ಪಂಕಜ್ ತ್ರಿಪಾಠಿ ಅವರು ‘ಒಎಂಜಿ 2’ (OMG 2) ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಕೂಡ ಪ್ರಮುಖ ಪಾತ್ರ ಒಂದರಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈಗ ಪಂಕಜ್ ತ್ರಿಪಾಠಿ (Pankaj Tripathi) ಅವರು ಒಂದು ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಇನ್ನುಮುಂದೆ ತೆರೆಮೇಲೆ ಯಾವುದೇ ನಿಂದನೀಯ ಶಬ್ದ ಬಳಕೆ ಮಾಡುವುದಿಲ್ಲವಂತೆ. ಕೆಟ್ಟ ಶಬ್ದಗಳನ್ನು ಬಳಕೆ ಮಾಡದೇ ಬೇರೆ ರೀತಿಯಲ್ಲಿ ದೃಶ್ಯವನ್ನು ಜನರ ಮುಂದಿಡುವ ನಿರ್ಧಾರಕ್ಕೆ ಪಂಕಜ್ ತ್ರಿಪಾಠಿ ಬಂದಿದ್ದಾರೆ. ಅವರ ಈ ನಿರ್ಧಾರದಿಂದ ಅನೇಕರಿಗೆ ಬೇಸರ ಆಗಿದೆ.
‘ಮಿರ್ಜಾಪುರ್’ ಹಾಗೂ ‘ಮಿರ್ಜಾಪುರ್ 2’ ವೆಬ್ ಸೀರಿಸ್ಗಳಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಈ ಸರಣಿಯಲ್ಲಿ ಪಂಕಜ್ ಅವರು ಅಖಂಡಾನಂದ್ ತ್ರಿಪಾಠಿ (ಖಾಲೀಂ ಭಯ್ಯಾ) ಹೆಸರಿನ ಪಾತ್ರ ಮಾಡಿದ್ದಾರೆ. ಒಟಿಟಿಗೆ ಯಾವುದೇ ಸೆನ್ಸಾರ್ ಇಲ್ಲ. ಈ ಕಾರಣದಿಂದ ಈ ಸೀರಿಸ್ನಲ್ಲಿ ಅನೇಕ ನಿಂದನೀಯ, ಕೆಟ್ಟ ಶಬ್ದಗಳ ಬಳಕೆ ಆಗಿತ್ತು. ಆದರೆ, ಇನ್ನುಮುಂದೆ ಈ ರೀತಿಯ ಶಬ್ದ ಬಳಕೆ ಮಾಡದಿರಲು ಪಂಕಜ್ ನಿರ್ಧರಿಸಿದ್ದಾರೆ.
ಇದನ್ನೂ ಓದಿ: 99ನೇ ವಯಸ್ಸಿಗೆ ಪಂಕಜ್ ತ್ರಿಪಾಠಿ ತಂದೆ ನಿಧನ; ‘ಒಎಂಜಿ 2’ ಗೆಲುವಿನ ನಡುವೆ ಆವರಿಸಿತು ಶೋಕ
ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ಕೆಲವು ಪಾತ್ರಗಳ ಕಾರಣದಿಂದ ನಾನು ನಾಲ್ಕೈದು ಬಾರಿ ಆ ರೀತಿಯ (ನಿಂದನೀಯ) ಶಬ್ದಗಳ ಬಳಕೆ ಮಾಡಬೇಕಾಯಿತು. ಪಾತ್ರ ಆ ರೀತಿಯದ್ದನ್ನು ಕೇಳಿದಾಗ ನಾವು ಹಾಗೆ ಹೇಳಬೇಕಾಗುತ್ತದೆ’ ಎಂದಿದ್ದಾರೆ ಅವರು. ಆದರೆ, ಇನ್ನುಮುಂದೆ ಅವರು ಈ ರೀತಿಯ ಶಬ್ದ ಬಳಕೆ ಮಾಡದಿರಲು ನಿರ್ಧರಿಸಿದ್ದಾರೆ. ‘ಪಾತ್ರಕ್ಕೆ ಆ ರೀತಿಯ ಶಬ್ದಗಳು ಅಗತ್ಯವಾಗಿದ್ದರೂ ನಾನು ಅಂಥ ಪದ ಬಳಕೆ ಮಾಡದಿರಲು ನಿರ್ಧರಿಸಿದ್ದೇನೆ. ಈ ರೀತಿಯದ್ದನ್ನು ಹೇಳಲು ನಿರ್ದೇಶಕರು ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕು. ಚಲನಚಿತ್ರ ನಿರ್ಮಾಣ ಸೃಜನಾತ್ಮಕ ಪ್ರಕ್ರಿಯೆ. ಹೀಗಾಗಿ ಬೇರೆ ಏನನ್ನು ಮಾಡಬಹುದು ಎಂಬುದನ್ನು ಹುಡುಕಬೇಕು’ ಎಂದಿದ್ದಾರೆ ಅವರು.
ಇದನ್ನೂ ಓದಿ: ಅಕ್ಷಯ್ ಕುಮಾರ್ಗಿಂತ ಪಂಕಜ್ ತ್ರಿಪಾಠಿಗೆ ಹೆಚ್ಚು ಸಂಭಾವನೆ; ‘ಒಎಂಜಿ 2’ ಚಿತ್ರದ ಒಟ್ಟು ಬಜೆಟ್ ಎಷ್ಟು?
‘ಮಿರ್ಜಾಪುರ್’ ಹಾಗೂ ‘ಮಿರ್ಜಾಪುರ್ 2’ ಸೀರಿಸ್ಗಳು ಬಂದಿವೆ. ಈ ಸೀರಿಸ್ನಲ್ಲಿ ಅಖಂಡಾನಂದ್ ತ್ರಿಪಾಠಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಅವರಿಗೆ ಎಲ್ಲರೂ ಖಾಲೀಂ ಭಯ್ಯಾ ಎಂದೇ ಕರೆಯುತ್ತಾರೆ. ಈ ಖಾಲೀಂ ನಡೆಸುವ ಅಕ್ರಮ ದಂಧೆಗಳಿಗೆ ಲೆಕ್ಕವೇ ಇಲ್ಲ. ಆತ ಬಳಕೆ ಮಾಡುವ ಶಬ್ದಗಳು ಕೂಡ ಗಮನ ಸೆಳೆದಿದ್ದವು. ‘ಮಿರ್ಜಾಪುರ್ 3’ ಕೂಡ ಬರಲಿದೆ. ಅಲ್ಲಿ ಈ ರೀತಿಯ ಶಬ್ದಗಳ ಬಳಕೆಯೇ ಆಗದಿದ್ದರೆ ಸೀರಿಸ್ ಹೇಗೆ ಹಿಟ್ ಆಗುತ್ತದೆ ಎಂಬುದು ಅನೇಕರ ಪ್ರಶ್ನೆ. ‘ಮಿಮಿ’ ಸಿನಿಮಾದ ನಟನೆಗೆ ಪಂಕಜ್ ಅವರಿಗೆ ‘ಅತ್ಯುತ್ತಮ ಪೋಷಕ ನಟ’ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.