಖಡಕ್ ಆಗಿರುತ್ತದೆ. ಅವರು ಹಾಕಿಕೊಳ್ಳುವ ಡ್ರೆಸ್ ಕೂಡ ತುಂಬಾನೇ ಆಕರ್ಷಕವಾಗಿರುತ್ತದೆ. ಹೀಗಿರುವಾಗಲೇ ವೀಕೆಂಡ್ ಎಪಿಸೋಡ್ನ ಕಂಠಪೂರ್ತಿ ಕುಡಿದು ನಡೆಸಿಕೊಟ್ಟಿದ್ದಾರೆ ಎಂಬ ಆರೋಪ ಸಲ್ಮಾನ್ ಖಾನ್ ಅವರ ಮೇಲೆ ಬಂದಿದೆ.
ಸಲ್ಮಾನ್ ಖಾನ್ ಅವರ ಮ್ಯಾನರಿಸಮ್ ಬೇರೆಯದೇ ರೀತಿ ಇದೆ. ಅವರು ಏನೇ ಮಾಡಿದರೂ ಯಾರೂ ಪ್ರಶ್ನೆ ಮಾಡೋದಿಲ್ಲ. ಅವರು ಅನೇಕ ಬಾರಿ ಬಿಗ್ ಬಾಸ್ನಲ್ಲಿ ಸಿಟ್ಟಾಗಿದ್ದೂ ಇದೆ. ಈಗ ಸಲ್ಮಾನ್ ಖಾನ್ ಅವರು ವೀಕೆಂಡ್ ಎಪಿಸೋಡ್ ನಡೆಸಿಕೊಡುವಾಗ ಕುಡಿದವರಂತೆ ಕಂಡು ಬಂದರು. ಅವರ ಮುಖ ನೋಡಿದರೆ ಏನೋ ಸರಿ ಇಲ್ಲ ಎಂಬ ವಿಚಾರ ತಿಳಿಯುತ್ತಿತ್ತು.
ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಲ್ಮಾನ್ ಖಾನ್ ಅವರು ವೀಕೆಂಡ್ ಎಪಿಸೋಡ್ ನಡೆಸಿಕೊಡುವಾಗ ಹೇಗೆ ಕುಡಿದಿದ್ದಾರೆ ನೋಡಿ ಎಂದು ಅನೇಕರು ಟೀಕೆ ಮಾಡಿದ್ದರು. ಇದಕ್ಕೆ ಅವರ ಅಭಿಮಾನಿಗಳು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ಸಲ್ಮಾನ್ ಖಾನ್ ವಿಡಿಯೋ
View this post on Instagram
ಮಹಾಭಾರತ ಧಾರಾವಾಹಿಯಲ್ಲಿ ನಟಿಸಿದ್ದ ಪಂಕಜ್ ಧೀರ್ ಅವರು ನಿಧನ ಹೊಂದಿದ್ದರು. ಅವರ ಅಂತ್ಯ ಸಂಸ್ಕಾರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡರು. ಆ ಬಳಿಕ ರಿಯಾದ್ಗೆ ತೆರಳಿ ಕಾರ್ಯಕ್ರಮ ಒಂದರಲ್ಲಿ ಅವರು ಮಾತನಾಡಿದರು. ಈ ಈವೆಂಟ್ನಲ್ಲಿ ಸಲ್ಮಾನ್ ಖಾನ್ ಜೊತೆ ಆಮಿರ್, ಶಾರುಖ್ ಖಾನ್ ಕೂಡ ಇದ್ದರು. ಇದಾದ ಬಳಿಕ ಅವರು ಭಾರತಕ್ಕೆ ಮರಳಿ ಹೊಸ ಸಿನಿಮಾದ ಶೂಟ್ ಅಲ್ಲಿ ಭಾಗಿ ಆದರು. ಆ ಬಳಿಕ ವೀಕೆಂಡ್ ಕಾ ವಾರ್ ಎಪಿಸೋಡ್ಗೆ ಬಂದಿದ್ದರು.
ಇದನ್ನೂ ಓದಿ: ಬಲೂಚಿಸ್ತಾನದ ಬಗ್ಗೆ ಸಲ್ಮಾನ್ ಖಾನ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ದೊಡ್ಡ ಚರ್ಚೆ
ಈ ಎಲ್ಲಾ ಕಾರಣದಿಂದ ಸಲ್ಮಾನ್ ಖಾನ್ಗೆ ನಿದ್ದೆ ಸರಿಯಾಗಿ ಆಗಿಲ್ಲ. ಈ ಕಾರಣದಿಂದಲೇ ಅವರ ಕಣ್ಣುಗಳು ಊದಿಕೊಂಡಿದ್ದವು. ನಿದ್ದೆ ಇಲ್ಲದ ಕಾರಣ ಸರಿಯಾಗಿ ನಿಲ್ಲಲು ಅವರಿಗೆ ಸಾಧ್ಯ ಆಗುತ್ತಾ ಇರಲಿಲ್ಲ. ಇದನ್ನು ಕೆಲವರು ತಪ್ಪಾಗಿ ಭಾವಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:48 am, Thu, 23 October 25








