‘ಈಗ ಅವರು ಹಿಂಬದಿಯ ಫೋಟೋ ತೆಗೆಯಲ್ಲ’: ಜಾನ್ವಿ ಕಪೂರ್​ ನೇರಮಾತು

|

Updated on: Jul 24, 2024 | 10:53 PM

ನಟಿ ಜಾನ್ವಿ ಕಪೂರ್​ ಅವರ ಫೋಟೋಗಳು ಆಗಾಗ ವೈರಲ್​ ಆಗುತ್ತವೆ. ಪಾಪರಾಜಿಗಳು ಫೋಟೋ ಕ್ಲಿಕ್ಕಿಸುವ ರೀತಿಯ ಬಗ್ಗೆ ಜಾನ್ವಿ ಕಪೂರ್​ ತಕರಾರು ತೆಗೆದಿದ್ದರು. ಹಿಂಬದಿಯಿಂದ ಫೋಟೋ ತೆಗೆಯುವುದನ್ನು ಅವರು ವಿರೋಧಿಸಿದ್ದರು. ನಟಿಯ ಮಾತಿಗೆ ಬೆಲೆ ಕೊಟ್ಟು ಪಾಪರಾಜಿಗಳು ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆ ಬಗ್ಗೆ ಜಾನ್ವಿ ಮಾತಾಡಿದ್ದಾರೆ.

‘ಈಗ ಅವರು ಹಿಂಬದಿಯ ಫೋಟೋ ತೆಗೆಯಲ್ಲ’: ಜಾನ್ವಿ ಕಪೂರ್​ ನೇರಮಾತು
ಜಾನ್ವಿ ಕಪೂರ್​
Follow us on

ಪಾಪರಾಜಿಗಳಿಗೆ ನಟಿ ಜಾನ್ವಿ ಕಪೂರ್​ ಎಂದರೆ ತುಂಬ ಇಷ್ಟ. ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಎಲ್ಲಿಲ್ಲದ ಉತ್ಸಾಹ ತೋರಿಸುತ್ತಾರೆ. ಆದರೆ ಅಲ್ಲೊಂದು ಸಮಸ್ಯೆ ಇದೆ. ಕೆಲವು ಫೋಟೋಗ್ರಾಫರ್​ಗಳು ಸರಿಯಲ್ಲದ ರೀತಿಯಲ್ಲಿ ಫೋಟೋ ಕ್ಲಿಕ್ಕಿಸುತ್ತಾರೆ. ಈ ಬಗ್ಗೆ ಜಾನ್ವಿ ಕಪೂರ್​ ಅವರು ಎಚ್ಚರಿಕೆ ನೀಡಿದ್ದರು. ಅದರ ಪರಿಣಾಮವಾಗಿ ಒಂದಷ್ಟು ಬದಲಾವಣೆ ಆಗಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಬಗ್ಗೆ ಜಾನ್ವಿ ಕಪೂರ್ ಮಾತನಾಡಿದ್ದಾರೆ. ‘ಪಾಪರಾಜಿಗಳು ಈಗ ಹಿಂಬದಿಯ ಫೋಟೋ ತೆಗೆಯುವುದು ನಿಲ್ಲಿಸಿದ್ದಾರೆ’ ಎಂದು ಜಾನ್ವಿ ಹೇಳಿದ್ದಾರೆ.

ಜಾನ್ವಿ ಕಪೂರ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಒಂದಷ್ಟು ದಿನಗಳ ಹಿಂದೆ ಅವರು ‘ಮಿಸ್ಟರ್ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದ ಪ್ರಚಾರದ ವೇಳೆ ಪಾಪರಾಜಿಗಳಿಗೆ ಒಂದು ಸೂಚನೆ ನೀಡಿದ್ದರು. ತಪ್ಪಾದ ಆ್ಯಂಗಲ್​ನಿಂದ ಫೋಟೋ ಕ್ಲಿಕ್ಕಿಸಬೇಡಿ ಎಂದು ಜಾನ್ವಿ ತಾಕೀತು ಮಾಡಿದ್ದರು. ಅವರ ಮಾತಿಗೆ ಪಾಪರಾಜಿಗಳು ಬೆಲೆ ನೀಡಿದ್ದು, ತಮ್ಮ ಹಳೇ ಚಾಳಿಯನ್ನು ನಿಲ್ಲಿಸಿದ್ದಾರೆ. ಪಾಪರಾಜಿಗಳಲ್ಲಿ ಆಗಿರುವ ಈ ಬದಲಾವಣೆಯನ್ನು ಜಾನ್ವಿ ಗಮನಿಸಿದ್ದಾರೆ.

ಇದನ್ನೂ ಓದಿ: ಜಾನ್ವಿ ಕಪೂರ್​ಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿದ್ದನ್ನು ಒಪ್ಪಿಕೊಂಡ್ರಾ ಈ ಫೇಮಸ್​ ಡಾಕ್ಟರ್​?

‘ಹಿಂಬದಿಯ ಫೋಟೋ ಪೋಸ್ಟ್​ ಮಾಡಿ, ಇದು ಯಾರೆಂದು ಊಹಿಸಿ ಎಂದು ಪಾಪರಾಜಿಗಳು ಕ್ಯಾಪ್ಷನ್​ ನೀಡುತ್ತಿದ್ದರು. ಅದರಿಂದ ಅವರಿಗೆ ಹೆಚ್ಚು ಕ್ಲಿಕ್​ ಬರುತ್ತದೆ. ಆ ರೀತಿ ಕಾಣಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ. ಜನರು ನನ್ನನ್ನು ಹಾಗೆ ನೋಡುವುದು ನನಗೆ ಹಿಡಿಸಲ್ಲ’ ಎಂದಿದ್ದಾರೆ ಜಾನ್ವಿ ಕಪೂರ್​. ಸೋಶಿಯಲ್​ ಮೀಡಿಯಾದಲ್ಲಿ ಜಾನ್ವಿ ಕಪೂರ್​ ಅವರು ತುಂಬ ಆ್ಯಕ್ಟೀವ್​ ಆಗಿದ್ದಾರೆ. ಅನೇಕ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಜಾನ್ವಿ ಕಪೂರ್​ ನಟನೆಯ ‘ಉಲಜ್​​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್​ 2ರಂದು ಆ ಚಿತ್ರ ರಿಲೀಸ್​ ಆಗಲಿದೆ. ಖ್ಯಾತ ನಟಿ ಶ್ರೀದೇವಿ ಮತ್ತು ಯಶಸ್ವಿ ನಿರ್ಮಾಪಕ ಬೋನಿ ಕಪೂರ್​ ದಂಪತಿಯ ಮಗಳು ಜಾನ್ವಿ ಕಪೂರ್. ಹಾಗಾಗಿ ಅವರಿಗೆ ಅನೇಕ ಅವಕಾಶಗಳು ಸುಲಭವಾಗಿ ಸಿಕ್ಕವು. ಈಗ ಅವರಿಗೆ ಜನಪ್ರಿಯತೆ ಹೆಚ್ಚಿದೆ. ಆ ಜನಪ್ರಿಯತೆಯ ಬಲದ ಮೇಲೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ಅವಕಾಶ ಗಿಟ್ಟಿಸುತ್ತಿದ್ದಾರೆ. ‘ದೇವರ: ಪಾರ್ಟ್​ 1’ ಸಿನಿಮಾದಲ್ಲಿ ಅವರು ಜೂನಿಯರ್​ ಎನ್​ಟಿಆರ್​ ಜೊತೆ ನಟಿಸುತ್ತಿದ್ದಾರೆ. ಆ ಮೂಲಕ ಟಾಲಿವುಡ್​ಗೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.