
ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಗ್ಗೆ ಎಲ್ಲ ಕಡೆಗಳಲ್ಲಿ ಚರ್ಚೆ ಆಗುತ್ತಿದೆ. ಪಾಕಿಸ್ತಾನದಲ್ಲಿ ಈ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಪಾಕ್ ಜನರು ಬೇರೆ ದೇಶಗಳಲ್ಲಿ ಹಾಗೂ ಪೈರಸಿ ಮೂಲಕ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ‘ಧುರಂಧರ್’ (Dhurandhar) ಹೇಗಿದೆ ಎಂದು ಪಾಕ್ ಪ್ರೇಕ್ಷಕರು ವಿಮರ್ಶೆ ನೀಡುತ್ತಿದ್ದಾರೆ. ಅಂಥ ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ. ಈ ಸಿನಿಮಾದಲ್ಲಿ ಯಾವೆಲ್ಲ ತಪ್ಪುಗಳು ಇವೆ ಎಂಬುದರ ಬಗ್ಗೆ ಪಾಕ್ (Pakistan) ಪ್ರಜೆಗಳಿಬ್ಬರು ಮಾತನಾಡಿದ ವಿಡಿಯೋ ಈಗ ವೈರಲ್ ಆಗಿದೆ.
‘ಧುರಂಧರ್ ಒಂದು ಓವರ್ ರೇಟೆಡ್ ಸಿನಿಮಾ. ಈ ಚಿತ್ರದಲ್ಲಿ ಒಂದು ಡೈಲಾಗ್ ಇದೆ. ಯಾರು ಲಿಯಾರಿ ನಿಯಂತ್ರಣ ಮಾಡುತ್ತಾರೋ ಅವರು ಕರಾಚಿ ನಿಯಂತ್ರಿಸುತ್ತಾರೆ. ಯಾರು ಕರಾಚಿ ನಿಯಂತ್ರಿಸುತ್ತಾರೋ ಅವರು ಪಾಕಿಸ್ತಾನವನ್ನೇ ನಿಯಂತ್ರಿಸುತ್ತಾರೆ. ನಮಗೆ ಈ ಡೈಲಾಗ್ ಸಖತ್ ಫನ್ನಿ ಎನಿಸಿತು. ಕರಾಚಿಯು ಮೂಲ ನಿವಾಸಿಗಳ ನಗರ ಅಲ್ಲ. ಅದು ಅನಾಥರ ನಗರ’ ಎಂದು ಪ್ರೇಕ್ಷಕರು ಹೇಳಿದ್ದಾರೆ.
‘ನಮ್ಮ ಕುಟುಂಬದ ಮೂಲ ಇರುವುದು ಲಿಯಾರಿಯಲ್ಲಿ. ಅಲ್ಲಿ ಗ್ಯಾಂಗ್ ವಾರ್ ಇದ್ದಿದ್ದು ಮತ್ತು ಇರುವುದು ನಿಜ. ಆದರೆ ಅದು ನೆರೆಹೊರೆಯವರ ಸಣ್ಣ ಗ್ಯಾಂಗ್ ವಾರ್ ಅಷ್ಟೇ. ಮಿನಿ ಸ್ಕರ್ಟ್ ಧರಿಸಿ ಲಿಯಾರಿಯಲ್ಲಿ ಸಿನಿಮಾದ ಹೀರೋಯಿನ್ ಓಡಾಡುತ್ತಾಳೆ. ಅದು ಲಿಯಾರಿಯಲ್ಲಿ ಸಾಧ್ಯವೇ ಇಲ್ಲ. ಹಾಗೆ ಒಬ್ಬಳೇ ಮಹಿಳೆ ಮಿನಿ ಸ್ಕರ್ಟ್ ಧರಿಸಿ ಸುತ್ತಾಡೋಕೆ ಆಗಲ್ಲ’ ಎಂದ ಕೂಡ ಅವರು ಹೇಳಿದ್ದಾರೆ.
‘ಒಂದು ಹಾಡಿನಲ್ಲಿ ರೇವ್ ಪಾರ್ಟಿ ನಡೆಯೋದು ತೋರಿಸಿದ್ದಾರೆ. ಅಲ್ಲಿ ಸೂಚನಾ ಫಲಕಗಳು ಉರ್ದು ಭಾಷೆಯಲ್ಲಿ ಕಾಣಿಸಿದೆ. ಆದರೆ ನಿಜವಾಗಿಯೂ ಇಂಗ್ಲಿಷ್ ಸೂಚನಾ ಫಲಕಗಳು ಇರುತ್ತವೆ’ ಎಂದು ಈ ಪ್ರೇಕ್ಷಕರಿಬ್ಬರು ತಕರಾರು ತೆಗೆದಿದ್ದಾರೆ. ಅಲ್ಲದೇ, ರಣವೀರ್ ಸಿಂಗ್ ಧರಿಸಿ ಕಾಸ್ಟ್ಯೂಮ್ ಕೂಡ ಸೂಕ್ತವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಮಗೆ ರಸ್ತೆ ಇಲ್ಲ, 500 ಕೋಟಿ ರೂ. ಕೊಡಿ: ‘ಧುರಂಧರ್ 2’ ತಂಡಕ್ಕೆ ಪಾಕಿಸ್ತಾನಿಗಳ ಮನವಿ
‘ಪಾಕಿಸ್ತಾನದ ಮಿನಿಸ್ಟರ್ ಮಗಳ ಜೊತೆ ಹೀರೋ ಮದುವೆ ಆಗುತ್ತಾನೆ. ಪಾಕಿಸ್ತಾನದಲ್ಲಿ ಹಾಗೆಲ್ಲ ಆಗಲು ಸಾಧ್ಯವಿಲ್ಲ. ದೊಡ್ಡ ಬಂಗಲೆಯಲ್ಲಿ ಇರುವ ಆಕೆ ಮದುವೆ ಬಳಿಕ ಚಿಕ್ಕ ಮನೆಗೆ ಹೋಗೋಕೆ ಆಗಲ್ಲ’ ಎಂದು ಪ್ರೇಕ್ಷಕರಿಬ್ಬರು ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಪಾಕಿಸ್ತಾನದ ಪ್ರೇಕ್ಷಕರಿಗೆ ‘ಧುರಂಧರ್’ ಸಿನಿಮಾದಲ್ಲಿ ಇಂಥ ಹಲವು ತಪ್ಪುಗಳು ಕಾಣಿಸಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.